PHOTOS

Tata Motors: ಟಾಟಾ ಮೋಟಾರ್ಸ್‌ನ ಪ್ರಮುಖ ಎಲೆಕ್ಟ್ರಿಕ್ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಣೆ!

Tata Motors EV offers: ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ಖರೀದಿಯ ಮೇಲೆ 10-30 ಸಾವಿರ ರೂ.ದಷ್ಟು ಆಫರ್ ನೀಡಲಾಗುತ್ತಿದೆ. ಪಂಚ್...

Advertisement
1/4
ಟಾಟಾ ನೆಕ್ಸಾನ್ EV
ಟಾಟಾ ನೆಕ್ಸಾನ್ EV

ಟಾಟಾ ಮೋಟಾರ್ಸ್‌ನ ಆಫರ್‌ ಪೈಕಿ ನೆಕ್ಸಾನ್ EV ಖರೀದಿಯ ಮೇಲೆ ಒಟ್ಟು 1.30 ಲಕ್ಷ ರೂ.ವರೆಗೆ ಆಫರ್ ನೀಡುತ್ತಿದೆ. ಇದರಲ್ಲಿ ಗ್ರಾಹಕರು 70 ಸಾವಿರ ರೂ.ವರೆಗೆ ಕ್ಯಾಶ್ ಡಿಸ್ಕೌಂಟ್ ಪಡೆಯಬಹುದು. ನೆಕ್ಸಾನ್ ಕಾರಿನ ಎಂಪವರ್ಡ್ ಪ್ಲಸ್ LR ಮತ್ತು ಎಂಪವರ್ಡ್ NR ಡಾರ್ಕ್ ಆವೃತ್ತಿಗಳ ಮೇಲೆ ಹೆಚ್ಚಿನ ಆಫರ್ ಲಭ್ಯವಿದ್ದು, ನೆಕ್ಸಾನ್ ಕಾರು ಎಕ್ಸ್ ಶೋರೂಂ ಪ್ರಕಾರ 14.49 ಲಕ್ಷ ರೂ.ನಿಂದ 19.49 ಲಕ್ಷ ರೂ. ಬೆಲೆ ಹೊಂದಿದೆ. ಈ ಹೊಸ EV ಕಾರಿನಲ್ಲಿ 30kWh ಮತ್ತು 40.5kWh ಬ್ಯಾಟರಿ ಆಯ್ಕೆಗಳಿದ್ದು, ಇವು ಪ್ರತಿ ಚಾರ್ಜ್‌ಗೆ 325 ರಿಂದ 456KM ಮೈಲೇಜ್ ನೀಡುತ್ತವೆ.

2/4
ಟಾಟಾ ಟಿಯಾಗೋ EV
ಟಾಟಾ ಟಿಯಾಗೋ EV

ನೆಕ್ಸಾನ್ EV ಬಳಿಕ ಟಾಟಾ ಕಂಪನಿಯು ಟಿಯಾಗೋ EV ಕಾರಿನ ಮೇಲೂ ಅತ್ಯುತ್ತಮ ಆಫರ್ ನೀಡಲಾಗುತ್ತಿದೆ. ಟಿಯಾಗೋ EV ಖರೀದಿಯ ಮೇಲೆ 10 ಸಾವಿರದಿಂದ 50 ಸಾವಿರ ರೂ.ವರೆಗೆ ಆಫರ್ ನೀಡಲಾಗುತ್ತಿದೆ. ಇದರಲ್ಲಿ ಗ್ರಾಹಕರು ಗ್ರೀನ್ ಬೋನಸ್ ಸಹ ಪಡೆಯಬಹುದು. ಇದು ಎಕ್ಸ್ ಶೋರೂಂ ಪ್ರಕಾರ 7.99 ಲಕ್ಷದಿಂದ 11.89 ಲಕ್ಷ ರೂ. ಬೆಲೆ ಹೊಂದಿದ್ದು, ಪ್ರತಿ ಚಾರ್ಜ್‌ಗೆ 315KM ಮೈಲೇಜ್ ನೀಡುತ್ತದೆ. 

3/4
19.2kWh & 24kWh
19.2kWh & 24kWh

ಸದ್ಯ ಮಾರುಕಟ್ಟೆಯಲ್ಲಿ ಟಿಯಾಗೋ ಕಾರು 19.2kWh & 24kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿನ ಬೇಸ್ ಆವೃತ್ತಿಗಳಿಗೆ ಕಡಿಮೆ ಆಫರ್ ನೀಡಲಾಗಿದೆ. ಅದರಂತೆ ಟಾಪ್ ಎಂಡ್ ಮಾದರಿಗಳ ಮೇಲೆ ಹೆಚ್ಚಿನ ಆಫರ್ ನೀಡಲಾಗುತ್ತಿದ್ದು, ಇದು ಆಕರ್ಷಕ ಫೀಚರ್ಸ್‌ಗಳೊಂದಿಗೆ ಉತ್ತಮ ಬೇಡಿಕೆ ಹೊಂದಿದೆ.

4/4
ಟಾಟಾ ಪಂಚ್ EV
ಟಾಟಾ ಪಂಚ್ EV

ಟಾಟಾ ಮೋಟಾರ್ಸ್ ಕಂಪನಿಯು ಪಂಚ್ ಎಲೆಕ್ಟ್ರಿಕ್ ಕಾರಿನ ಖರೀದಿಯ ಮೇಲೆ 10 ಸಾವಿರದಿಂದ 30 ಸಾವಿರ ರೂ.ದಷ್ಟು ಆಫರ್ ನೀಡಲಾಗುತ್ತಿದೆ. ಪಂಚ್ EV ಕಾರು ವಿವಿಧ ವೆರಿಯೆಂಟ್‌ಗಳೊಂದಿಗೆ ಲಭ್ಯವಿದ್ದು, ಇದು ಎಕ್ಸ್ ಶೋರೂಂ ಪ್ರಕಾರ 10.99 ಲಕ್ಷದಿಂದ 15.49 ಲಕ್ಷ ರೂ. ಬೆಲೆಯೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 421KM ಮೈಲೇಜ್ ನೀಡುತ್ತದೆ.





Read More