PHOTOS

Shukra Gochar In Leo: ಇಂದಿನಿಂದ 32 ದಿನಗಳ ಕಾಲ ಈ ರಾಶಿಗಳ ಜನರ ಸುವರ್ಣಕಾಲ ಆರಂಭ, ಶುಕ್ರದೆಸೆಯಿಂದ ಭಾರಿ ಧನವೃಷ್ಟಿ!

ತಿಷ್ಯ ಶಾಸ್ತ್ರದ ಪ್ರಕಾರ ಧನ-ವೈಭವದ ಕಾರಕ ಗ್ರಹ ಎಂದೇ ಭಾವಿಸಲಾಗುವ ಶುಕ್ರ ಇಂದು ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ, ಮುಂದಿನ 32 ದಿನಗಳ ಕಾಲ ಆತ ಈ ರಾಶಿಯಲ್ಲಿಯ...

Advertisement
1/5

ಸಿಂಹ ರಾಶಿ: ನಿಮ್ಮ ರಾಶಿಯಲ್ಲಿಯೇ ಸೂರ್ಯನ ಈ ಗೋಚರ ನೆರವೇರಿದೆ ಮತ್ತು ಇದು ನಿಮಗೆ ವಿಶೇಷ ಲಾಭಗಳನ್ನು ನೀಡಲಿದೆ. ಪಿತ್ರಾರ್ಜಿತ ಸಂಪತ್ತಿನ ಮಾಧ್ಯಮದ ಮೂಲಕ ನೀವು ಅಪಾರ ಧನಪ್ರಾಪ್ತಿ ಮಾಡಿಕೊಳ್ಳುವಿರಿ. ಹೂಡಿಕೆ ನಿಮ್ಮ ಪಾಲಿಗೆ ಲಾಭದಾಯಕ ಸಾಬೀತ್ತಾಗಲಿದೆ. ಧನ-ಧಾನ್ಯ ಹೆಚ್ಚಾಗಲಿದೆ. ಕೆಲವರಿಗೆ ವಿದೇಶಕ್ಕೆ ಹೋಗುವ ಅವಕಾಶ ಕೂಡ ಪ್ರಾಪ್ತಿಯಾಗಬಹುದು. ನೌಕರವರ್ಗದ ಜನರಿಗೆ ಹಿರಿಯ ಅಧಿಕಾರಿಗಳ ಬೆಂಬಲ ಪ್ರಾಪ್ತಿಯಾಗಲಿದೆ. ಉತ್ತಮ ಕೆಲಸದ ಪ್ರದರ್ಶನದ ಹಿನ್ನೆಲೆ ನಿಮಗೆ ಪದೋನ್ನತಿ ಸಿಗುವ ಸಾಧ್ಯತೆ ಇದೆ. ವಿದೇಶದಲ್ಲಿ ನೌಕರಿ ಪಡೆಯಬಯಸುವವರಿಗೆ ಯಶಸ್ಸು ಸಿಗಲಿದೆ. ಬಿಸ್ನೆಸ್ ನಲ್ಲಿ ಅಪಾರ ಧನಲಾಭದ ಲಕ್ಷಣಗಳು ಗೋಚರಿಸುತ್ತಿವೆ.   

2/5

ಮೇಷ ರಾಶಿ: ಶುಕ್ರನ ಸಿಂಹ ರಾಶಿ ಗೋಚರ ಮೇಷ ರಾಶಿಯ ಜಾತಕದವರಿಗೆ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ಈ ಅವಧಿಯಲ್ಲಿ ಶುಕ್ರ ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ಸಂಚರಿಸಲಿದ್ದಾನೆ, ಇದರಿಂದ ಕುಟುಂಬ ಸದಸ್ಯರ ಜೊತೆಗೆ ನೀವು ಉತ್ತಮ ಕಾಲ ಕಳೆಯುವಿರಿ. ಆದಾಯದ ಹೋದ ಮೂಲಗಳು ತೆರೆದುಕೊಳ್ಳಲಿವೆ. ಆದರೆ, ಅದಕ್ಕೆ ತಕ್ಕಂತೆ ಖರ್ಚು ಕೂಡ ಹೆಚ್ಚಾಗಲಿದೆ. ಕಾರ್ಯಸ್ಥಳದಲ್ಲಿ ಜವಾಬ್ದಾರಿ ಹಾಗೂ ಕೆಲಸದ ಒತ್ತಡ ಹೆಚ್ಚಾಗಲಿದೆ. ಅದನ್ನು ನೀವು ಉತ್ತಮವಾಗಿ ನಿರ್ವಹಿಸುವ ಪ್ರಯತ್ನವನ್ನು ಮಾಡುವಿರಿ. ವ್ಯಾಪಾರದಲ್ಲಿಯೂ ಕೂಡ ಅದೃಷ್ಟ ನಿಮ್ಮನ್ನು ಬೆಂಬಲಿಸಲಿದೆ. ಕೆಲಸದ ನಿಮಿತ್ತ ಯಾತ್ರೆ ಸಂಭವಿಸುವ ಎಲ್ಲಾ ಸಾಧ್ಯತೆಗಳಿವೆ.    

3/5

ವೃಷಭ ರಾಶಿ: ಶುಕ್ರನ ಈ ಸಿಂಹ ಗೋಚರ ನಿಮ್ಮ ಪಾಲಿಗೆ ಸಾಕಷ್ಟು ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಿದೆ. ಹೊಸ ಮನೆಯ ನಿಮ್ಮ ಕನಸು ಈಡೇರುವ ಸಾಧ್ಯತೆ ಇದೆ. ವಾಹನ ಖರೀದಿಸಲು ಈ ಸಮಯ ಉತ್ತಮವಾಗಿದೆ. ಆದಾಯದ ಹೊಸ ಮೂಲಗಳು ನಿಮ್ಮ ಪಾಲಿಗೆ ತೆರೆದುಕೊಳ್ಳಲಿವೆ. ಬಿಸ್ನೆಸ್ ನಲ್ಲಿಯೂ ಕೂಡ ನಿಮಗೆ ಲಾಭ ಬರಲಿದೆ. ಈ ಅವಧಿಯಲ್ಲಿ ನೀವು ನಿಮ್ಮ ಸಂಪೂರ್ಣ ಸಾಮರ್ಥ್ಯದಿಂದ ನಡೆದು ಬಂದ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಯತ್ನಿಸುವಿರಿ. ಅವುಗಳಲ್ಲಿ ಬಹುತೇಕ ಅವಕಾಶಗಳು ಯಶಸ್ವಿಯಾಗಲಿವೆ. ಕುಟುಂಬದ ಜೊತೆಗೆ ಉತ್ತಮ ಕಾಲ ಕಳೆಯುವಲ್ಲಿ ಯಶಸ್ವಿಯಾಗುವಿರಿ. ದಾಂಪತ್ಯ ಜೀವನ ಸುಖಮಯವಾಗಲಿದೆ. ಧನ-ಧಾನ್ಯ ವೃತ್ತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಸಮಾಜದಲ್ಲಿ ಸ್ಥಾನಮಾನ ಹೆಚ್ಚಾಗಲಿದೆ.     

4/5

ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಶುಕ್ರ ಸಂಕ್ರಮವು ಶುಭಕರವಾಗಿರಲಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಅಪಾರ ಯಶಸ್ಸನ್ನು ಪಡೆಯುತ್ತೀರಿ. ನೀವು ಉದ್ಯೋಗದಲ್ಲಿದ್ದರೆ, ನೀವು ಕೆಲವು ಅತ್ಯುತ್ತಮ ಕೊಡುಗೆಗಳನ್ನು ಸಹ ಪಡೆಯಬಹುದು, ಇದು ಪ್ರಸ್ತುತ ಮತ್ತು ಭವಿಷ್ಯದಲ್ಲಿ ನಿಮಗೆ ಸಾಕಷ್ಟು ಪ್ರಯೋಜನವನ್ನು ನೀಡಲಿದೆ. ಈ ಸಂಚಾರವು ವಿದ್ಯಾರ್ಥಿಗಳ ಪಾಲಿಗೆ ಸಾಕಷ್ಟು ಅನುಕೂಲಕರವಾಗಿದೆ. ಅದರಲ್ಲಿಯೂ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರಿಗೆ ಶುಭ ಫಲಗಳು ಪ್ರಾಪ್ತಿಯಾಗಲಿವೆ. ಶುಕ್ರನ ಸಿಂಹ ಗೋಚರ ಕನ್ಯಾ ರಾಶಿಯ ಜಾತಕದವರಿಗೆ ಆಕಸ್ಮಿಕ ಧನಲಾಭವನ್ನು ತಂದು ಕೊಡುವ ಸಾಧ್ಯತೆ ಇದೆ.  

5/5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  





Read More