PHOTOS

Shani Shukra Yuti 2024: ಮೂವತ್ತು ವರ್ಷಗಳ ಬಳಿಕ ಕುಂಭ ರಾಶಿಯಲ್ಲಿ ಶನಿ-ಶುಕ್ರರ ಶುಭ ಸಂಯೋಜನೆ, ಈ ಜನರ ಜೀವನದಲ್ಲಿ ಶುಕ್ರದೆಸೆ ಆರಂಭ!

ಜೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್ ತಿಂಗಳ ಆರಂಭದಲ್ಲಿ ಕುಂಭ ರಾಶಿಯಲ್ಲಿ ಶನಿ ಹಾಗೂ ಸೂರ್ಯರ ಶುಭ ಸಂಯೋಜನೆ ನೆರವೇರಲಿದ್ದು, ಇದರಿಂದ ಕೆಲ ರಾಶಿಗಳ ಜನರಿಗೆ ಪ್ರತಿಯ...

Advertisement
1/8
ಶನಿ-ಶುಕ್ರ ಮೈತ್ರಿ 2024
ಶನಿ-ಶುಕ್ರ ಮೈತ್ರಿ 2024

Shani Shukra Yuti 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್ ತಿಂಗಳ ಆರಂಭದಲ್ಲಿ ಕುಂಭ ರಾಶಿಯಲ್ಲಿ ಶನಿ ಹಾಗೂ ಸೂರ್ಯರ ಶುಭ ಸಂಯೋಜನೆ ನೆರವೇರಲಿದ್ದು, ಇದರಿಂದ ಕೆಲ ರಾಶಿಗಳ ಜನರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಅಪಾರ ಯಶಸ್ಸು ಸಿಗಲಿದೆ (Spiritua News In Kannada)  

2/8
ಶನಿ-ಶುಕ್ರ ಮೈತ್ರಿ 2024
ಶನಿ-ಶುಕ್ರ ಮೈತ್ರಿ 2024

ಮಿಥುನ ರಾಶಿ: ಈ ಯೋಗ ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ರಚನೆಯಾಗುತ್ತಿದೆ. ಇದರಿಂದ ನಿಮಗೆ ಕಾಲಕಾಲಕ್ಕೆ ಧನಲಾಭ ಉಂಟಾಗಲಿದೆ. ನೀವು ಅಂದುಕೊಂಡ ನಿಮ್ಮ ಎಲ್ಲಾ ಯೋಜನೆಗಳು ಪೂರ್ಣಗೊಳ್ಳಲಿವೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ವೃತ್ತಿ ಜೀವನದಲ್ಲಿ ಹಲವು ಶುಭ ಸಮಾಚಾರಗಳು ಸಿಗಲಿವೆ. ಆಕಸ್ಮಿಕ ಧನಪ್ರಾಪ್ತಿಯ ಸ್ಟ್ರಾಂಗ್ ಸಂಕೇತಗಳಿವೆ. ದೇಶ ವಿದೇಶಗಳಿಗೆ ಯಾತ್ರೆ ಕೂಡ ಸಂಭವಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಸಮಯ ಸಾಕಷ್ಟು ಅದ್ಬುತವಾಗಿದೆ.   

3/8
ಶನಿ-ಶುಕ್ರ ಮೈತ್ರಿ 2024
ಶನಿ-ಶುಕ್ರ ಮೈತ್ರಿ 2024

ಕುಂಭ ರಾಶಿ: ಈ ಯೋಗ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಅಪಾರ ಹೊಳಪು ಉತ್ಸಾಹ ಕಂಡುಬರಲಿದೆ. ಶನಿ ಶುಕ್ರರ ಮೈತ್ರಿಯ ಕಾರಣ ನಿಮ್ಮ ಜ್ಞಾನದಲ್ಲಿ ವೃದ್ಧಿಯಾಗಲಿದ್ದು, ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ. ಶನಿ ನಿಮ್ಮ ಗೋಚರ ಜಾತಕದಲ್ಲಿ ಶಶ ಮಹಾಪುರುಷ ರಾಜಯೋಗ ಕೂಡ ನಿರ್ಮಿಸಿದ್ದು, ಇದರಿಂದ ನಿಮಗೆ ಆಸ್ತಿಪಾಸ್ತಿ-ವಾಹನ ಸುಖ ಪ್ರಾಪ್ತಿಯಾಗಲಿದೆ. ಅವಿವಾಹಿತ ಜನರಿಗೆ ವಿವಾಹ ಪ್ರಸ್ತಾಪ ಬರುವ ಸಾಧ್ಯತೆ ಇದೆ.   

4/8
ಶನಿ-ಶುಕ್ರ ಮೈತ್ರಿ 2024
ಶನಿ-ಶುಕ್ರ ಮೈತ್ರಿ 2024

ತುಲಾ ರಾಶಿ: ಈ ಯೋಗ ನಿಮ್ಮ ಜಾತಕದ ಪಂಚಮ ಭಾವದಲ್ಲಿ ರಚನೆಯಾಗಲಿದೆ. ಹೀಗಿರುವಾಗ ಮಕ್ಕಳಿಗೆ ಸಂಬಂಧಿಸಿದ ಹಲವು ಒಳ್ಳೆಯ ಸುದ್ದಿಗಳನ್ನು ನೀವು ಪಡೆಯುವಿರಿ. ಅರ್ಥಾತ್ ಮಕ್ಕಳ ವಿವಾಹ ಅಥವಾ ನೌಕರಿ ಸುದ್ದಿ ನಿಮಗೆ ಸಿಗಲಿದೆ. ತುಲಾ ರಾಶಿಯ ಜನರ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಲಾಭ ಸಿಗಲಿದೆ. ಇದಲ್ಲದೆ ನಿಮಗೆ ಆಕಸ್ಮಿಕ ಧನಲಾಭ ಕೂಡ ಸಂಭವಿಸುವ ಸಾಧ್ಯತೆ ಇದೆ. ಪ್ರೇಮ ಸಂಬಂಧಗಳಲ್ಲಿಯೂ ಕೂಡ ಯಶಸ್ಸು ನಿಮ್ಮದಾಗಲಿದೆ.   

5/8
ಶನಿ-ಶುಕ್ರ ಮೈತ್ರಿ 2024
ಶನಿ-ಶುಕ್ರ ಮೈತ್ರಿ 2024

ವೃಶ್ಚಿಕ ರಾಶಿ: ಈ ಯುತಿ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ರಚನೆಯಾಗುತ್ತಿದ್ದು, ಈ ಅವಧಿಯಲ್ಲಿ ನಿಮಗೆ ವಾಹನ ಆಸ್ತಿಪಾಸ್ತಿ ಸುಖ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ ನಿಮಗೆ ಎಲ್ಲಾ ರೀತಿಯ ಭೌತಿಕ ಸುಖಗಳು ಪಾಪ್ತಿಯಾಗಲಿವೆ. ನೌಕರಿ, ಪ್ರಮೋಷನ್ ಭಾಗ್ಯ ಕೂಡ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಪಿತ್ರಾರ್ಜಿತ ಸಂಪತ್ತಿನ ಲಾಭ ಕೂಡ ನಿಮಗೆ ಸಿಗುವ ಸಾಧ್ಯತೆ ಇದೆ. ಸಾಮಾಜಿಕ ಕ್ಷೇತ್ರದಲ್ಲಿ ಪ್ರತಿಷ್ಠೆಯ ಲಾಭ ಕೂಡ ನಿಮಗೆ ಸಿಗಲಿದೆ. ನೌಕರ ವರ್ಗದ ಜನರಿಗೆ ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹನ ಲಾಭ ಸಿಗಲಿದೆ.   

6/8
ಶನಿ-ಶುಕ್ರ ಮೈತ್ರಿ 2024
ಶನಿ-ಶುಕ್ರ ಮೈತ್ರಿ 2024

ಸಿಂಹ ರಾಶಿ: ಈ ಶುಭ ಸಂಯೋಜನೆ ನಿಮ್ಮ ಗೋಚರ ಜಾತಕದ ಸಪ್ತಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇದರಿಂದ ನಿಮಗೆ ಈ ಅವಧಿಯಲ್ಲಿ ಪಾರ್ಟ್ನರ್ಶಿಪ್ ಕೆಲಸಗಳಿಂದ ಲಾಭ ಸಿಗಲಿದೆ. ವಿವಾಹಿತರ ವೈವಾಹಿಕ ಜೀವನ ಸುಖಮಯವಾಗಿರಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರುವ ಸಾಧ್ಯತೆ ಇದೆ. ನಿಮ್ಮ ಎಲ್ಲಾ ಸರ್ಕಾರಿ ಕೆಲಸಗಳು ಪೂರ್ಣಗೊಳ್ಳಲಿವೆ. ಶನಿ ನಿಮ್ಮ ಗೋಚರ ಜಾತಕದಲ್ಲಿ ಶಶ ಮಹಾಪುರುಷ ರಾಜಯೋಗ ಕೂಡ ನಿರ್ಮಿಸಿರುವ ಕಾರಣ ವ್ಯಾಪಾರ ವರ್ಗದ ಜನರಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದ್ದು, ಲಾಭ ದುಪಾಟ್ಟಾಗಲಿದೆ.  

7/8
ಶನಿ-ಶುಕ್ರ ಮೈತ್ರಿ 2024
ಶನಿ-ಶುಕ್ರ ಮೈತ್ರಿ 2024

ವೃಷಭ ರಾಶಿ: ಈ ಶುಭ ಸಂಯೋಜನೆ ನಿಮ್ಮ ಜಾತಕದ ಕರ್ಮ ಭಾವದಲ್ಲಿ ರಚನೆಯಾಗುತ್ತಿದೆ. ಇನ್ನೊಂದೆಡೆ ಶುಕ್ರ ನಿಮ್ಮ ಜಾತಕಕ್ಕೆ ರಾಷ್ಯಾಧಿಪ ಕೂಡ ಹೌದು, ಹೀಗಾಗಿ ಈ ಅವಧಿಯಲ್ಲಿ ನಿಮಗೆ ಕೆಲಸ ಕಾರ್ಯಗಳಲ್ಲಿ ಸಂಪೂರ್ಣ ಲಾಭ ಸಿಗಲಿದ್ದು,  ಕೆಲಸ ಕಾರ್ಯಗಳ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ. ನೌಕರಿಯಲ್ಲಿ ನಿಮಗೆ ನಿಮ್ಮ ಹಿರಿಯರ ಬೆಂಬಲ ಸಿಗಲಿದೆ,. ವ್ಯಾಪಾರಿಗಳಿಗೆ ಉತ್ತಮ ಧನಲಾಭ ಕೂಡ ಸಿಗಲಿದೆ. ವ್ಯಾಪಾರ ವಿಸ್ತರಿಸುವಲ್ಲಿ ನೀವು ಯಶಸ್ವಿಯಾಗುವಿರಿ.   

8/8
ಶನಿ-ಶುಕ್ರ ಮೈತ್ರಿ 2024
ಶನಿ-ಶುಕ್ರ ಮೈತ್ರಿ 2024

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  





Read More