PHOTOS

Shani Nakshatra Parivartan: 2024ರಲ್ಲಿ ಶನಿ ನಕ್ಷತ್ರ ಪರಿವರ್ತನೆಯಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ

Shani Nakshatra Parivartan: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಗ್ರಹವನ್ನು ನ್ಯಾಯದ ದೇವರು ಎಂದು ಬಣ್ಣಿಸಲಾಗುತ್ತದೆ. ಶನಿ ದೇವನು ಮುಂದಿನ ವರ್ಷ 2024ರಲ್ಲಿ ಕೆಲ...

Advertisement
1/8
ಶನಿ ಗ್ರಹ
ಶನಿ ಗ್ರಹ

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ದೇವನು ಪ್ರತಿಯೊಬ್ಬರಿಗೂ ಸಹ ಅವರವರ ಕೆಲಸಗಳಿಗೆ ತಕ್ಕಂತೆ ಫಲ ನೀಡುವ ಕರ್ಮಫಳದಾತ. ಶನಿಯ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಸಹ ಎಲ್ಲಾ 12 ರಾಶಿಯವರ ಮೇಲೆ ಧನಾತ್ಮಕ  ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರಲಿದೆ. 

2/8
ಶನಿ ರಾಶಿ ಪರಿವರ್ತನೆ
ಶನಿ ರಾಶಿ ಪರಿವರ್ತನೆ

2023ರ ಆರಂಭದಲ್ಲಿ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿರುವ ಶನಿ ಮಹಾತ್ಮ 2025ರವರೆಗೂ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಹಾಗಾಗಿ, 2024ರಲ್ಲಿ ಶನಿ ರಾಶಿಚಕ್ರ ಬದಲಾವಣೆ ಆಗುವುದಿಲ್ಲ. 

3/8
ಶನಿ ನಕ್ಷತ್ರ ಬದಲಾವಣೆ
ಶನಿ ನಕ್ಷತ್ರ ಬದಲಾವಣೆ

ಆದರೆ, ಸದ್ಯ ಶತಭಿಷ ನಕ್ಷತ್ರದಲ್ಲಿ ಸಂಚರಿಸುತ್ತಿರುವ ಶನಿ ಮಹಾತ್ಮನು ಏಪ್ರಿಲ್ 6, 2024 ರಂದು ಪೂರ್ವ ಭಾದ್ರಪದ ನಕ್ಷತ್ರವನ್ನು ಪ್ರವೇಶಿಸುತ್ತಾನೆ.

4/8
ಶನಿ ಸಂಚಾರ ಬದಲಾವಣೆ
ಶನಿ ಸಂಚಾರ ಬದಲಾವಣೆ

ಪೂರ್ವ ಭಾದ್ರಪದ ನಕ್ಷತ್ರಕ್ಕೆ ಶನಿ ಪ್ರವೇಶವು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಈ ಸಮಯವು ಮೂರು ರಾಶಿಯವರ ಜೀವನದಲ್ಲಿ ಮಲಗಿರುವ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ ಏಡು ಹೇಳಲಾಗುತ್ತಿದೆ. ಅವುಗಳೆಂದರೆ...

5/8
ಮೇಷ ರಾಶಿ
ಮೇಷ ರಾಶಿ

2024ರಲ್ಲಿ ಶನಿಯ ನಕ್ಷತ್ರ ಬದಲಾವನೆಯು ಮೇಷ ರಾಶಿಯವರಿಗೆ ಶುಭ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ಶನಿ ಕೃಪೆಯಿಂದಾಗಿ ಮೇಷ ರಾಶಿಯವರು ಪ್ರತಿ ಕೆಲಸದಲ್ಲೂ ಕೀರ್ತಿ, ಯಶಸ್ಸನ್ನು ಗಳಿಸುವರು. 

6/8
ವೃಷಭ ರಾಶಿ
ವೃಷಭ ರಾಶಿ

ಹೊಸ ವರ್ಷದಲ್ಲಿ ಶನಿ ದೇವನು ವೃಷಭ ರಾಶಿಯವರ ಮೇಲೂ ದಯೆ ತೋರಲಿದ್ದು, ಈ ಸಮಯದಲ್ಲಿ ವೃತ್ತಿ ಜೀವನದಲ್ಲಿ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ನೀವು ಪಡೆಯಲಿದ್ದೀರಿ. ವಿದೇಶ ಪ್ರವಾಸ ಯೋಗವೂ ಇದೆ. 

7/8
ಸಿಂಹ ರಾಶಿ
ಸಿಂಹ ರಾಶಿ

ಮುಂಬರುವ ವರ್ಷ ಎಂದರೆ 2024ರಲ್ಲಿ ಸಿಂಹ ರಾಶಿಯವರಿಗೂ ಸಹ ಶನಿ ದೇವನು ಪ್ರತಿ ಕ್ಷೇತ್ರದಲ್ಲೂ ಕೈ ಹಿಡಿದು ನಡೆಸಲಿದ್ದಾನೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ವೈಯಕ್ತಿಕ ಜೀವನವೂ ಉತ್ತಮವಾಗಿದ್ದು ವೈವಾಹಿಕ ಜೀವನವು ಆನಂದದಾಯವಾಗಿರುತ್ತದೆ.

8/8
ಸೂಚನೆ
ಸೂಚನೆ

ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.   





Read More