PHOTOS

Surya Grahan 2024: ವರ್ಷದ ಮೊದಲ ಸೂರ್ಯಗ್ರಹಣದಿಂದ ಈ 3 ರಾಶಿಯವರ ಬದುಕೇ ಬಂಗಾರ

Surya Grahan 2024: ಮೊನ್ನೆ ಮೊನ್ನೆಯಷ್ಟೇ ವರ್ಷದ ಮೊದಲ ಚಂದ್ರಗ್ರಹಣ ಮುಗಿದಿದೆ. ಇನ್ನೂ ಕೆಲವೇ ದಿನಗಳಲ್ಲಿ ಯುಗಾದಿ ಹಬ್ಬಕ್ಕೂ ಮೊದಲು ಈ ವರ್ಷದ ಮೊದಲ ಸೂರ್ಯಗ್ರ...

Advertisement
1/6
ಸೂರ್ಯಗ್ರಹಣ
 ಸೂರ್ಯಗ್ರಹಣ

ಗ್ರಹಣಗಳು ಖಗೋಳ ವಿಸ್ಮಯಗಳೇ ಆದರೂ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಸೂರ್ಯ-ಚಂದ್ರ ಗ್ರಹಣಗಳಿಗೆ ಬಹಳ ಮಹತ್ವವಿದೆ. ಇದೀಗ ಯುಗಾದಿ ಹಬ್ಬಕ್ಕೂ ಮೊದಲು ಎಂದರೆ 08 ಏಪ್ರಿಲ್ 2024ರಂದು ಈ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸಲಿದೆ. 

2/6
ವರ್ಷದ ಮೊದಲ ಸೂರ್ಯ ಗ್ರಹಣದ ಪ್ರಭಾವ
ವರ್ಷದ ಮೊದಲ ಸೂರ್ಯ ಗ್ರಹಣದ ಪ್ರಭಾವ

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನನ್ನು ಆತ್ಮದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ, ಸೂರ್ಯನಿಗೆ ಸಂಬಂಧಿಸಿದ ಯಾವುದೇ ಸಣ್ಣ ಘಟನೆಗಳು ಕೂಡ ದೇಶ-ಪ್ರಪಂಚದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. 

3/6
ರಾಶಿಗಳ ಮೇಲೆ ಸೂರ್ಯ ಗ್ರಹಣ ಪ್ರಭಾವ
ರಾಶಿಗಳ ಮೇಲೆ ಸೂರ್ಯ ಗ್ರಹಣ ಪ್ರಭಾವ

ಸೂರ್ಯ ಗ್ರಹಣದ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರಲಿದೆ. ಆದರೂ, ಈ ಸಮಯವನ್ನು ಮೂರು ರಾಶಿಯವರಿಗೆ ಭಾರೀ ಅದೃಷ್ಟದ ಸಮಯ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

4/6
ವೃಷಭ ರಾಶಿ
 ವೃಷಭ ರಾಶಿ

2024ರ ಮೊದಲ ಸೂರ್ಯಗ್ರಹಣವು ವೃಷಭ ರಾಶಿಯ ಜನರ ಜೀವನದಲ್ಲಿ ಧನಾತ್ಮಕ ಫಲಗಳನ್ನು ತರಲಿದೆ. ಈ ಅವಧಿಯಲ್ಲಿ ಹಠಾತ್ ಧನಲಾಭದಿಂದ ಬಾಕಿ ಉಳಿದಿರುವ ಸಾಲಗಳನ್ನು ಪಾವಟಿಸುವಿರಿ. ದೀರ್ಘ ಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. 

5/6
ಮಿಥುನ ರಾಶಿ
ಮಿಥುನ ರಾಶಿ

ಸೂರ್ಯ ಗ್ರಹಣವು ಮಿಥುನ ರಾಶಿಯ ಜನರಿಗೆ ಸಹ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಉನ್ನತ ವಿದ್ಯಾಭ್ಯಾಸ ಅಥವಾ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವವರಿಗೆ ಇದು ಒಳ್ಳೆಯ ಸಮಯ. ನಿಮ್ಮ ಬಹುದಿನಗಳ ಕನಸು ನನಸಾಗಲಿದೆ. 

6/6
ಕರ್ಕಾಟಕ ರಾಶಿ
 ಕರ್ಕಾಟಕ ರಾಶಿ

ಈ ವರ್ಷದ ಮೊದಲ ಸೂರ್ಯಗ್ರಹಣವು ಕರ್ಕಾಟಕ ರಾಶಿಯ ಜನರಿಗೆ ಶುಭ ಫಲಗಳನ್ನು ನೀಡಲಿದೆ. ಕೌಟುಂಬಿಕ ಸಮಸ್ಯೆಗಳು ಬಗೆಹರಿದು ಜೀವನದಲ್ಲಿ ಸಂತೋಷದ ಕ್ಷಣಗಳು ಹೆಚ್ಚಾಗಲಿವೆ. ಉದ್ಯೋಗ ರಂಗದಲ್ಲಿಯೂ ಮನ್ನಣೆ ಸಿಗಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More