PHOTOS

ಶನಿ ದೇವನ ಅಚ್ಚುಮೆಚ್ಚಿನ ರಾಶಿಗಳಿವು, ಇವರ ಬದುಕಿನಲ್ಲಿ ಬರೀ ಯಶಸ್ಸನ್ನಷ್ಟೇ ನೀಡ್ತಾನೆ ಕರ್ಮಫಲದಾತ

Shani Deva: ಜ್ಯೋತಿಷ್ಯ ಶಾಸ್ತ್ರದಲ್ಲಿ, ಕರ್ಮಫಲದಾತ ಎಂದು ಕರೆಯಲ್ಪಡುವ ಶನಿ ಮಹಾತ್ಮ ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ ವ್ಯಕ್ತಿಯ ಜೀವನದಲ್ಲಿ ಕೇವಲ ಶುಭ ಫಲಗಳ...

Advertisement
1/8
ಶನಿ ಚಲನೆ
ಶನಿ ಚಲನೆ

ಜ್ಯೋತಿಷ್ಯದಲ್ಲಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಶನಿ ಎರಡೂವರೆ ವರ್ಷಗಳಿಗೊಮ್ಮೆ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಸದ್ಯ ಕುಂಭ ರಾಶಿಯಲ್ಲಿರುವ ಶನಿ 2025ರ ಮಾರ್ಚ್ ತಿಂಗಳಿನಲ್ಲಿ ಮೀನ ರಾಶಿಗೆ ಪ್ರವೇಶಿಸುತ್ತಾನೆ. 

2/8
ಶನಿ ಕೃಪೆ
ಶನಿ ಕೃಪೆ

ಜ್ಯೋತಿಷ್ಯದಲ್ಲಿ ಕರ್ಮಫಲದಾತ ಎಂದು ಕರೆಯಲ್ಪಡುವ ಶನಿ ಎಲ್ಲಾ ಸಮಯದಲ್ಲೂ ಕೆಲವು ರಾಶಿಯವರ ಮೇಲೆ ವಿಶೇಷ ಕೃಪೆಯನ್ನು ತೋರುತ್ತಾನೆ. 

3/8
ಶನಿಯ ನೆಚ್ಚಿನ ರಾಶಿಗಳು
ಶನಿಯ ನೆಚ್ಚಿನ ರಾಶಿಗಳು

ಧಾರ್ಮಿಕ ಜ್ಯೋತಿಷ್ಯದ ಪ್ರಕಾರ, ದ್ವಾದಶ ರಾಶಿಗಳಲ್ಲಿ ನಾಲ್ಕು ರಾಶಿಗಳನ್ನು ಶನಿಯ ನೆಚ್ಚಿನ ರಾಶಿಗಳು ಎನ್ನಲಾಗುತ್ತದೆ. 

4/8
ತುಲಾ ರಾಶಿ
ತುಲಾ ರಾಶಿ

ಶನಿಯ ಅತ್ಯಂತ ಪ್ರಿಯ ರಾಶಿಗಳಲ್ಲಿ ತುಲಾ ರಾಶಿ ಮೊದಲ ರಾಶಿ. ಶನಿ ಕೃಪೆಯಿಂದ ಇವರ ಬದುಕಿನಲ್ಲಿ ಬೆಟ್ಟದಂತ ಸಮಸ್ಯೆಯೂ ಮಂಜಿನಂತೆ ಕರಗುತ್ತದೆ. 

5/8
ಧನು ರಾಶಿ
ಧನು ರಾಶಿ

ಗುರು ಅಧಿಪತಿ ರಾಶಿಯಾದ ಧನು ರಾಶಿಯನ್ನು ಸಹ ಶನಿಯ ನೆಚ್ಚಿನ ರಾಶಿಗಳಲ್ಲಿ ಒಂದೆಂದು ಎಣಿಸಲಾಗಿದೆ. ಶನಿ ದಯೆಯಿಂದ ಇವರು ತಮ್ಮ ಜೀವನದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತಾರೆ. 

6/8
ಮಕರ ರಾಶಿ
ಮಕರ ರಾಶಿ

ತನ್ನದೇ ರಾಶಿಚಕ್ರ ಚಿಹ್ನೆಯಾದ ಮಕರ ರಾಶಿಯೆಂದರೆ ಶನಿ ಮಹಾತ್ಮನಿಗೆ ಬಲು ಪ್ರೀತಿ. ಹಾಗಾಗಿಯೇ ಸಾಡೇ ಸಾತಿ, ಧೈಯಾ ಕಾಲದಲ್ಲೂ ಈ ರಾಶಿಯವರಿಗೆ ಶನಿ ಹೆಚ್ಚು ಬಾಧಿಸುವುದಿಲ್ಲ. 

7/8
ಕುಂಭ ರಾಶಿ
ಕುಂಭ ರಾಶಿ

ಕೆಲಸದಲ್ಲಿ ಪ್ರಾಮಾಣಿಕರಾಗಿರುವ ಈ ರಾಶಿಯವರ ಕಂಡರೂ ಶನಿಗೆ ಎಲ್ಲಿಲ್ಲದ ಪ್ರೀತಿ. ಹಾಗಾಗಿಯೇ, ಇವರ ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸುವ ಕರ್ಮಫಲದಾತ ಇವರಿಗೆ ಎಂದಿಗೂ ಯಾವುದಕ್ಕೂ ಕೊರತೆಯಾಗದಂತೆ ಕಾಪಾಡುತ್ತಾನೆ. 

8/8
ಶನಿ ದೇವನ ಪ್ರಿಯ ರಾಶಿಗಳು
ಶನಿ ದೇವನ ಪ್ರಿಯ ರಾಶಿಗಳು

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More