PHOTOS

World cup Final : ದುಃಖ - ದುಗುಡ, ನೋವು - ನಿರಾಶೆ , ಫ್ಯಾನ್ಸ್ ಎಂದೂ ಮರೆಯಲು ಸಾಧ್ಯವಾಗದ ದೃಶ್ಯಗಳಿವು !

al 2023 :ಪಂದ್ಯ ಮುಗಿಯುತ್ತಿದ್ದಂತೆಯೇ ಆಟಗಾರರ ಕೆಲ ಆಟಗಾರರ ಕಣ್ಣಾಲಿ ಒದ್ದೆಯಾಗಿದೆ. ಹೌದು, ನಿನ್ನೆಯ ಪಂದ್ಯದ ನಂತರ ಕಂಡು ಬಂದ ಕೆಲವು ದೃಶ್ಯಗಳನ್ನು ಅದೆಷ್ಟು ವ...

Advertisement
1/5
ರೋಹಿತ್ ಶರ್ಮಾ ಕಣ್ಣಲ್ಲಿ ನೀರು
ರೋಹಿತ್ ಶರ್ಮಾ ಕಣ್ಣಲ್ಲಿ ನೀರು

ಸತತ 10 ಗೆಲುವಿನೊಂದಿಗೆ ವಿಶ್ವಕಪ್ ಫೈನಲ್ ತಲುಪಿದ್ದ ಟೀಂ ಇಂಡಿಯಾ ಸೋಲು ಕಂಡಾಗ ಆಕಾಶವೇ ಕಳಚಿ ಬಿದ್ದ ಭಾವ ಆಟಗಾರರದ್ದು. ಭಾರತೀಯ ನಾಯಕ ರೋಹಿತ್ ಶರ್ಮಾಗೆ ಕಣ್ಣೀರು ತಡೆಯಲಾಗಲಿಲ್ಲ. ರೋಹಿತ್ ಪತ್ನಿ ರಿತಿಕಾ ಅವರ ಕಣ್ಣಲ್ಲೂ ನೀರು  ಜಿನುಗುತ್ತಿತ್ತು. 

2/5
ಮೊಹಮ್ಮದ್ ಸಿರಾಜ್ ಅಳು
ಮೊಹಮ್ಮದ್ ಸಿರಾಜ್ ಅಳು

ಭಾರತದ ಸೋಲಿನ ನಂತರ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಕೂಡಾ ಭಾವುಕರಾಗಿದ್ದು ಕಂಡು ಬಂತು. ಅವನ ಕಣ್ಣಲ್ಲಿ ನೀರು ತುಂಬಿತ್ತು. ಜಸ್ಪ್ರೀತ್ ಬುಮ್ರಾ ಅವರನ್ನು ತಬ್ಬಿ ಅತ್ತಿರುವ ದೃಶ್ಯ ಕ್ಯಾಮರಾಗಳಲ್ಲಿ ಸೆರೆಯಾಗಿದೆ. 

3/5
ವಿರಾಟ್ ಕೊಹ್ಲಿ ನಿರಾಸೆ
ವಿರಾಟ್ ಕೊಹ್ಲಿ ನಿರಾಸೆ

ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ  ಮುಖದಲ್ಲೂ ನಿರಾಸೆ. 2023ರ ವಿಶ್ವಕಪ್‌ನಲ್ಲಿ ಕೊಹ್ಲಿ 765 ರನ್ ಬಾರಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. 

4/5
ಕೆಎಲ್ ರಾಹುಲ್ ಬೇಸರ
ಕೆಎಲ್ ರಾಹುಲ್ ಬೇಸರ

ಟೀಂ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಸೋಲಿನ ನಂತರ ಮೈದಾನದಲ್ಲಿಯೇ ಕುಳಿತು ಮೌನವಾಗಿದ್ದರು. 

5/5
ಮಂಕಾದ ಶಮಿ
 ಮಂಕಾದ ಶಮಿ

ಕೇವಲ 7 ಪಂದ್ಯಗಳಲ್ಲಿ 24 ವಿಕೆಟ್ ಪಡೆದು ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಮೊಹಮ್ಮದ್ ಶಮಿ ಕೂಡ ಸೋಲಿನ ಬಳಿಕ ನಿರಾಸೆ ಕಂಡಿದ್ದಾರೆ. 





Read More