PHOTOS

Rice Water: ಅಕ್ಕಿ ತೊಳೆದ ನೀರನ್ನು ಬಿಸಾಡುವ ಬದಲಿಗೆ ಈ ರೀತಿ ಬಳಸಿ ಸೌಂದರ್ಯ ಹೆಚ್ಚಿಸಿ

Rice Water: ಸಾಮಾನ್ಯವಾಗಿ ನಾವು ಮನೆಯಲ್ಲಿ ಅಕ್ಕಿ ತೊಳೆದ ನೀರನ್ನು ಬಚ್ಚಲಿಗೆ ಚೆಲ್ಲುತ್ತೇವೆ. ಆದರೆ, ಇದು ನಿಮ್ಮ ಸೌಂದರ್ಯ ವೃದ್ಧಿಗೆ ಎಷ್ಟು ಪ್ರಯೋಜನಕ...

Advertisement
1/8
ಅಕ್ಕಿ ನೀರು
ಅಕ್ಕಿ ನೀರು

ನಾವೆಲ್ಲರೂ ಸಾಮಾನ್ಯವಾಗಿ ಅಕ್ಕಿ ತೊಳೆದು ಅದರ ನೀರನ್ನು ಚೆಲ್ಲುತ್ತೇವೆ. ಆದರೆ ಚೀನಾ ಮತ್ತು ಜಪಾನ್‌ನಂತಹ ದೇಶಗಳಲ್ಲಿ ಇದನ್ನು ಸೌಂದರ್ಯವರ್ಧಕವಾಗಿಯೂ ಬಳಸುತ್ತಾರೆ. 

2/8
ಅಕ್ಕಿ ನೀರಿನಲ್ಲಿರುವ ಅಂಶಗಳು
ಅಕ್ಕಿ ನೀರಿನಲ್ಲಿರುವ ಅಂಶಗಳು

ವಾಸ್ತವವಾಗಿ, ಅಕ್ಕಿ ತೊಳೆದ ನೀರಿನಲ್ಲಿ  ವಿಟಮಿನ್ ಬಿ, ಸಿ ಮತ್ತು ಇ  ಜೊತೆಗೆ ಅಮೈನೋ ಆಮ್ಲಗಳು ಕಂಡು ಬರುವುದರಿಂದ ಇದು ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೆ ತುಂಬಾ ಲಾಭದಾಯಕ ಎನ್ನಲಾಗುತ್ತದೆ. 

3/8
ಕೂದಲ ಬೆಳವಣಿಗೆ
ಕೂದಲ ಬೆಳವಣಿಗೆ

ಅಕ್ಕಿ ತೊಳೆದ ನೀರನ್ನು ಕೂದಲಿಗೆ ಬಳಸುವುದರಿಂದ ಇದು ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. 

4/8
ಸ್ಪ್ಲಿಟ್ ಹೇರ್
ಸ್ಪ್ಲಿಟ್ ಹೇರ್

ಸ್ಪ್ಲಿಟ್ ಹೇರ್ ಸಮಸ್ಯೆ ನಿವಾರಿಸಿ, ಕೂದಲು ಹೊಳೆಯುವಂತೆ ಮಾಡಲು ಅಕ್ಕಿ ನೀರನ್ನು ಕೂದಲಿಗೆ ಬಳಸಿ. 

5/8
ಕಾಂತಿಯುತ ತ್ವಚೆ
ಕಾಂತಿಯುತ ತ್ವಚೆ

ನಿಯಮಿತವಾಗಿ ಅಕ್ಕಿ ನೀರಿನಿಂದ ಮುಖ ತೊಳೆಯುವುದರಿಂದ ಇದು ಚರ್ಮವನ್ನು ಮೃದುವಾಗಿಸಿ, ಕಲೆ ನಿವಾರಿಸಿ, ಕಾಂತಿಯುತ ತ್ವಚೆ ನೀಡುವಲ್ಲಿ ಸಹಕಾರಿ ಎಂದು ಸಾಬೀತುಪಡಿಸಬಹುದು. 

6/8
ಅಲರ್ಜಿ
ಅಲರ್ಜಿ

ಅಕ್ಕಿ ತೊಳೆದ ನೀರಿನಿಂದ ವಾಶ್ ಮಾಡುವುದರಿಂದ ಚರ್ಮದ ಕಿರಿ ಕಿರಿ, ಚರ್ಮದ ಅಲರ್ಜಿಯಿಂದ ಪರಿಹಾರ ಪಡೆಯಬಹುದು. 

7/8
ಆಂಟಿ ಏಜಿಂಗ್
ಆಂಟಿ ಏಜಿಂಗ್

ಅಕ್ಕಿ ತೊಳೆದ ನೀರು ಉತ್ತಮ ಆಂಟಿ ಏಜಿಂಗ್ ಆಗಿ ಕಾರ್ಯನಿರ್ವಹಿಸುವುದರೊಂದಿಗೆ ಚರ್ಮದ ರಂಧ್ರಗಳನ್ನು ಬಿಗಿಗೊಳಿಸಲು ಸಹಕಾರಿ ಆಗಿದೆ. 

8/8
ಸೂಚನೆ
ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More