PHOTOS

ಎರಡು ದಿನಗಳ ಬಳಿಕ ಶುಕ್ರನ ನೇರ ನಡೆ ಆರಂಭ, 5 ರಾಶಿಗಳ ಜನರ ಮೇಲೆ ಹಣದ ಸುರಿಮಳೆ!

23: ಶುಕ್ರನನ್ನು ಧನ-ಸಂಪತ್ತು, ಸಂತೋಷ, ಐಷಾರಾಮಿ, ಪ್ರೀತಿ ಮತ್ತು ಪ್ರಣಯದ ಅಂಶವೆಂದು ಪರಿಗಣಿಸಲಾಗುತ್ತದೆ. ಅವನ ದೆಸೆಗೆ ಪಾತ್ರರಾಗುವ ಜನರು, ಎಲ್ಲವನ್ನೂ ಸುಲಭವಾಗ...

Advertisement
1/5

ತುಲಾ ರಾಶಿ: ಶುಕ್ರನ ಸಂಕ್ರಮಣ  ತುಲಾ ರಾಶಿಯವರಿಗೆ ಒಳ್ಳೆಯ ಸುದ್ದಿಗಳನ್ನು  ತರಲಿದೆ. ಈ ಅವಧಿಯಲ್ಲಿ ನಿಮಗೆ ಅಪಾರ ಧನಲಾಭದ ಯೋಗ ಇರುತ್ತದೆ. ಇದಲ್ಲದೆ ಕಾರ್ಯಕ್ಷೇತ್ರದಲ್ಲಿ ಪ್ರತಿಭೆಯನ್ನು ತೋರಿಸಲು ಸಾಕಷ್ಟು ಅವಕಾಶವಿರುತ್ತದೆ. ಘನತೆ ಗೌರವ ಹೆಚ್ಚಾಗಲಿದೆ. ಬಾಳ ಸಂಗಾತಿಯೊಂದಿನ ಸಂಬಂಧದಲ್ಲಿ ಮಧುರತೆ ಇರಲಿದೆ ಮತ್ತು ಪ್ರೇಮ ಸಂಬಂಧಗಳಲ್ಲಿಯೂ ಯಶಸ್ಸು ಇರಲಿದೆ.  

2/5

ಧನು ರಾಶಿ: ಶುಕ್ರನ ನೇರ ನಡೆ ಧನು ರಾಶಿಯವರ ಜೀವನದಲ್ಲಿ ಶುಭ ಫಲಿತಾಂಶಗಳನ್ನು ತರಲಿದೆ. ಈ ಅವಧಿಯಲ್ಲಿ ವೃತ್ತಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಳಿವೆ ಮತ್ತು ವಿತ್ತೀಯ ಲಾಭಕ್ಕಾಗಿ ಹೊಸ ಅವಕಾಶಗಳು ಲಭ್ಯವಾಗಲಿವೆ. ಪಿತ್ರಾರ್ಜಿತ ಆಸ್ತಿಯಿಂದ ಪಡೆದ ಲಾಭದಲ್ಲಿ ಹೆಚ್ಚಳ ಕಂಡುಬರಲಿದೆ.  

3/5

ವೃಷಭ ರಾಶಿ: ಶುಕ್ರನ ಈ ನೇರನಡೆ ವೃಷಭ ರಾಶಿಯವರಿಗೆ ವೃತ್ತಿಯಲ್ಲಿ ಸಾಕಷ್ಟು ಪ್ರಗತಿಯನ್ನು ನೀಡುತ್ತದೆ. ಉದ್ಯೋಗದಲ್ಲಿ ಬಡ್ತಿಯ ವಿಪುಲ ಅವಕಾಶಗಳು ಲಭಿಸಲಿವೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುವಿರಿ. ಕುಟುಂಬದಲ್ಲಿ ಸಂಬಂಧಗಳು ಬಲಗೊಳ್ಳಲಿವೆ. ಈ ಅವಧಿಯಲ್ಲಿ, ನೀವು ಜನರನ್ನು ನಿಮ್ಮತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗುವಿರಿ ಮತ್ತು ನಿಮ್ಮ ಮಾತುಗಳಿಂದ ಇತರರ ಹೃದಯವನ್ನು ಪ್ರಭಾವಿತಗೊಳಿಸುವಿರಿ.  

4/5

ಮಿಥುನ ರಾಶಿ: ಶುಕ್ರನ ನೇರ ನಡೆ ಮಿಥುನ ರಾಶಿಯ ಜನರ ವೃತ್ತಿಜೀವನದಲ್ಲಿ ವಿಶೇಷ ಬದಲಾವಣೆಗಳನ್ನು ತರಲಿದೆ. ಈ ಅವಧಿಯಲ್ಲಿ ಧನಾತ್ಮಕ ಫಲಿತಾಂಶಗಳು ನಿಮ್ಮದಾಗಲಿವೆ. ನಿಮಗೆ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ನೀವು ಹೊಸ ಮತ್ತು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯುವಲ್ಲಿ ಯಶಸ್ವಿಯಾಗುವಿರಿ. ವಿದೇಶಕ್ಕೆ ಹೋಗುವ ಕನಸು ಕಾಣುವವರಿಗೆ ಅದಕ್ಕೆ ಸಂಬಂಧಿಸಿದ ಯಾವುದಾದರೊಂದು ಒಳ್ಳೇಯ ಸುದ್ದಿ ಸಿಗುವ ಸಾಧ್ಯತೆ ಇದೆ.  

5/5

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ನೇರ ಶುಕ್ರನು ಮಂಗಳಕರ ಫಲಿತಾಂಶಗಳನ್ನು ದಯಪಾಲಿಸಲಿದ್ದಾನೆ. ಈ ಅವಧಿಯಲ್ಲಿ ನಿಮಗೆ ಸಾಕಷ್ಟು ಧನಲಾಭ ಪ್ರಾಪ್ತಿಯಾಗಲಿದೆ  ಮತ್ತು ವ್ಯಾಪಾರದಲ್ಲಿ ವಿಶೇಷ ಲಾಭ ಉಂಟಾಗಲಿದೆ. ಈ ಅವಧಿಯಲ್ಲಿ, ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ, ಇದರಿಂದಾಗಿ ಪ್ರತಿಯೊಂದು ಕೆಲಸವೂ ಸುಲಭವಾಗಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ ಮತ್ತು ಆರ್ಥಿಕ ಸ್ಥಿತಿಯು ಪ್ರಬಲವಾಗಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  





Read More