PHOTOS

ನೇರಳೆ ಹಣ್ಣಿನ ಜೊತೆ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ತಿನ್ನಬಾರದು.!

ನೇರಳೆ ಹಣ್ಣು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೂ ಕೂಡಾ ಈ ಹಣ್ಣನ್ನು ತಿನ್ನುವಾಗ ಜಾಗರೂಕರಾಗಿರಬೇಕು. 

...
Advertisement
1/5
ನೇರಳೆ ಹಣ್ಣಿನಲ್ಲಿ ಅಡಗಿವೆ ಪೋಷಕಾಂಶಗಳು
ನೇರಳೆ ಹಣ್ಣಿನಲ್ಲಿ ಅಡಗಿವೆ ಪೋಷಕಾಂಶಗಳು

ನೇರಳೆ ಹಣ್ಣು ನೋಡುವುದಕ್ಕೆ ಸಣ್ಣದಾಗಿರಬಹುದು. ಆದರೆ ಇದರಲ್ಲಿ  ಪೋಷಕಾಂಶಗಳ ಕೊರತೆಯಿರುವುದಿಲ್ಲ. ಇದನ್ನು ತಿಂದರೆ ದೇಹಕ್ಕೆ ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಸೋಡಿಯಂ, ಮೆಗ್ನೀಷಿಯಂ, ವಿಟಮಿನ್ ಬಿ ಮತ್ತು ವಿಟಮಿನ್ ಸಿ ಯಥೇಚ್ಛವಾಗಿ ದೊರೆಯುತ್ತದೆ.  

2/5
ನೇರಳೆ ಹಣ್ಣಿನ ಪ್ರಯೋಜನಗಳು
 ನೇರಳೆ ಹಣ್ಣಿನ ಪ್ರಯೋಜನಗಳು

 ಮೊದಲೇ ಹೇಳಿದಂತೆ ನೇರಳೆ ಹಣ್ಣು ಆರೋಗ್ಯದ ಗಣಿ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ರಕ್ತದೊತ್ತಡವನ್ನು ನಿಯಂತ್ರಿಸಲು, ಹಲ್ಲುಗಳನ್ನು ಸ್ವಚ್ಛಗೊಳಿಸಲು, ಒಸಡುಗಳಲ್ಲಿ ರಕ್ತಸ್ರಾವವನ್ನು  ತಡೆಯಲು, ತೂಕ ನಷ್ಟಕ್ಕೆ  ನೇರಳೆ ಹಣ್ಣು ಸಹಕಾರಿ. ಆದರೆ ಈ ಹಣ್ಣಿನೊಂದಿಗೆ 3 ವಸ್ತುಗಳನ್ನು ತಿನ್ನಬಾರದು.  

3/5
ಅರಿಶಿನ
ಅರಿಶಿನ

ಅರಿಶಿನ ಕೂಡಾ ನಮ್ಮ ಆರೋಗ್ಯಕ್ಕೆ ಬಹಳಷ್ಟು ಲಾಭ ನೀಡುತ್ತದೆ. ಇದರಲ್ಲಿ ಅನೇಕ ಔಷಧೀಯ ಗುಣಗಳು ಅಡಗಿವೆ. ಆದರೆ ಇದನ್ನು ಎಂದಿಗೂ ನೇರಳೆ  ಹಣ್ಣಿನೊಂದಿಗೆ ತಿನ್ನಬಾರದು. ಈ ಎರಡು ವಸ್ತುಗಳು ಪರಸ್ಪರ ಪ್ರತಿಕ್ರಿಯಿಸುತ್ತವೆ. ಇದರಿಂದ ಹೊಟ್ಟೆ ನೋವು, ಅಲರ್ಜಿಗಳು ಸಂಭವಿಸುವ ಅಪಾಯ ಎದುರಾಗುತ್ತದೆ. 

4/5
ಹಾಲು
ಹಾಲು

 ನೇರಳೆ ಹಣ್ಣನ್ನು ಹಾಲು ಅಥವಾ ಹಾಲಿನ ಉತ್ಪನ್ನಗಳೊಂದಿಗೆ ತಿನ್ನಬಾರದು.  ಹಾಲು ಮತ್ತು ನೇರಳೆ ಹಣ್ಣನ್ನು ಒಟ್ಟಿಗೆ ತಿಂದರೆ ಅಜೀರ್ಣ, ಗ್ಯಾಸ್, ಹೊಟ್ಟೆ ನೋವಿನ  ಸಮಸ್ಯೆ ಕಾಣಿಸಿಕೊಳ್ಳಬಹುದು. ಈ ಕಾರಣದಿಂದಾಗಿ ನೇರಳೆ ಹಣ್ಣು ತಿನ್ನುವ ಮೊದಲು ಅಥವಾ ತಿಂದ ನಂತರ ತಕ್ಷಣ ಹಾಲು ಕುಡಿಯಬಾರದು.   

5/5
ಉಪ್ಪಿನಕಾಯಿ
ಉಪ್ಪಿನಕಾಯಿ

ಉಪ್ಪಿನಕಾಯಿ ತಿನ್ನುವುದರಿಂದ ಆಹಾರದ ರುಚಿ ಹೆಚ್ಚುತ್ತದೆ.  ನೇರಳೆ ಹಣ್ಣು   ತಿನ್ನುವ ಮೊದಲು ಅಥವಾ ನಂತರ ಉಪ್ಪಿನಕಾಯಿ ಸೇವಿಸಿದರೆ, ವಾಂತಿ,  ಗ್ಯಾಸ್ ಮತ್ತು ಎದೆಯುರಿ  ಸಮಸ್ಯೆಗಳು ಎದುರಾಗಬಹುದು. 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)





Read More