PHOTOS

100 ವರ್ಷಗಳ ನಂತರ ಒಟ್ಟೊಟ್ಟಿಗೆ ಎರಡು ರಾಜಯೋಗಗಳ ನಿರ್ಮಾಣ: ಆರು ರಾಶಿಯವರಿಗೆ ಸಕಲ ಸುಖ-ಸಂಪತ್ತು ಪ್ರಾಪ್ತಿ!

Shukradithya-Budaditya Raja Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಕಾಟಕ ರಾಶಿಯಲ್ಲಿ ಗ್ರಹಗಳ ರಾಜ ಸೂರ್ಯ, ರಾಜಕುಮಾರ ಬುಧ ಹಾಗೂ ಐಷಾರಾಮಿ ಜೀವನ ಕಾರಕನಾದ...

Advertisement
1/10
ಗ್ರಹ ಗೋಚಾರ
ಗ್ರಹ ಗೋಚಾರ

ಇತ್ತೀಚೆಗಷ್ಟೇ ಸೂರ್ಯ ಕರ್ಕಾಟಕ ರಾಶಿಯನ್ನು ಪ್ರವೇಶಿಸಿದ್ದಾನೆ. ಈಗಾಗಲೇ ಶುಕ್ರ-ಬುಧರು ಈ ರಾಶಿಯಲ್ಲಿ ಉಪಸ್ಥಿತರಿದ್ದರು. ಇದರಿಂದಾಗಿ ಒಟ್ಟೊಟ್ಟಿಗೆ ಡಬಲ್ ರಾಜಯೋಗಗಳು ನಿರ್ಮಾಣವಾಗಿವೆ. 

2/10
ಬುಧಾದಿತ್ಯ- ಶುಕ್ರಾದಿತ್ಯ ರಾಜಯೋಗ
ಬುಧಾದಿತ್ಯ- ಶುಕ್ರಾದಿತ್ಯ ರಾಜಯೋಗ

ಕರ್ಕಾಟಕ ರಾಶಿಯಲ್ಲಿ ಸೂರ್ಯ-ಬುಧರ ಸಂಯೋಗದಿಂದ ಶುಭಕರ ಬುಧಾದಿತ್ಯ ರಾಜಯೋಗ ನಿರ್ಮಾಣವಾಗಿದೆ. ಇದೇ ವೇಳೆ ಸೂರ್ಯ-ಶುಕ್ರರ ಯುತಿಯಿಂದ ಶುಕ್ರಾದಿತ್ಯ ರಾಜಯೋಗ ನಿರ್ಮಾಣವಾಗಿದೆ. 

3/10
ಶತಮಾನದ ಬಳಿಕ ಡಬಲ್ ರಾಜಯೋಗ
ಶತಮಾನದ ಬಳಿಕ ಡಬಲ್ ರಾಜಯೋಗ

ಜ್ಯೋತಿಷ್ಯ ಲೆಕ್ಕಾಚಾರಗಳ ಬಳಿಕ ಸುಮಾರು 100 ವರ್ಷಗಳ ಬಳಿಕ ಕರ್ಕಾಟಕ ರಾಶಿಯಲ್ಲಿ ಈ ರೀತಿಯಾಗಿ ಒಟ್ಟೊಟ್ಟಿಗೆ ಎರಡು ರಾಜಯೋಗಗಳು ನಿರ್ಮಾಣವಾಗುತ್ತಿವೆ. ಇದರ ಪರಿಣಾಮವಾಗಿ ಆರು ರಾಶಿಯವರಿಗೆ ಭಾರೀ ಅದೃಷ್ಟ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

4/10
ವೃಷಭ ರಾಶಿ
ವೃಷಭ ರಾಶಿ

ವೃಷಭ ರಾಶಿ:  ಬುಧಾದಿತ್ಯ- ಶುಕ್ರಾದಿತ್ಯ ರಾಜಯೋಗಗಳು ವೃಷಭ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ. ಉದ್ಯೋಗದಲ್ಲಿ ಯಶಸ್ಸಿನ ಜೊತೆಗೆ ಬಂಪರ್ ಹಣಕಾಸಿನ ಲಾಭವನ್ನೂ ನಿರೀಕ್ಷಿಸಬಹುದು. 

5/10
ಮಿಥುನ ರಾಶಿ
ಮಿಥುನ ರಾಶಿ

ಮಿಥುನ ರಾಶಿ:  ಡಬಲ್ ರಾಜಯೋಗಗಳ ನಿರ್ಮಾಣವು ಮಿಥುನ ರಾಶಿಯವರ ವೃತ್ತಿ ಬದುಕಿನಲ್ಲಿ ಅಪಾರ ಕೀರ್ತಿ-ಯಶಸ್ಸನ್ನು ನೀಡಲಿದೆ. ವೈಯಕ್ತಿಕ ಜೀವನದಲ್ಲಿ ಎದುರಾಗಿರುವ ಸಂಕಷ್ಟಗಳು ನಿವಾರಣೆಯಾಗಿ, ಸುಖ-ಸಂತೋಷದ ಕೌಟುಂಬಿಕ ಜೀವನವನ್ನು ಅನುಭವಿಸುವಿರಿ. 

6/10
ಕನ್ಯಾ ರಾಶಿ
ಕನ್ಯಾ ರಾಶಿ

ಕನ್ಯಾ ರಾಶಿ:  ಬುಧಾದಿತ್ಯ- ಶುಕ್ರಾದಿತ್ಯ ರಾಜಯೋಗಗಳು ಕನ್ಯಾ ರಾಶಿಯ ಜನರಿಗೆ ಹೊಸ ಆದಾಯದ ಮೂಲಗಳನ್ನು ಹೆಚ್ಚಿಸಲಿದ್ದು ಕೈತುಂಬಾ ಹಣವನ್ನು ನೀಡಲಿದೆ. ಹೂಡಿಕೆಯಿಂದ ಭಾರೀ ಲಾಭವನ್ನು ನಿರೀಕ್ಷಿಸಬಹುದು. ಸಂತಾನಕ್ಕೆ ಸಂಬಂಧಿಸಿದ ಶುಭಾಸುದ್ದಿಗಳನ್ನು ಕೇಳಬಹುದು. 

7/10
ತುಲಾ ರಾಶಿ
ತುಲಾ ರಾಶಿ

ತುಲಾ ರಾಶಿ:  ಒಟ್ಟಿಗೆ ಎರಡು ರಾಜಯೋಗಗಳ ರಚನೆಯು ತುಲಾ ರಾಶಿಯ ವ್ಯಾಪಾರಿಗಳಿಗೆ ಆದಾಯವನ್ನು ಹೆಚ್ಚಿಸಲಿದೆ. ಬೇರೆಡೆ ಸಿಲುಕಿರುವ ಹಣ ಕೈ ಸೇರುವುದರಿಂದ ಯಶಸ್ಸು ನಿಮ್ಮದಾಗಲಿದೆ. ಹಣಕಾಸಿನ ಸ್ಥಿತಿ ಸುಧಾರಿಸುವುದರಿಂದ ಜೀವನದಲ್ಲಿ ಸೌಕರ್ಯಗಳು ಕೂಡ ಹೆಚ್ಚಾಗಲಿವೆ. 

8/10
ಧನಸ್ಸು ರಾಶಿ
ಧನಸ್ಸು ರಾಶಿ

ಧನಸ್ಸು ರಾಶಿ: ಬುಧಾದಿತ್ಯ- ಶುಕ್ರಾದಿತ್ಯ ರಾಜಯೋಗಗಳು ಈ ರಾಶಿಯವರಿಗೆ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ಜರುಗುವ ಸಾಧ್ಯತೆ ಇದೆ. ಹಠಾತ್ ಧನಲಾಭದಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ಬಗೆಹರಿಯಲಿವೆ. 

9/10
ಕುಂಭ ರಾಶಿ
ಕುಂಭ ರಾಶಿ

ಕುಂಭ ರಾಶಿ:  ಒಟ್ಟಿಗೆ ನಿರ್ಮಾಣವಾಗಿರುವ ಡಬಲ್ ರಾಜಯೋಗಗೌ ಈ ರಾಶಿಯವರಿಗೆ ವೈಯಕ್ತಿಕ ಬದುಕಿನಲ್ಲಿ ದುಪ್ಪಟ್ಟು ಸಂತೋಷವನ್ನು ನೀಡಲಿವೆ. ಈ ಸಂದರ್ಭದಲ್ಲಿ ನಿಮ್ಮ ಮಾತೇ ನಿಮಗೆ ಬಂಡವಾಳವಾಗಿದ್ದು ಇದನ್ನು ಸರಿಯಾಗಿ ಬಳಸಿಕೊಳ್ಳುವುದರಿಂದ ಜೀವನದ ಪ್ರತಿ ಹಂತದಲ್ಲೂ ಯಶಸ್ಸು ನಿಮ್ಮದಾಗಲಿದೆ. 

10/10
ಸೂಚನೆ
ಸೂಚನೆ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More