PHOTOS

Surya Grahan 2024: ಸೋಮಾವತಿ ಅಮಾವಾಸ್ಯೆಯಂದು ಸೂರ್ಯಗ್ರಹಣ, ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ

Surya Grahan 2024: ಇಂದು ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಈ ದಿನ ಸೋಮಾವತಿ ಅಮಾವಾಸ್ಯೆಯೂ ಆಗಿರುವುದರಿಂದ ಈ ದಿನ ಅನೇಕ ಅಪರೂಪದ ಕಾಕತಾಳೀಯತ...

Advertisement
1/6
ಸೋಮಾವತಿ ಅಮಾವಾಸ್ಯೆಯಂದು ಸೂರ್ಯಗ್ರಹಣ
 ಸೋಮಾವತಿ ಅಮಾವಾಸ್ಯೆಯಂದು ಸೂರ್ಯಗ್ರಹಣ

ಹಿಂದೂ ಧರ್ಮದಲ್ಲಿ ಚೈತ್ರ ಅಮಾವಾಸ್ಯೆಗೆ ಬಹಳ ವಿಶೇಷ ಮಹತ್ವವಿದೆ. ಸೋಮವಾರದ ದಿನ ಬರುವ ಅಮಾವಾಸ್ಯೆಯನ್ನು ಸೋಮಾವತಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಇಂದು (ಏಪ್ರಿಲ್ 08,2024) ಸೋಮಾವತಿ ಅಮಾವಾಸ್ಯೆಯ ದಿನ ವರ್ಷದ ಮೊದಲ ಸೂರ್ಯಗ್ರಹಣ ಕೂಡ ಸಂಭವಿಸುತ್ತಿದೆ. ಇದರ ಪರಿಣಾಮವಾಗಿ ಅಪರೂಪದ ಕಾಕತಾಳೀಯತೆ ಸಂಭವಿಸುತ್ತಿದ್ದು, ಕೆಲವು ರಾಶಿಯವರ ಮೇಲೆ ಇದರ ಶುಭ ಪರಿಣಾಮ ಕಂಡು ಬರಲಿದೆ. ಆ ಅದೃಷ್ಟದ ರಾಶಿಗಳೆಂದರೆ... 

2/6
ವೃಷಭ ರಾಶಿ
ವೃಷಭ ರಾಶಿ

ಸೋಮವತಿ ಅಮಾವಾಸ್ಯೆಯ ದಿನ ಸಂಭವಿಸುತ್ತಿರುವ ಸೂರ್ಯಗ್ರಹಣವು ವೃಷಭ ರಾಶಿಯವರ ಜೀವನದಲ್ಲಿ ಶುಭ ದಿನಗಳನ್ನು ತರಲಿದೆ. ಈ ವೇಳೆ ಉದ್ಯೋಗದಲ್ಲಿ ಯಶಸ್ಸಿನ ಜೊತೆಗೆ ಆರ್ಥಿಕ ಲಾಭವನ್ನು ಕಾಣಬಹುದು. 

3/6
ಕನ್ಯಾ ರಾಶಿ
ಕನ್ಯಾ ರಾಶಿ

ಸೋಮವತಿ ಅಮಾವಾಸ್ಯೆಯ ದಿನ ವರ್ಷದ ಮೊದಲ ಸೂರ್ಯಗ್ರಹಣವು ಕನ್ಯಾ ರಾಶಿಯವರೀ ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳವನ್ನು ನೀಡಲಿದೆ.  ಸ್ವಂತ ಉದ್ಯೋಗ ಮಾಡುವ ಉದ್ಯಮಿಗಳಿಗೆ ಶುಭ ಸಮಯ. 

4/6
ತುಲಾ ರಾಶಿ
ತುಲಾ ರಾಶಿ

ವರ್ಷದ ಮೊದಲ ಸೂರ್ಯಗ್ರಹಣವು ತುಲಾ ರಾಶಿಯವರಿಗೆ ಬಂಪರ್ ಲಾಭವನ್ನು ನೀಡಲಿದೆ. ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳು ಈಗ ಕೈಗೂಡಲಿವೆ. ಪ್ರತಿ ಹಂತದಲ್ಲೂ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು, ವಿದೇಶ ಪ್ರವಾಸ ಯೋಗವೂ ಇದೆ. 

5/6
ಮಕರ ರಾಶಿ
ಮಕರ ರಾಶಿ

ಸೋಮಾವತಿ ಅಮಾವಾಸ್ಯೆಯಂದು ಸಂಭವಿಸುತ್ತಿರುವ ವರ್ಷದ ಮೊದಲ ಸೂರ್ಯಗ್ರಹಣವು ಮಕರ ರಾಶಿಯವರಿಗೆ ಹಣದ ಹೊಳೆಯನ್ನೇ ಹಾರಿಸಲಿದೆ. ವೃತ್ತಿಯಲ್ಲಿ ಪ್ರಗತಿ, ಸ್ವಂತ ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಕಾಣುವಿರಿ. 

6/6
ಸೂಚನೆ
ಸೂಚನೆ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More