PHOTOS

ಶನಿ ದೇವನಿಗೆ ಬಹಳ ಪ್ರಿಯ ಈ ರಾಶಿಯವರು ! ಇವರಿಗೆ ಕಷ್ಟ ನಷ್ಟ ನೀಡುವುದಿಲ್ಲ ಛಾಯಾ ಪುತ್ರ

ಈ ರಾಶಿಯವರ ಮೇಲೆ ಶನಿಯ ಕೃಪಾ ದೃಷ್ಟಿ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ.  

...
Advertisement
1/5
ಮೀನ ರಾಶಿ
ಮೀನ ರಾಶಿ

ಮೀನ ರಾಶಿಯ ಅಧಿಪತಿ ಗುರು. ಶನಿ ಮತ್ತು ಗುರುವಿನ ಸಂಬಂಧವು  ಈ ರಾಶಿಯವರಿಗೆ ಶುಭ ಫಲಿತಾಂಶಗಳನ್ನೇ ನೀಡುತ್ತದೆ. ಶನಿದೇವನ ವಿಶೇಷ ಆಶೀರ್ವಾದ ಈ ರಾಶಿಯ ಜನರ ಮೇಲೆ ಜೀವನ ಪೂರ್ತಿ ಇರುತ್ತದೆ. 

2/5
ಕನ್ಯಾರಾಶಿ
ಕನ್ಯಾರಾಶಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ರಾಶಿಯ ಅಧಿಪತಿ ಬುಧ. ಈ ರಾಶಿಯ ಮೂರು ಅಂಶಗಳ ಅಧಿಪತಿಗಳೆಂದರೆ ಬುಧ, ಶುಕ್ರ ಮತ್ತು ಶನಿ. ಅಂತಹ ಪರಿಸ್ಥಿತಿಯಲ್ಲಿ, ಶನಿ ಮತ್ತು ಚಂದ್ರನು ತ್ರಿಕೋನ ಮನೆಯಲ್ಲಿ ಬಂದಾಗ, ಈ ರಾಶಿಯವರ ಮೇಲೆ ಏಳೂವರೆ ಶನಿಯ ಅಶುಭ ಪರಿಣಾಮ ಕಡಿಮೆಯಾಗುತ್ತದೆ ಅಥವಾ ಕೊನೆಗೊಳ್ಳುತ್ತದೆ.

3/5
ತುಲಾ ರಾಶಿ
ತುಲಾ ರಾಶಿ

ಶುಕ್ರನನ್ನು ತುಲಾ ರಾಶಿಯ ಅಧಿಪತಿ ಎಂದು ಕರೆಯಲಾಗುತ್ತದೆ. ಈ ರಾಶಿಯಲ್ಲಿ ಶನಿದೇವನು ಉತ್ಕೃಷ್ಟನಾಗಿರುತ್ತಾನೆ. ಹಾಗಾಗಿ ಎರಡೂವರೆ ಶನಿ ದೆಸೆಯಾಗಲಿ, ಸಾಡೇ ಸಾತಿಯಾಗಲಿ ಈ ರಾಶಿಯವರ ಮೇಲೆ ಯಾವುದೇ ರೀತಿಯ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. 

4/5
ಕಟಕ ರಾಶಿ
ಕಟಕ ರಾಶಿ

ಕಟಕ ರಾಶಿಯ ಅಧಿಪತಿ ಚಂದ್ರ. ಇದನ್ನು ನೀರಿನ ಅಂಶದ ಅಧಿಪತಿ ಎಂದು ಕೂಡಾ ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದ ಯಾವುದೇ ಮನೆಯಲ್ಲಿ ಮಹಾದಶಾ ನಡೆಯುತ್ತಿದ್ದರೆ ಮತ್ತು ಶನಿಯ ಸಾಡೇ ಸತಿ ಪ್ರಾರಂಭವಾದರೆ, ಈ ರಾಶಿಯವರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದರೂ ಎಲ್ಲರನ್ನು ಕಾಡುವಂತೆ ಶನಿದೇವ ಇವರನ್ನು ಕಾಡುವುದಿಲ್ಲ. 

5/5
ವೃಷಭ ರಾಶಿ
ವೃಷಭ ರಾಶಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಶನಿದೇವನ ವಿಶೇಷ ಆಶೀರ್ವಾದವಿರುತ್ತದೆ. ಈ ರಾಶಿಯ ಅಧಿಪತಿ ಕೂಡಾ ಶುಕ್ರ. ಶನಿ ದೇವನನ್ನು ಅದೃಷ್ಟದ ಸ್ಥಳ ಮತ್ತು ಕಾರ್ಯಸ್ಥಳದ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಶನಿದೇವನು ಈ ರಾಶಿಯವರ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. ಶನಿ ಸಾಡೇ ಸಾತಿ ಸಮಯದಲ್ಲಿಯೂ ಇವರ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ.

(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)  





Read More