PHOTOS

Ramnavami: ವರ್ಷಗಳ ಬಳಿಕ ರಾಮನವಮಿಯಂದು ದುರ್ಲಬ ಸಂಯೋಗ, ಮೂರು ರಾಶಿಯವರಿಗೆ ಅದೃಷ್ಟ

Ramnavami: ಇಂದು (ಏಪ್ರಿಲ್ 17) ದೇಶಾದ್ಯಂತ  ಅತ್ಯಂತ ವಿಜೃಂಭಣೆಯಿಂದ ರಾಮನವಮಿಯನ್ನು ಆಚರಿಸಲಾಗುತ್ತಿದೆ. ಈ ಶುಭದಿನ ಬಹಳ ವರ್ಷಗಳ ಬಳಿಕ ಕೆಲವು ರಾಶಿಯವರಿಗ...

Advertisement
1/6
ರಾಮನವಮಿ
ರಾಮನವಮಿ

ವಾಲ್ಮೀಕಿ ರಾಮಾಯಣದ ಪ್ರಕಾರ, ಭಗವಾನ್ ಶ್ರೀ ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ತಾರೀಖಿನಂದು ಜನಿಸಿದನು ಎಂಬ ನಂಬಿಕೆ ಇದೆ. ಈ ದಿನ ಅಭಿಜಿತ್ ಮುಹೂರ್ತ ಮತ್ತು ಕರ್ಕರಾಶಿಯ ಸಮಯದಲ್ಲಿ, ಭಗವಾನ್ ವಿಷ್ಣುವಿನ ಏಳನೇ ಅವತಾರವಾದ ಭಗವಾನ್ ಶ್ರೀರಾಮನು ಭೂಮಿಯ ಮೇಲೆ ಮಾನವನಾಗಿ ಜನಿಸಿದನು ಎಂದು ಹೇಳಲಾಗುತ್ತದೆ. ಹಾಗಾಯಿ, ಈ ದಿನವನ್ನು ರಾಮನವಮಿ ಎಂದು ಆಚರಿಸಲಾಗುತ್ತದೆ. 

2/6
ದೇಶಾದ್ಯಂತ ರಾಮ್ ಲಲ್ಲಾ ಜನ್ಮದಿನ
ದೇಶಾದ್ಯಂತ ರಾಮ್ ಲಲ್ಲಾ ಜನ್ಮದಿನ

ತ್ರೇತಾಯುಗದ ನಂತರ, ಈ ವರ್ಷ ಮತ್ತೊಮ್ಮೆ ಈ ವರ್ಷ ಅಯೋಧ್ಯೆ ರಾಮಮಂದಿರದಲ್ಲಿ ಮತ್ತೊಮ್ಮೆ  ಅತ್ಯಂತ ವಿಜೃಂಭಣೆಯಿಂದ ರಾಮನವಮಿ ಆಚರಿಸಲಾಗುತ್ತಿದೆ. ದೇಶಾದ್ಯಂತ ಇದರ ಸಂಭ್ರಮ ಮನೆ ಮಾಡಿದೆ. 

3/6
ರಾಮನವಮಿಯಲ್ಲಿ ಅಪರೂಪದ ಸಂಯೋಗ
ರಾಮನವಮಿಯಲ್ಲಿ ಅಪರೂಪದ ಸಂಯೋಗ

ಈ ಬಾರಿಯ ರಾಮನವಮಿಯ ದಿನ  ಚಂದ್ರನು ಕರ್ಕ ರಾಶಿಯಲ್ಲಿದ್ದರೆ ಮತ್ತೊಂದೆಡೆ ಸೂರ್ಯನು ಅದರ ಉತ್ಕೃಷ್ಟ ರಾಶಿಚಕ್ರ ಚಿಹ್ನೆ ಮೇಷ ರಾಶಿಯಲ್ಲಿ ಇದ್ದಾನೆ. ಈ ದಿನ ಗಜಕೇಸರಿ ಯೋಗವೂ ರೂಪುಗೊಳ್ಳುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತ್ರೇತಾಯುಗದಲ್ಲಿ ಶ್ರೀರಾಮನ ಜನ್ಮದಿನದಂದು ಮಾತ್ರ ಈ ಅಪರೂಪದ ಸಂಯೋಗ ರಚನೆಯಾಗಿತ್ತು. ಇದೀಗ ಇಂದಿನ ಈ ಅಪರೂಪದ ಸಂಯೋಗವು ಮೂರು ರಾಶಿಯವರ ಅದೃಷ್ಟವನ್ನು ಬದಲಾಯಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

4/6
ಮೇಷ ರಾಶಿ
ಮೇಷ ರಾಶಿ

ರಾಮನವಮಿಯ ಈ ದಿನ ದೇವಗುರು ಬೃಹಸ್ಪತಿಯು ಮೇಷ ರಾಶಿಯಲ್ಲಿ ಸೂರ್ಯ ದೇವನ ಜೊತೆಗೆ ಇರುವುದರಿಂದ ಈ ರಾಶಿಯವರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಈ ಸಮಯದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿದ್ದು, ನಿಮ್ಮ ಮೇಲಾಧಿಕಾರಿಗಳಿಂದ ಮನ್ನಣೆ ದೊರೆಯಲಿದೆ. ವ್ಯಾಪಾರಸ್ಥರಿಗೆ ಬಂಪರ್ ಲಾಭ ಸಾಧ್ಯತೆ ಇದೆ. 

5/6
ತುಲಾ ರಾಶಿ
ತುಲಾ ರಾಶಿ

ರಾಮನವಮಿಯ ದಿನ ರೂಪುಗೊಂಡಿರುವ ಅಪರೂಪದ ಸಂಯೋಗವು ತುಲಾ ರಾಶಿಯ ಜನರಿಗೆ ಭೌತಿಕ ಸೌಕರ್ಯಗಳನ್ನು ಹೆಚ್ಚಿಸಲಿದೆ. ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಆಸ್ತಿ ಖರೀದಿಯ ಯೋಗವೂ ಇದೆ. 

6/6
ಮೀನ ರಾಶಿ
ಮೀನ ರಾಶಿ

ಇಂದು ರೂಪುಗೊಂಡಿರುವ ಅಪರೂಪದ ಸಂಯೋಗವು ಮೀನ ರಾಶಿಯ ಜನರಿಗೆ ಭಾರೀ ಅದೃಷ್ಟವನ್ನು ತರಲಿದೆ. ಈ ಸಮಯದಲ್ಲಿ ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದ್ದು, ಹೊಸ ಉದ್ಯೋಗಾವಕಾಶಗಳು ಪ್ರಾಪ್ತಿಯಾಗಲಿವೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More