PHOTOS

9 ಗಂಟೆಗಳ ಕಾಲ ನಿರಂತರ ಬ್ಯಾಟಿಂಗ್‌ ಮಾಡಿ ಟೀಂ ಇಂಡಿಯಾವನ್ನು ಸೋಲಿನಿಂದ ಪಾಲು ಮಾಡಿದ ಈ ಆಟಗಾರ ಯಾರು ಗೊತ್ತಾ..?

ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಈಗ ಕಾಮೆಂಟರಿಗೆ ಪ್ರವೇಶಿರಬಹುದು ಆದರೆ ಇವರು ಆಗಿನ ಕಾಲಕ್ಕೆ ಟೀಂ ಇಂಡಿಯಾದ ಸ್ಟಾರ್‌ ಆಟಗಾರರಲ್ಲಿ ಒಬ್ಬರು. ಮಂಜ್ರೇಕರ್ ತಮ್ಮ ವೃತ್...

Advertisement
1/5

ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಈಗ ಕಾಮೆಂಟರಿಗೆ ಪ್ರವೇಶಿರಬಹುದು ಆದರೆ ಇವರು ಆಗಿನ ಕಾಲಕ್ಕೆ ಟೀಂ ಇಂಡಿಯಾದ ಸ್ಟಾರ್‌ ಆಟಗಾರರಲ್ಲಿ ಒಬ್ಬರು. ಮಂಜ್ರೇಕರ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 111 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 1992ರಲ್ಲಿ ಒಮ್ಮೆ ಟೀಂ ಇಂಡಿಯಾ ಸೋಲಿನ ಸನಿಹದಲ್ಲಿದ್ದರೂ ಸಂಜಯ್ ಬಲದಿಂದ ಟೀಂ ಇಂಡಿಯಾ ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

2/5

 1992ರ, ಅಕ್ಟೋಬರ್ 18 ರಿಂದ ಹರಾರೆಯಲ್ಲಿ ಪ್ರಾರಂಭವಾದ ಟೆಸ್ಟ್ ಪಂದ್ಯದಲ್ಲಿ ಜಿಂಬಾಬ್ವೆ ಮೊದಲ ಇನ್ನಿಂಗ್ಸ್‌ನಲ್ಲಿ 456 ರನ್ ಗಳಿಸಿತು. ಇದಾದ ಬಳಿಕ ಅಜರುದ್ದೀನ್ ನಾಯಕತ್ವದಲ್ಲಿ ಭಾರತ ತಂಡದ ಆರಂಭ ವಿಶೇಷವೇನೂ ಆಗಿರಲಿಲ್ಲ. ರವಿಶಾಸ್ತ್ರಿ (11), ಸಚಿನ್ ತೆಂಡೂಲ್ಕರ್ (0) ಮತ್ತು ಅಜರುದ್ದೀನ್ (9) ಬೇಗನೆ ಪೆವಿಲಿಯನ್‌ಗೆ ಮರಳಿದರು. ಭಾರತ ತಂಡದ 5 ವಿಕೆಟ್‌ಗಳು 101 ರನ್‌ಗಳಿಗೆ ಪತನಗೊಂಡಿದ್ದವು. ಆದರೆ ಮಂಜ್ರೇಕರ್ ಸುಮಾರು 9 ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿ ತಂಡವನ್ನು 300ರ ಗಡಿ ದಾಟಿಸಿದರು. 422 ಎಸೆತಗಳನ್ನು ಎದುರಿಸಿ ಶತಕ ಗಳಿಸಿದರು. ಆದರೆ, ಈ ಪಂದ್ಯ ಡ್ರಾ ಆಗಿತ್ತು.  

3/5

ಭಾರತ ಮತ್ತು ಪಾಕಿಸ್ತಾನ ನಡುವಿನ 4 ಪಂದ್ಯಗಳ ಸರಣಿಯ ಮೂರನೇ ಟೆಸ್ಟ್ 1989 ರ ಡಿಸೆಂಬರ್ 1 ರಿಂದ 6 ರವರೆಗೆ ಲಾಹೋರ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಸಂಜಯ್ ಮಂಜ್ರೇಕರ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರು. ಅವರು 401 ಎಸೆತಗಳನ್ನು ಎದುರಿಸಿ 218 ರನ್ ಗಳಿಸಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 28 ಬೌಂಡರಿಗಳನ್ನು ಹೊಡೆದರು. ಇದಾದ ಬಳಿಕ ಅವರು ರನ್ ಔಟ್ ಆದರು. ಆದರೆ, ಪಂದ್ಯ ಡ್ರಾ ಆಗಿತ್ತು. ಪಂದ್ಯದ ನಂತರ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.  

4/5

ಸಂಜಯ್ ಮಂಜ್ರೇಕರ್ ಅವರು ತಮ್ಮ ವೃತ್ತಿಜೀವನದಲ್ಲಿ 37 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 37 ರ ಸರಾಸರಿಯಲ್ಲಿ 2043 ರನ್ ಗಳಿಸಿದ್ದಾರೆ. 4 ಶತಕ ಮತ್ತು 7 ಅರ್ಧ ಶತಕ ಗಳಿಸಿದ್ದಾರೆ. 218 ರನ್‌ಗಳು ಅವರ ಟೆಸ್ಟ್ ವೃತ್ತಿಜೀವನದ ಅತಿದೊಡ್ಡ ಇನ್ನಿಂಗ್ಸ್. ಇದಲ್ಲದೆ, ಅವರು 74 ODIಗಳಲ್ಲಿ 33 ರ ಸರಾಸರಿಯಲ್ಲಿ 1994 ರನ್ ಗಳಿಸಿದರು. ಒಂದು ಶತಕ ಮತ್ತು 15 ಅರ್ಧ ಶತಕಗಳನ್ನು ಗಳಿಸಿದ್ದಾರೆ. 105 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್‌ ಆಡಿದರು. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅವರು 147 ಪಂದ್ಯಗಳಲ್ಲಿ 55 ರ ಸರಾಸರಿಯಲ್ಲಿ 10252 ರನ್ ಗಳಿಸಿದ್ದಾರೆ. 31 ಶತಕ ಮತ್ತು 46 ಅರ್ಧ ಶತಕಗಳನ್ನು ಗಳಿಸಿದ್ದಾರೆ. 377 ರನ್ ಗಳ ದೊಡ್ಡ ಇನಿಂಗ್ಸ್ ಆಡಿದೆ.  

5/5

ಮಂಜ್ರೇಕರ್ ಹುಟ್ಟಿದ್ದು ಮಂಗಳೂರಿನಲ್ಲಿ. 12 ಜುಲೈ 1965 ರಂದು ಮರಾಠಿ ಕುಟುಂಬದಲ್ಲಿ ಜನಿಸಿದ ಮಂಜ್ರೇಕರ್ ಅವರ ತಂದೆಯ ಹೆಸರು ವಿಜಯ್ ಮಂಜ್ರೇಕರ್. ಅವರು ಕ್ರಿಕೆಟಿಗರೂ ಆಗಿದ್ದರು. ವಿಜಯ್ ಮಂಜ್ರೇಕರ್ ಅವರು ಭಾರತಕ್ಕಾಗಿ 55 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 39 ರ ಸರಾಸರಿಯಲ್ಲಿ 3208 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 7 ಶತಕ ಮತ್ತು 15 ಅರ್ಧ ಶತಕಗಳನ್ನು ಗಳಿಸಿದರು. ಅವರು ತಮ್ಮ ಪ್ರಥಮ ದರ್ಜೆ ವೃತ್ತಿಜೀವನದ 198 ಪಂದ್ಯಗಳಲ್ಲಿ 12832 ರನ್ ಗಳಿಸಿದರು. ಇದರಲ್ಲಿ ಅವರು 38 ಶತಕ ಮತ್ತು 56 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅದೇ ಸಮಯದಲ್ಲಿ, 283 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದರು.  





Read More