PHOTOS

Surya Gochar 2024: ಚೈತ್ರ ನವರಾತ್ರಿಯಲ್ಲಿ ಸೂರ್ಯ ಸಂಕ್ರಮಣ, ಈ 5 ರಾಶಿಯವರಿಗೆ ವೃತ್ತಿಯಲ್ಲಿ ಭಾರೀ ಯಶಸ್ಸು

Surya Gochar 2024: ನಿನ್ನೆಯಿಂದ (ಏಪ್ರಿಲ್ 09) ರಿಂದ ಚೈತ್ರ ನವರಾತ್ರಿ ಆರಂಭವಾಗಿದೆ. ಇನ್ನೆರಡು ದಿನಗಳ ಬಳಿಕ ಎಂದರೆ ಏಪ್ರಿಲ್ 13ರಂದು ಗ್ರಹಗಳ ರಾಜ ಸೂರ್ಯ ದೇ...

Advertisement
1/6
ಸೂರ್ಯ ರಾಶಿ ಪರಿವರ್ತನೆ
ಸೂರ್ಯ ರಾಶಿ ಪರಿವರ್ತನೆ

ಚೈತ್ರ ನವರಾತ್ರಿಯ ಪಂಚಮಿಯ ದಿನ ಏಪ್ರಿಲ್ 13ರಂದು ಸೂರ್ಯ ರಾಶಿ ಬದಲಾಯಿಸಿ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರೊಂದಿಗೆ ಮೇಷ ರಾಶಿಯಲ್ಲಿ ಸೂರ್ಯ-ಬುಧ ಸಂಯೋಗದಿಂದ ಬುದ್ಧಾದಿತ್ಯ ರಾಜಯೋಗ, ಸೂರ್ಯ ಗುರು ಸಂಯೋಗದ ಜೊತೆಗೆ ಮಾತೆ ದುರ್ಗೆಯ ಆಶೀರ್ವಾದದಿಂದ ಐದು ರಾಶಿಯ ಜನರು ವೃತಿ ಜೀವನದಲ್ಲಿ ಹೊಸ ಎತ್ತರಕ್ಕೆ ಬೆಳೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

2/6
ಮೇಷ ರಾಶಿ
ಮೇಷ ರಾಶಿ

ಈ ಅವಧಿಯಲ್ಲಿ ಮೇಷ ರಾಶಿಯವರಿಗೆ ನಿಮ್ಮ ಮನಸ್ಸಿನಲ್ಲಿ ಹೊಸ ಶಕ್ತಿ ಪ್ರವಹಿಸಲಿದ್ದು ಉದ್ಯೋಗ ರಂಗದಲ್ಲಿ ಪ್ರಗತಿಯ ಹೊಸ ಹಾದಿಗಳು ತೆರೆಯಲಿವೆ. ಹೊಸ ಸವಾಲುಗಳು ಎದುರಾಗುವುದಾದರೂ ಧೈರ್ಯದಿಂದ ಎಲ್ಲವನ್ನೂ ಜಯಿಸುವಿರಿ. ಆರ್ಥಿಕವಾಗಿಯೂ ಒಳ್ಳೆಯ ಸಮಯ. 

3/6
ಮಿಥುನ ರಾಶಿ
ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ಸಮಯದಲ್ಲಿ ವ್ಯಾಪಾರದಲ್ಲಿ ಪ್ರಬಲ ಪೈಪೋಟಿ ಇದ್ದಾಗಿಯೂ ಬಂಪರ್ ಲಾಭವಾಗಲಿದೆ. ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಇದರಿಂದಾಗಿ, ಬೌತಿಕ ಸುಖ-ಸಂತೋಷ ವೃದ್ಧಿಯಾಗಲಿದೆ. 

4/6
ಕರ್ಕಾಟಕ ರಾಶಿ
ಕರ್ಕಾಟಕ ರಾಶಿ

ಸೂರ್ಯ ಗೋಚಾರವು ಕರ್ಕಾಟಕ ರಾಶಿಯವರಿಗೆ ಗುಡ್ ನ್ಯೂಸ್ ತರಲಿದೆ. ವೃತ್ತಿ ಜೀವನದಲ್ಲಿ ಇಷ್ಟು ದಿನಗಳಿಂದ ಎದುರಾಗಿದ್ದ ಅಡೆತಡೆಗಳು ನಿವಾರಣೆಯಾಗಿ ಬಡ್ತಿ ಸಂಭವವಿದೆ. ಹಣಕಾಸಿನ ವಿಷಯದಲ್ಲೂ ಸಮಯ ಒಳ್ಳೆಯದು ಎಂದು ಸಾಬೀತುಪಡಿಸಲಿದೆ. 

5/6
ಸಿಂಹ ರಾಶಿ
 ಸಿಂಹ ರಾಶಿ

ಸೂರ್ಯ ರಾಶಿ ಪರಿವರ್ತನೆಯಿಂದ ಸಿಂಹ ರಾಶಿಯವರ ಬದುಕು ಹೊಳೆಯಲಿದೆ. ಉದ್ಯೋಗಸ್ಥರು ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ, ವೇತನದಲ್ಲಿ ಹೆಚ್ಚಳವಾಗಲಿದೆ. ಹೂಡಿಕೆಯಿಂದ ಲಾಭವನ್ನು ನಿರೀಕ್ಷಿಸಬಹುದು. 

6/6
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ

ಸೂರ್ಯ ಸಂಚಾರ ಬದಲಾವಣೆಯಿಂದಾಗಿ ವೃಶ್ಚಿಕ ರಾಶಿಯವರು ವೃತ್ತಿ ಜೀವನದಲ್ಲಿ ಹೊಸ ಹೊಸ ಅವಕಾಶಗಳು ಲಭ್ಯವಾಗಲಿದ್ದು, ಉನ್ನತ ಸ್ಥಾನಕ್ಕೆ ಏರಬಹುದು. ವ್ಯಾಪಾರಸ್ಥರಿಗೆ ಆದಾಯ ಹೆಚ್ಚಾಗಲಿದೆ. ಹೊಸ ವ್ಯವಹಾರದಲ್ಲಿ ಕೈ ಹಾಕಲು ಬಯಸುವವರಿಗೆ ಉತ್ತಮ ಸಮಯ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More