PHOTOS

ತರುಣ್‌ ಸುಧೀರ್‌ ಕೈ ಹಿಡಿಯುತ್ತಿರುವ ಬೆನ್ನಲ್ಲೆ ಸೋನಾಲ್‌ ಸಖತ್‌ ಪಾರ್ಟಿ..ಇಲ್ಲಿವೆ ನೋಡಿ ಫೋಟೋಸ್‌

ುಡ್‌ನ ಖ್ಯಾತ ನಿರ್ದೇಶಕ ತರುಣ್‌ ಸುಧೀರ್‌ ಹಾಗೂ ಸೋನಾಲ್‌ ಮದುವೆ ಡೇಟ್‌ ಫೀಕ್ಸ್‌ ಆಗಿದೆ. ಪ್ರೀತಿಗೆ ಜಾತಿ, ಬೇದ-ಭಾವವಿಲ್ಲ ಎನ್ನುವ ಮಾತನ್ನು ನಿಜ ಮಾಡಿ ಈ ಜೋಡಿ....

Advertisement
1/5

ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ತರುಣ್‌ ಸುಧೀರ್‌ ಹಾಗೂ ಸೋನಾಲ್‌ ಮದುವೆ ಡೇಟ್‌ ಫೀಕ್ಸ್‌ ಆಗಿದೆ. ಪ್ರೀತಿಗೆ ಜಾತಿ, ಬೇದ-ಭಾವವಿಲ್ಲ ಎನ್ನುವ ಮಾತನ್ನು ನಿಜ ಮಾಡಿ ಈ ಜೋಡಿ. ಶೀಘ್ರವೇ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಇದರ ಬೆನ್ನಲ್ಲೆ ನಟಿ ತಮ್ಮ ಆಪ್ತರೊದಿಗೆ ಬ್ಯಾಚುಲರ್ಸ್‌ ಪಾರ್ಟಿ ಆಚರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್‌ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ.

2/5

ಹಿಂದೂ ಹಾಗೂ ಕ್ರೈಸ್ತ ಧರ್ಮದಂತೆ ಸೋನಾಲ್‌ ಹಾಗೂ ತರುಣ್‌ ಸುದೀರ್‌ ಜೋಡಿ ಆಗಸ್ಟ್‌ 10  ಹಾಗೂ 11 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಮದುವೆಗೆ ಇನ್ನೇನು ಕೆಲವೇ ದಿನಗಲು ಬಾಕಿ ಇದ್ದು, ಜೋಡಿ ತಯಾರಿಗಳಲ್ಲಿ ಭಾಗಿಯಾಗಿದ್ದಾರೆ.  

3/5

ಸೋನಾಲ್‌ ತಂಗಿ ಅಕ್ಕನಿಗಾಗಿ ಸರ್ಪ್ರೈಸ್‌ ಪಾರ್ಟಿ ಆಯೋಜನೆ ಮಾಡಿದ್ದು, ತಂಗಿ ತಾಯಿ ಹಾಗೂ ಆಪ್ತ ಸ್ನೇಹಿತೆಯರೊಂದಿಗೆ ಸೋನಾಲ್‌ ಬ್ಯಾಚುಲರೇಟ್‌ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ.  

4/5

ಇತ್ತೀಚೆಗಷ್ಟೆ ಈ ಜೋಡಿ ಸುದ್ದಿಗೋಷ್ಟಿ ಮಾಡಿ ತಮ್ಮ ಪ್ರೀತಿಯ ಪಯನ ಹಾಗೂ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಇರುವ ಅಭಿಪ್ರಾಯದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದರು. ತಮ್ಮ ಬೇಟಿಯಾದ ಕಹಾನಿಯನ್ನು ಎಲ್ಲರ ಮುಂದೆ ಬಿಚ್ಚಿದ್ದರು.  

5/5

ಇನ್ನೂ ಸೋನಾಲ್‌ ಹಾಗೂ ತರುಣ್‌ ಸುಧೀರ್‌ ಸಿನಿಮಾರಂಗದ ತಾರೆಗಳಿಗೆ, ತಮ್ಮ ಆಪ್ತ ಸ್ನೇಹಿತರಿಗೆ ಅಂತಾ ಎಲ್ಲರಿಗೂ ತಮ್ಮ ಮದುವೆಯ ಆಮಂತ್ರಣವನ್ನು ತಲುಪಿಸಿದ್ದಾರೆ. ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೂ ಮದುವೆಯ ಆಮಂತ್ರಣ ತಲುಪಿದೆ.  





Read More