PHOTOS

SBI Investment: ತಿಂಗಳಿಗೆ 1000 ರೂ. ಹೂಡಿಕೆ ಮಾಡಿ 1.59 ಲಕ್ಷ ರೂ.ಲಾಭ ನಿಮ್ಮದಾಗಿಸಿಕೊಳ್ಳಿ

g> ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಉತ್ತಮ ಬಡ್ಡಿಯನ್ನು ಪಾವತಿಸುತ್ತದೆ. ಎಸ್ಬಿಐ ಅಧಿಕೃತ ವೆಬ್ ಸೈಟ್ ಆಗಿರುವ Sbi.co.in ಪ್ರಕಾರ, ಎಸ್ಬಿಐ ತನ್ನ ಆರ...

Advertisement
1/5

ದೇಶದ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮಗೆ ಹೂಡಿಕೆಗೆ ಒಂದು ಸುವರ್ಣಾವಕಾಶವನ್ನು ನೀಡುತ್ತಿದ್ದು, ಅದರಲ್ಲಿ ನೀವು ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ಆದಾಯವನ್ನು ಪಡೆಯಬಹುದು. ವಿಶೇಷವೆಂದರೆ ಎಸ್‌ಬಿಐನ ಈ ಯೋಜನೆಯಲ್ಲಿ ತಿಂಗಳಿಗೆ ಕೇವಲ 1,000 ರೂಪಾಯಿ ಹೂಡಿಕೆ ಮಾಡುವ ಮೂಲಕ ನೀವು 1 ಲಕ್ಷದ 59 ಸಾವಿರ ರೂಪಾಯಿಗಳ ಲಾಭವನ್ನು ಪಡೆಯಬಹುದು. ಈ ಯೋಜನೆಯ ಬಗ್ಗೆ ತಿಳಿಯೋಣ ಬನ್ನಿ,

2/5

ಎಸ್ಬಿಐ ಆರ್. ಡಿ ಠೇವಣಿ ಮೇಲೆ ಉತ್ತಮ ಬಡ್ಡಿದರ - ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಉತ್ತಮ ಬಡ್ಡಿಯನ್ನು ಪಾವತಿಸುತ್ತದೆ. ಎಸ್ಬಿಐ ಅಧಿಕೃತ ವೆಬ್ ಸೈಟ್ ಆಗಿರುವ Sbi.co.in ಪ್ರಕಾರ, ಎಸ್ಬಿಐ ತನ್ನ ಆರ್.ಡಿ ಯೋಜನೆಯಲ್ಲಿ 3 ರಿಂದ 5 ವರ್ಷದ ಠೇವಣಿ ಮೇಲೆ ಶೇ.5.3 ರಷ್ಟು ಬಡ್ಡಿಯನ್ನು ಪಾವತಿಸುತ್ತದೆ. ಅಷ್ಟೇ ಅಲ್ಲ ಒಂದು ವೇಳೆ ನಿಮ್ಮ ಆರ್. ಡಿ ಯೋಜನೆ ಐದು ವರ್ಷವನ್ನು ದಾಟಿದರೆ, ಎಸ್. ಬಿ. ಐ ನಿಮಗೆ ಶೇ.5.4ರಷ್ಟು ಬಡ್ಡಿದರ ನೀಡುತ್ತದೆ. 

3/5

ಹಿರಿಯ ನಾಗರಿಕರಿಗೆ ಹೆಚ್ಚಿನ ಲಾಭ - ಒಂದು ವೇಳೆ ಯಾವುದೇ ಹಿರಿಯ ನಾಗರಿಕ ಆರ್. ಡಿ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅವರಿಗೆ ಶೇ.0.80 ರಷ್ಟು ಹೆಚ್ಚುವರಿ ಬಡ್ಡಿ ದರ ನೀಡಲಾಗುವುದು. ಅಂದರೆ ಎಸ್ಬಿಐ ಹಿರಿಯ ನಾಗರಿಕರಿಗೆ 5 ವರ್ಷಕ್ಕಿಂತ ಹೆಚ್ಚಿನ ಆರ್.ಡಿ ಹೂಡಿಕೆಯ ಮೇಲೆ ಶೇ.6.2ರಷ್ಟು ಬಡ್ಡಿ ದರವನ್ನು ಬಡ್ಡಿದರವನ್ನು ಪಾವತಿಸುತ್ತದೆ.   

4/5

ಎಸ್ಬಿಐ ಆರ್. ಡಿ ಮೇಲೆ ದಂಡದ ನಿಯಮ - ನೀವು ಎಸ್ಬಿಐ ಆರ್‌ಡಿ ಖಾತೆಯನ್ನು ತೆರೆದಿದ್ದರೆ ಮತ್ತು ಸಮಯಕ್ಕೆ ಸರಿಯಾಗಿ ಪಾವತಿ ಮಾಡದಿದ್ದರೆ, ಎಸ್‌ಬಿಐ ಸಹ ದಂಡವನ್ನು ವಿಧಿಸುತ್ತದೆ. 5 ವರ್ಷಕ್ಕಿಂತ ಕಡಿಮೆ ಅವಧಿಯ ಆರ್‌ಡಿ 100 ರೂ.ಗೆ 1.5 ರೂ. 5 ವರ್ಷ ಮೇಲ್ಪಟ್ಟ ಆರ್‌ಡಿಗಳ ಮೇಲೆ 100 ರೂ.ಗೆ 2 ರೂ.ಗಳನ್ನು ವಿಧಿಸಲಾಗುತ್ತದೆ. ಅಂದರೆ 1000 ರೂಪಾಯಿಯ 20 ರೂಪಾಯಿ ಎಂದರ್ಥ. 6 ತಿಂಗಳವರೆಗೆ ನಿರಂತರವಾಗಿ ಹಣವನ್ನು ಠೇವಣಿ ಮಾಡದಿದ್ದರೆ, SBI ಆ ಯೋಜನೆಯನ್ನು ಮುಚ್ಚುತ್ತದೆ ಮತ್ತು ನಿಮ್ಮ ಉಳಿತಾಯ ಖಾತೆಗೆ ಎಲ್ಲಾ ಹಣವನ್ನು ವರ್ಗಾಯಿಸುತ್ತದೆ

5/5

ಎಸ್ಬಿಐ ಆರ್.ಡಿ ಮೇಲೆ ಸೇವಾ ಶುಲ್ಕ - sbi.co.in ಪ್ರಕಾರ, ಹಣವನ್ನು ಸಮಯಕ್ಕೆ 3-4 ಬಾರಿ ಠೇವಣಿ ಮಾಡದಿದ್ದರೆ, ಬ್ಯಾಂಕ್ 10 ರೂ. ವಿಧಿಸುತ್ತದೆ. ಇದನ್ನು ಸೇವಾ ಶುಲ್ಕವಾಗಿ ಪಡೆಯಲಾಗುತ್ತದೆ.





Read More