PHOTOS

Republic Day 2024: ಗಣರಾಜ್ಯೋತ್ಸವ ಆಚರಣೆಗಾಗಿ ಹೀಗಿರಲಿ ನಿಮ್ಮ ಸ್ಟೈಲ್

Republic Day 2024: ವಿವಿಧತೆಯಲ್ಲಿ ಏಕತೆಯನ್ನೇ ಹೊಂದಿರುವ ಭಾರತದಲ್ಲಿ ಕೆಲವು ದಿನಾಂಕಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ. ಅಂತಹ ವಿಶೇಷ ದಿನಗಳಲ್ಲಿ ಜನವ...

Advertisement
1/6
ಗಣರಾಜ್ಯೋತ್ಸವ ಆಚರಣೆ
ಗಣರಾಜ್ಯೋತ್ಸವ ಆಚರಣೆ

ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾದ ಗಣರಾಜ್ಯೋತ್ಸವವನ್ನು ಶಾಲೆ-ಕಾಲೇಜುಗಳಲ್ಲಿ ಮಾತ್ರವಲ್ಲದೆ ಕಚೇರಿಗಳಲ್ಲೂ ಆಚರಿಸಲಾಗುತ್ತದೆ. ಈ ವಿಶೇಷ ಸಂದರ್ಭದಲ್ಲಿ ಮಹಿಳೆಯರು ವಿಶೇಷವಾಗಿ ಸಿದ್ದರಾಗಲು ಬಯಸುತ್ತಾರೆ. ತ್ರಿವರ್ಣದ ಮೂರು ಬಣ್ಣಗಳನ್ನು ಹೇಗೆ ಸಂಯೋಜಿಸುವುದು ಅಥವಾ ಬಿಳಿ ಸೂಟ್ ಅಥವಾ ಕುರ್ತಿಯನ್ನು ಹೇಗೆ ವಿನ್ಯಾಸಗೊಳಿಸುವುದು ಎಂಬ ಯೋಚನೆ ಹುಡುಗಿಯರಿಗೆ ಇದ್ದೇ ಇರುತ್ತದೆ. ಅಂತಹವರಿಗಾಗಿ ಇಲ್ಲಿದೆ ಕೆಲವು ಸಲಹೆ... 

2/6
ವೈಟ್ ಸೂಟ್‌ನೊಂದಿಗೆ ಸ್ಟೈಲ್ ಬಂಧನಿ ದುಪಟ್ಟಾ
ವೈಟ್ ಸೂಟ್‌ನೊಂದಿಗೆ ಸ್ಟೈಲ್ ಬಂಧನಿ ದುಪಟ್ಟಾ

ವೈಟ್ ಸೂಟ್‌ನೊಂದಿಗೆ ಸ್ಟೈಲ್ ಬಂಧನಿ ದುಪಟ್ಟಾ:   ನಿಮ್ಮ ಬಳಿ ಬಿಳಿ ಸೂಟ್ ಅಥವಾ ಕುರ್ತಿ ಇದ್ದರೆ ಆ ಸೂಟ್ ಜೊತೆಗೆ ಬಂಧನಿ ದುಪಟ್ಟಾವನ್ನು ಮ್ಯಾಚ್ ಮಾಡಿ ಧರಿಸಬಹು. ನಿಮ್ಮ ಬಂಧನಿ ದುಪಟ್ಟಾ ಕೇಸರಿ ಹಸಿರು ಬಣ್ಣಗಳಿಂದ ವಿನ್ಯಾಸಗೊಂಡಿದ್ದರೆ ಇದರ ಲುಕ್ ಇನ್ನೂ ಸುಂದರವಾಗಿರುತ್ತದೆ. 

3/6
ಜೀನ್ಸ್-ಕುರ್ತಿಯೊಂದಿಗೆ ಮಿಕ್ಸ್ ಕಲರ್ ಜಾಕೆಟ್
ಜೀನ್ಸ್-ಕುರ್ತಿಯೊಂದಿಗೆ ಮಿಕ್ಸ್ ಕಲರ್ ಜಾಕೆಟ್

ಜೀನ್ಸ್-ಕುರ್ತಿಯೊಂದಿಗೆ ಮಿಕ್ಸ್ ಕಲರ್ ಜಾಕೆಟ್:  ನೀವು ಸೂಟ್ ಮಾತ್ರ ಧರಿಸುವುದು ಅನಿವಾರ್ಯವಲ್ಲ, ನೀವು ಬಯಸಿದರೆ, ನೀವು ಸರಳವಾದ ಜೀನ್ಸ್ನೊಂದಿಗೆ ಬಿಳಿ ಕುರ್ತಾವನ್ನು ಸಹ ಧರಿಸಬಹುದು. ನೀವು ಬಿಳಿ ಕುರ್ತಾ ಧರಿಸಲು ಬಯಸದಿದರೆ, ನೀವು ಕಿತ್ತಳೆ ಅಥವಾ ಹಸಿರು ಕುರ್ತಾವನ್ನು ಸಹ ಧರಿಸಬಹುದು. ಇದರೊಂದಿಗೆ ಮಿಕ್ಸ್ ಕಲರ್ ಜಾಕೆಟ್ ಧರಿಸಿದರೆ ಸುಂದರವಾಗಿರುತ್ತದೆ. 

4/6
ತ್ರಿವರ್ಣ ಬಣ್ಣದ ಸ್ಟಾಲ್
ತ್ರಿವರ್ಣ ಬಣ್ಣದ ಸ್ಟಾಲ್

ತ್ರಿವರ್ಣ ಬಣ್ಣದ ಸ್ಟಾಲ್ :  ನೀವು ಇನ್ನೂ ಸ್ವಲ್ಪ ಫ್ಯಾಶನ್ ಆಗಿ ಕಾಣಲು ಬಯಸಿದರೆ ನಿಮ್ಮ ದೈನಂದಿನ ಜೀನ್ಸ್-ಟಾಪ್ ಅಥವಾ ಕುರ್ತಿಯೊಂದಿಗೆ ನೀವು ತ್ರಿವರ್ಣ ಬಣ್ಣದಿಂದ ಕೂಡಿದ ಸ್ಟೋಲ್ ಅನ್ನು ಧರಿಸಬಹುದು. 

5/6
ತ್ರಿವರ್ಣ ಬಳೆಗಳು
ತ್ರಿವರ್ಣ ಬಳೆಗಳು

ತ್ರಿವರ್ಣ ಬಳೆಗಳು:  ನೀವು ಬಯಸಿದರೆ, ಸಿಂಪಲ್ ಲುಕ್ ಗಾಗಿ ನೀವು ಕೇಸರಿ, ಬಿಳಿ, ಹಸಿರು ಬಣ್ಣದ ಬಳೆಗಳನ್ನು ಮಿಕ್ಸ್ ಮಾಡಿ ಧರಿಸಬಹುದು. ಇದು ಪ್ರತಿ ಉಡುಪಿನಲ್ಲಿಯೂ ಚೆನ್ನಾಗಿ ಕಾಣುತ್ತದೆ. ನೀವು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರೆ ತ್ರಿವರ್ಣ ಬಣ್ಣದ ಬಿಂದಿಯನ್ನೂ ಧರಿಸಬಹುದು.

6/6
ಹೆಚ್ಚುವರಿ ಪರಿಕರಗಳು
ಹೆಚ್ಚುವರಿ ಪರಿಕರಗಳು

ಹೆಚ್ಚುವರಿ ಪರಿಕರಗಳು:  ನೀವು ಗಣರಾಜ್ಯೋತ್ಸವದ ಥೀಮ್ ಅನ್ನು ಚೆನ್ನಾಗಿ ಅನುಸರಿಸಲು ಬಯಸಿದರೆ, ಇತ್ತೀಚಿನ ದಿನಗಳಲ್ಲಿ ನಿಮ್ಮ ಫ್ಯಾಷನ್ ಪರಿಕರಗಳಿಗೆ ನೀವು ಸೇರಿಸಬಹುದಾದ ಅನೇಕ ವಿಷಯಗಳಿವೆ. ಅವುಗಳೆಂದರೆ, ಹೇರ್ ಬ್ಯಾಂಡ್, ಹ್ಯಾಂಡ್ ಬ್ಯಾಂಡ್, ಕಿವಿಯೋಲೆ ಇತ್ಯಾದಿ ಪರಿಕರಗಳನ್ನು  ಧರಿಸಬಹುದು. 





Read More