PHOTOS

ಸ್ಟಾರ್ ಕ್ರಿಕೆಟರ್‌ ಜೊತೆ ಲವ್‌ ಬ್ರೇಕಪ್‌.. ಸಿನಿಮಾಗಳಿಂದ ದೂರ.. ಕೊನೆಗೆ ಬಾಳಲ್ಲಿ ಒಬ್ಬಂಟಿ ಆಗಿಯೇ ಉಳಿದ ಫೇಮಸ್‌ ನಟಿ ಈಕೆ !

ನಗ್ಮಾ ಪ್ರೇಮ ಸಂಬಂಧಗಳ ಬಗ್ಗೆ ಹಲವು ವದಂತಿಗಳಿವೆ. ಮೂವರು ಸ್ಟಾರ್ ಹೀರೋಗಳ ಜೊತೆಗೆ ಅಫೇರ್‌ ಹೊಂದಿದ್ದ ಈಕೆ ಒಬ್ಬ ಕ್ರಿಕೆಟಿಗನ ಜೊ...

Advertisement
1/8
ನಟಿ ನಗ್ಮಾ
ನಟಿ ನಗ್ಮಾ

ಒಂದು ಕಾಲದ ಸ್ಟಾರ್ ನಟಿ ನಗ್ಮಾ. 90ರ ದಶಕದಲ್ಲಿ ಸ್ಟಾರ್ ನಾಯಕಿಯಾಗಿದ್ದರು. ನಟಿ ನಗ್ಮಾ ಮೊದಲ ಹೆಸರು ನಂದಿತಾ ಅರವಿಂದ ಮೊರಾರ್ಜಿ. ನಗ್ಮಾ ಅವರ ತಂದೆ ಹಿಂದೂ, ತಾಯಿ ಮುಸ್ಲಿಂ ಆಗಿದ್ದರು. 

2/8
ನಟಿ ನಗ್ಮಾ
ನಟಿ ನಗ್ಮಾ

ನಟಿ ನಗ್ಮಾ ಮುಂಬೈನಲ್ಲಿ ಓದು ಮುಗಿಸಿದರು. ಬಳಿಕ ಸಲ್ಮಾನ್‌ ಖಾನ್‌ ಜೊತೆ ಬಾಘಿ ಚಿತ್ರದ ಮೂಲಕ ನಾಯಕ ನಟಿಯಾಗಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. 

3/8
ನಟಿ ನಗ್ಮಾ
ನಟಿ ನಗ್ಮಾ

1990ರಲ್ಲಿ ಬಾಘಿ ಸಿನಿಮಾ ರಿಲೀಸ್‌ ಆಯಿತು. ಆ ಬಳಿಕ ನಗ್ಮಾ ಹಿಂತಿರುಗಿ ನೋಡಲಿಲ್ಲ. ಯಶಸ್ಸಿನ ಶಿಖರ ಏರಿದರು. ಹಿಂದಿ ನಂತರ ತೆಲುಗು, ತಮಿಳು, ಮಲಯಾಳಂ, ಕನ್ನಡ, ಭೋಜ್‌ಪುರಿ ಸಿನಿಮಾಗಳಲ್ಲಿ ನಗ್ಮಾ ನಟಿಸಿ ಮನ್ನಣೆ ಪಡೆದರು.

4/8
ನಟಿ ನಗ್ಮಾ
ನಟಿ ನಗ್ಮಾ

ನಗ್ಮಾ ವೈಯಕ್ತಿಕ ಜೀವನದಿಂದಲೂ ಅನೇಕ ಬಾರಿ ಸುದ್ದಿಯಾಗದ್ದಾರೆ. ನಗ್ಮಾ ಪ್ರೇಮ ಸಂಬಂಧಗಳ ಬಗ್ಗೆ ಹಲವು ವದಂತಿಗಳಿವೆ. ನಾಲ್ವರು ವಿವಾಹಿತರೊಂದಿಗೆ ಸಂಬಂಧ ಹೊಂದಿದ್ದರು ಎಂಬ ಸುದ್ದಿ ಆ ಸಮಯದಲ್ಲಿ ಸಂಚಲನ ಮೂಡಿಸಿತ್ತು. 

5/8
ನಟಿ ನಗ್ಮಾ
ನಟಿ ನಗ್ಮಾ

ವರದಿಗಳ ಪ್ರಕಾರ, ನಟಿ ನಗ್ಮಾ ಟೀಂ ಇಂಡಿಯಾ ನಾಯಕ ಸೌರವ್ ಗಂಗೂಲಿಯನ್ನು ಪ್ರೀತಿಸಿದ್ದರು. ತಿರುಪತಿಯಲ್ಲಿ ರಹಸ್ಯ ವಿವಾಹ ನಡೆದಿರುವ ಬಗ್ಗೆ ಸಹ ಸುಳ್ಳು ಸುದ್ದಿ ಹಬ್ಬಿತ್ತು. 

6/8
ನಟಿ ನಗ್ಮಾ
ನಟಿ ನಗ್ಮಾ

ಸೌರವ್ ಗಂಗೂಲಿ ಪತ್ನಿಯಿಂದಾಗಿ ಇಬ್ಬರ ನಡುವಿನ ಪ್ರೇಮ ಸಂಬಂಧ ಮುರಿದು ಬಿದ್ದಿತ್ತು. ಆ ಬಳಿಕ ಮೂವರು ನಟರ ಜೊತೆ ನಗ್ಮಾ ಹೆಸರು ತಳಕು ಹಾಕಿಕೊಂಡಿತ್ತು. 

7/8
ನಟಿ ನಗ್ಮಾ
ನಟಿ ನಗ್ಮಾ

ಸೌರವ್ ಗಂಗೂಲಿ ನಂತರ ನಟ ಶರತ್ ಕುಮಾರ್ ಅವರೊಂದಿಗೆ ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದಾರೆ ಎಂದು ವದಂತಿಗಳಿವೆ. ಬಳಿಕ ಖ್ಯಾತ ಭೋಜ್‌ಪುರಿ ಸೂಪರ್‌ಸ್ಟಾರ್ ರವಿಕಿಶನ್ ಜೊತೆಯೂ ಸಂಬಂಧ ಹೊಂದಿದ್ದರು ಎನ್ನಲಾಗುತ್ತದೆ.

8/8
ನಟಿ ನಗ್ಮಾ
ನಟಿ ನಗ್ಮಾ

ರವಿಕಿಶನ್ ಜೊತೆ ಬ್ರೇಕ್ ಅಪ್ ನಂತರ ನಗ್ಮಾ ಸ್ಟಾರ್ ಹೀರೋ ಮನೋಜ್ ತಿವಾರಿ ಜೊತೆ ಅಫೇರ್‌ ಹೊಂದಿದ್ದರು ಎಂಬ ವದಂತಿ ಶುರುವಾಯಿತು. ಈ ಸುದ್ದಿ ಬಂದಾಗ ಸೌರವ್‌ ಗಂಗೂಲಿ, ಶರತ್ ಕುಮಾರ್, ರವಿಕಿಶನ್ ಮತ್ತು ಮನೋಜ್ ತಿವಾರಿ ಎಲ್ಲರೂ ಮದುವೆಯಾಗಿದ್ದರು. 





Read More