PHOTOS

Shani Nakshatra Parivartan: ಶನಿ ನಕ್ಷತ್ರ ಪರಿವರ್ತನೆ ಈ 3 ರಾಶಿಯ ಜನರಿಗೆ ಕೀರ್ತಿ ಯಶಸ್ಸು

Shani Nakshatra Parivartan:  ಕರ್ಮಫಲದಾತ ಶನಿ ದೇವ ಶೀಘ್ರದಲ್ಲೇ ಪೂರ್ವಭಾದ್ರಪದ  ಮೊದಲ ಪಾದವನ್ನು ತೊರೆದು, ಎರಡನೇ ಪಾದದಲ್ಲಿ ಸಾಗಲಿದೆ. ಇದರ ಪರಿ...

Advertisement
1/6
ಶನಿ ನಕ್ಷತ್ರ ಪರಿವರ್ತನೆ
ಶನಿ ನಕ್ಷತ್ರ ಪರಿವರ್ತನೆ

ಜ್ಯೋತಿಷ್ಯ ಶಾಸ್ತ್ರದಲ್ಲಿ, ನ್ಯಾಯದ ದೇವರು ಎಂದು ಪರಿಗಣಿಸಲಾಗಿರುವ ಶನಿ ದೇವನು ಏಪ್ರಿಲ್ 6 ರಂದು  ಪೂರ್ವಭಾದ್ರಪದ ನಕ್ಷತ್ರದ ಮೊದಲ ಪಾದವನ್ನು ಪ್ರವೇಶಿಸಿದನು. ಮೇ ತಿಂಗಳಿನ ಎರಡನೇ ವಾರದಲ್ಲಿ ಪೂರ್ವಭಾದ್ರಪದ ಮೊದಲ ಪಾದವನ್ನು ಬಿಟ್ಟು ಎರಡನೇ ಪಾದಕ್ಕೆ ಪದಾರ್ಪಣೆ ಮಾಡಲಿದ್ದಾನೆ. 

2/6
ಮೇ ತಿಂಗಳಿನಲ್ಲಿ ಶನಿ ನಕ್ಷತ್ರ ಪರಿವರ್ತನೆ
ಮೇ ತಿಂಗಳಿನಲ್ಲಿ ಶನಿ ನಕ್ಷತ್ರ ಪರಿವರ್ತನೆ

ಶನಿ ದೇವನು 2024ರ ಮೇ 12 ರಂದು ಬೆಳಿಗ್ಗೆ 08:08ಕ್ಕೆ ನಕ್ಷತ್ರ ಪರಿವರ್ತನೆ ಹೊಂದಲಿದ್ದು, ಆಗಸ್ಟ್ 18 ರವರೆಗೆ ಪೂರ್ವಭಾದ್ರಪದ  ನಕ್ಷತ್ರಪುಂಜದ ಎರಡನೇ ಪಾದದಲ್ಲೇ ಸಂಚರಿಸಲಿದ್ದಾನೆ.

3/6
. ಶನಿ ನಕ್ಷತ್ರ ಪರಿವರ್ತನೆ ಪರಿಣಾಮ
. ಶನಿ ನಕ್ಷತ್ರ ಪರಿವರ್ತನೆ ಪರಿಣಾಮ

ಶನಿ ನಕ್ಷತ್ರ ಪರಿವರ್ತನೆಯು ಎಲ್ಲಾ 12 ರಾಶಿಯವರ ಜೀವನದ ಮೇಲೂ ಮಹತ್ವದ ಪರಿಣಾಮವನ್ನು ಬೀರುತ್ತದೆ. ಆದರೂ, ಈ ಸಮಯದಲ್ಲಿ ಮೂರು ರಾಶಿಯವರು ಅಪಾರ ಯಶಸ್ಸು, ಸಂಪತ್ತನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

4/6
ಮೇಷ ರಾಶಿ
 ಮೇಷ ರಾಶಿ

ಶನಿ ನಕ್ಷತ್ರ ಪರಿವರ್ತನೆಯು ಮೇಷ ರಾಶಿಯವರ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲಿದೆ. ಈ ಸಮಯದಲ್ಲಿ ಬೇರೆಡೆ ಸಿಲುಕಿರುವ ಹಣ ಕೈ ಸೇರಲಿದೆ. ಉದ್ಯೋಗಿಗಳಿಗೆ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಹೂಡಿಕೆಯಿಂದ ಲಾಭವನ್ನು ನಿರೀಕ್ಷಿಸಬಹುದು. 

5/6
ಕನ್ಯಾ ರಾಶಿ
ಕನ್ಯಾ ರಾಶಿ

ಶನಿ ನಕ್ಷತ್ರ ಪರಿವತ್ರನೆಯು ಕನ್ಯಾ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀಡಲಿದೆ. ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ವ್ಯಾಪಾರಸ್ಥರು ಹೆಚ್ಚಿನ ಲಾಭವನ್ನು ನಿರೀಕ್ಷಿಸಬಹುದು. 

6/6
ಧನು ರಾಶಿ
ಧನು ರಾಶಿ

ಶನಿ ನಕ್ಷತ್ರ ಬದಲಾವಣೆಯು ಧನು ರಾಶಿಯ ಜನರಿಗೆ ಉದ್ಯೋಗ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳನ್ನು ನೀಡಲಿದೆ. ಹೊಸ ಕೆಲಸವನ್ನು ಆರಂಭಿಸಲು ಬಯಸುವವರು ಮೇ 12ರ ಬಳಿಕ ಕೆಲಸ ಪ್ರಾರಂಭಿಸುವುದರಿಂದ ಕಾರ್ಯ ಸಿದ್ಧಿ. ದಾಂಪತ್ಯ ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿ ನೆಲೆಸಿರುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More