PHOTOS

Graha Dosha: ಪ್ರಾಣಿ ಸೇವೆಯಿಂದಲೂ ಸಿಗುತ್ತೆ ಗ್ರಹ ದೋಷದಿಂದ ಮುಕ್ತಿ

Graha Dosha: ಧಾರ್ಮಿಕ ನಂಬಿಕೆಗಳ ಪ್ರಕಾರ, ಪ್ರಾಣಿಗಳ ಸೇವೆ ಮಾಡುವುದರಿಂದಲೂ ಕೆಲವು ಗ್ರಹ ದೋಷಗಳಿಂದ ಪರಿಹಾರವನ್ನು ಪಡ...

Advertisement
1/8
ಗ್ರಹ ದೋಷ
ಗ್ರಹ ದೋಷ

ಗ್ರಹ ದೋಷ:  ಜ್ಯೋತಿಷ್ಯ ಶಾಸ್ತ್ರದಲ್ಲಿ, ಗ್ರಹ ದೋಷ ನಿವಾರಣೆಗೆ ಸಂಬಂಧಿಸಿದಂತೆ ಹಲವು ಪರಿಹಾರಗಳ ಬಗ್ಗೆ ಉಲ್ಲೇಖಿಸಲಾಗಿದೆ. 

2/8
ಪ್ರಾಣಿ ಸೇವೆ
ಪ್ರಾಣಿ ಸೇವೆ

ಪ್ರಾಣಿ ಸೇವೆ:  ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಪ್ರಾಣಿಗಳು ಮತ್ತು ಪಕ್ಷಿಗಳ ಸೇವೆಯನ್ನು ಮಾಡುವುದರಿಂದ ಕೆಲವು ಗ್ರಹಗ ದೋಷದಿಂದ ಪರಿಹಾರವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. 

3/8
ಪ್ರಾಣಿ ಸೇವೆಯಿಂದ ಧನಾತ್ಮಕ ಶಕ್ತಿ
ಪ್ರಾಣಿ ಸೇವೆಯಿಂದ ಧನಾತ್ಮಕ ಶಕ್ತಿ

ಪ್ರಾಣಿ ಸೇವೆಯಿಂದ ಧನಾತ್ಮಕ ಶಕ್ತಿ:  ಪ್ರಾಣಿಗಳ ಸೇವೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುವುದಲ್ಲದೆ ಅನೇಕ ಗ್ರಹದೋಷಗಳಿಂದ ಮುಕ್ತಿ ದೊರೆಯುತ್ತದೆ. ಮಾತ್ರವಲ್ಲ, ಪ್ರಾಣಿಗಳ ಸೇವೆಯು ಧನಾತ್ಮಕ ಶಕ್ತಿಯನ್ನು ತನ್ನತ್ತ ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ. 

4/8
ಬೀದಿ ನಾಯಿಗೆ ಆಹಾರ
ಬೀದಿ ನಾಯಿಗೆ ಆಹಾರ

ಬೀದಿ ನಾಯಿಗೆ ಆಹಾರ:  ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೀದಿ ನಾಯಿಗೆ ಆಹಾರ ನೀಡುವುದರಿಂದ ಗ್ರಹ ದೋಷಗಳಿಂದಾಗಿ ಉಂಟಾಗುವ ಕೆಲವು ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. 

5/8
ಶನಿ ದೋಷ ನಿವಾರಣೆಗೆ ಶ್ವಾನ ಸೇವೆ
ಶನಿ ದೋಷ ನಿವಾರಣೆಗೆ ಶ್ವಾನ ಸೇವೆ

ಶನಿ ದೋಷ ನಿವಾರಣೆಗೆ ಶ್ವಾನ ಸೇವೆ:  ಶ್ವಾನ ಸೇವೆ ಅದರಲ್ಲೂ ಕಪ್ಪಿ ನಾಯಿಗಳ ಸೇವೆ ಮಾಡುವುದರಿಂದ ಶನಿ ದೋಷದ ಪರಿಣಾಮವನ್ನು ಕಡಿಮೆ ಮಾಡಬಹುದು. ಜೊತೆಗೆ ಶನಿ ಮಹಾತ್ಮನ ಆಶೀರ್ವಾದವನ್ನೂ ಪಡೆಯಬಹುದು ಎನ್ನಲಾಗುತ್ತದೆ. 

6/8
ಲಕ್ಷ್ಮಿ ಅನುಗ್ರಹ
ಲಕ್ಷ್ಮಿ ಅನುಗ್ರಹ

ಲಕ್ಷ್ಮಿ ಅನುಗ್ರಹ:  ನಾಯಿಯು ಭಗವಾನ್ ಶಿವನ ಉಗ್ರ ರೂಪವಾದ ಭೈರವನ ವಾಹನ. ಮಾತ್ರವಲ್ಲ, ಭೈರವ ತಾಯಿ ಲಕ್ಷ್ಮೀದೇವಿಯ ರಕ್ಷಕನೂ ಹೌದು. ಹಾಗಾಗಿ, ನಾಯಿ ಸೇವೆ ಮಾಡುವುದರಿಂದ ಸಂಪತ್ತಿನ ಅಧಿದೇವತೆಯಾದ ತಾಯಿ ಲಕ್ಷ್ಮೀದೇವಿಯ ಆಶೀರ್ವಾದವನ್ನು ಪಡೆಯಬಹುದು ಎನ್ನಲಾಗುತ್ತದೆ. 

7/8
ಕೇತು ದೋಷ ನಿವಾರಣೆ
ಕೇತು ದೋಷ ನಿವಾರಣೆ

ಕೇತು ದೋಷ ನಿವಾರಣೆ:  ಬೀದಿ ನಾಯಿಗಳಿಗೆ ಆಹಾರ ನೀಡುವುದರಿಂದ ಕೇತು ದೋಷವನ್ನು ನಿವಾರಿಸಬಹುದು. ಜೊತೆಗೆ  ಜಾತಕದಲ್ಲಿ ಕೇತು ಗ್ರಹವನ್ನು ಬಳಪಡಿಸಬಹುದು ಎಂಬ ನಂಬಿಕೆಯಿದೆ. 

8/8
ಸೂಚನೆ
ಸೂಚನೆ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More