PHOTOS

Sadha: ಮೆರೂನ್ ಗೌನ್‌ನಲ್ಲಿ ನೆಟ್ಟಿಗರ ಗಮನ ಸೆಳೆದ ಕನ್ನಡದ ಮೊನಾಲಿಸಾ!

Sadha Latest Photoshoot: ಬಹುಭಾಷಾ ನಟಿ ಸದಾ ಕನ್ನಡ ಮೊನಾಲಿಸಾ ಸಿನಿಮಾದಲ್ಲಿ ಡಬಲ್‌ ಆಕ್ಟಿಂಗ್‌ ಮಾಡುವು ಮೂಲಕ ಪರಿಚಯವಾದ ನಟಿ, ಸದ್ಯ ಈ ನ...

Advertisement
1/6

ಸ್ಯಾಂಡಲ್‌ವುಡ್‌ ನಟಿ ಸದಾ ವೈನ್‌ ಕಲರ್‌ ಗೌನ್‌ನಲ್ಲಿ ಫ್ರೀ ಹೇರ್‌ ಬಿಟ್ಟುಕೊಂಡು ಹೊಸ ಫೋಟೋಶೂಟ್‌ ಮಾಡಿಸಿ ಗಮನ ಸೆಳೆದಿದ್ದಾರೆ. ಈ ನಟಿ ಜಯಂ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.

2/6

ನಟಿ ಸದಾ ಕನ್ನಡದ ಮೊನಾಲಿಸಾ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚರವಾದವರು, ನಂತರ ಹುಡುಗ-ಹುಡುಗಿ, ಮೈಲಾರಿ, ಮಲ್ಲಿಕಾರ್ಜುನ, ಆರಕ್ಷಕ ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

3/6

ಸೌತ್‌ ನಟಿ ಸದಾ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ತೆಲುಗು, ತಮಿಳು, ಮಲೆಯಾಳಂ ಹಾಗೂ  ಹಿಂದಿ ಸಿನಿಮಾಗಳಲ್ಲಿಯೂ ಕೂಡ ನಟಿಸಿ ಪೇಕ್ಷಕರ ಗಮನ ಸೆಳೆದಿದ್ದಾರೆ.

4/6

ನಟಿ ಸದಾ ಇತ್ತೀಚೆಗೆ ಫೋಟೋಗ್ರಫಿಯಲ್ಲಿ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಆಗಾಗ ವೀಕೆಂಡ್ ನಲ್ಲಿ ಕಾಡು ಮೇಡು ಸುತ್ತಿ ತಮ್ಮ ಕ್ಯಾಮೆರಾದಲ್ಲಿ ವೈಲ್ಡ್ ಫೋಟೋಗ್ರಫಿ ಮಾಡುತ್ತಾ ಪ್ರಾಣಿ ಪಕ್ಷಿಯ ಫೋಟೋಗಳನ್ನ ಸೆರೆ ಹಿಡಿಯುತ್ತಾರೆ.

5/6

ನಟಿ ಸದಾ  ಮುಂಬೈನಲ್ಲಿ ವಾಸವಾಗಿದ್ದು ಮನೆಯಲ್ಲಿ ಬೆಕ್ಕುಗಳನ್ನ ಸಾಕಿದ್ದಾರೆ. ಅಷ್ಟು ಮಾತ್ರವಲ್ಲದೇ ಗೋಶಾಲೆಗಳಿಗೂ ಭೇಟಿ ನೀಡುತ್ತಾ ಸಮಯ ಕಳೆಯುತ್ತಾರೆ.

6/6

ದಕ್ಷಿಣ ಸಿನಿರಂಗದ ನಟಿ ಸದಾ ಸಿನಿಮಾರಂಗದಲ್ಲಿ ಮಾತ್ರವಲ್ಲದೇ ತೆಲುಗು ಟೆಲಿವಿಷನ್‌ ಇಂಡಸ್ಟ್ರಿಯಲ್ಲಿ ಡ್ಯಾನ್ಸ್ ಹಾಗೂ ಸಿಂಗಿಂಗ್ ಷೋಗಳಲ್ಲೂ ಕೂಡ ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ.





Read More