PHOTOS

Reliance Jio New Plan: ಕೇವಲ 51 ರೂ.ಗೆ ಅನಿಯಮಿತ 5G ಡೇಟಾ!

Reliance Jio New Plan: ಜಿಯೋದ 151 ರೂ. ಆಡ್-ಆನ್ ಯೋಜನೆಯೊಂದಿಗೆ ಬಳಕೆದಾರರು ಅನಿಯಮಿತ 5G ಜೊತೆಗೆ 9GB 4G ಡೇಟಾ ಪಡೆಯುತ್ತಾರೆ. ಇದರ ವ್ಯ...

Advertisement
1/5
3 ಹೊಸ ಪ್ರಿಪೇಯ್ಡ್ ಯೋಜನೆ
3 ಹೊಸ ಪ್ರಿಪೇಯ್ಡ್ ಯೋಜನೆ

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ 3 ಹೊಸ 5G ಡೇಟಾ ಬೂಸ್ಟರ್ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. 6GB ಡೇಟಾ ಜೊತೆಗೆ ಅನಿಯಮಿತ 5G ನೀಡುವ 61 ರೂ.ನ ಡೇಟಾ ಬೂಸ್ಟರ್ ಯೋಜನೆ ಗ್ರಾಹಕರಿಗೆ ಇಷ್ಟವಾಗುತ್ತದೆ. ಇದು ಮಾತ್ರವಲ್ಲದೇ 101 ರೂ. ಮತ್ತು 151 ರೂ.ನ ಯೋಜನೆಗಳನ್ನೂ ಪರಿಚಯಿಸಿದೆ. ಈ 3 ರಿಚಾರ್ಜ್‌ ಪ್ಯಾಕ್‌ಗಳು ಹೊಸ ಯೋಜನೆಗಳು ಅಷ್ಟೇ.  

2/5
ಅನ್​ಲಿಮಿಟೆಡ್ 5G ಡೇಟಾ
ಅನ್​ಲಿಮಿಟೆಡ್ 5G ಡೇಟಾ

5G ನೆಟ್‌ವರ್ಕ್‌ ಅನ್ನು ನೀವು ಬಯಸಿದರೆ ಈ ಯೋಜನೆಗಳನ್ನು ಬಳಸಿಕೊಂಡು ಜಿಯೋದಿಂದ ಬಿಡುಗಡೆ ಆಗಿರುವ ಪ್ರಿಪೇಯ್ಡ್ ಯೋಜನೆಗಳನ್ನು ರಿಚಾರ್ಜ್‌ ಮಾಡಿಕೊಳ್ಳಬಹುದಾಗಿದೆ. ಆದರೆ ಸದ್ಯ ಜಾರಿಯಲ್ಲಿರುವ 479 ರೂ. ಮತ್ತು 1,899 ರೂ. ಯೋಜನೆಗಳಲ್ಲಿ ಹೊಸ ಯೋಜನೆ ಕಾರ್ಯನಿರ್ವಹಿಸುವುದಿಲ್ಲ.

3/5
51 ರೂ. ಯೋಜನೆ
51 ರೂ. ಯೋಜನೆ

ರಿಲಯನ್ಸ್ ಜಿಯೋದ 51 ರೂ. ಯೋಜನೆಯು ಅನಿಯಮಿತ 5G & 3GBಯ 4G ಡೇಟಾದೊಂದಿಗೆ ಬರುತ್ತದೆ. ಇದರ ವ್ಯಾಲಿಡಿಟಿಯು ಬಳಕೆದಾರರ ಮೂಲ ಸಕ್ರಿಯ ಯೋಜನೆಯಂತೆಯೇ ಇರುತ್ತದೆ. 1.5GB/ದಿನದ ಯೋಜನೆ & 1 ತಿಂಗಳ ವ್ಯಾಲಿಡಿಟಿ ಹೊಂದಿರುವ ಬಳಕೆದಾರರು ಜಿಯೋದಿಂದ 5G ಪಡೆಯಲು 51 ರೂ. ಯೋಜನೆಯೊಂದಿಗೆ ರೀಚಾರ್ಜ್ ಮಾಡಬಹುದು.

4/5
101 ರೂ. ಯೋಜನೆ
101 ರೂ. ಯೋಜನೆ

ಜಿಯೋದ 101 ರೂ. ಯೋಜನೆಯು 6GBಯ 4G ಡೇಟಾ ಮತ್ತು ಅನಿಯಮಿತ 5Gಯೊಂದಿಗೆ ಬರುತ್ತದೆ. ಇದರ ವ್ಯಾಲಿಡಿಟಿ ಬಳಕೆದಾರರ ಮೂಲ ಸಕ್ರಿಯ ಯೋಜನೆಯಂತೆಯೇ ಇರುತ್ತದೆ. ಆದರೆ ಈ ಯೋಜನೆಯು 1GB ದೈನಂದಿನ ಡೇಟಾ ಯೋಜನೆ ಅಥವಾ 1.5GB ದೈನಂದಿನ ಡೇಟಾ ಯೋಜನೆ ಹೊಂದಿರುವ ಬಳಕೆದಾರರಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಇದು 1 ತಿಂಗಳಿಗಿಂತ ಹೆಚ್ಚು ಆದರೆ 2 ತಿಂಗಳಿಗಿಂತ ಕಡಿಮೆ ಅಥವಾ ಸಮಾನವಾಗಿರುತ್ತದೆ.

5/5
151 ರೂ. ಆಡ್-ಆನ್ ಯೋಜನೆ
151 ರೂ. ಆಡ್-ಆನ್ ಯೋಜನೆ

ಜಿಯೋದ 151 ರೂ. ಆಡ್-ಆನ್ ಯೋಜನೆಯೊಂದಿಗೆ ಬಳಕೆದಾರರು ಅನಿಯಮಿತ 5G ಜೊತೆಗೆ 9GB 4G ಡೇಟಾ ಪಡೆಯುತ್ತಾರೆ. ಇದರ ವ್ಯಾಲಿಡಿಟಿಯು ಬಳಕೆದಾರರ ಮೂಲ ಸಕ್ರಿಯ ಯೋಜನೆಯಂತೆಯೇ ಇರುತ್ತದೆ. ಈ ಯೋಜನೆಯೊಂದಿಗೆ ರೀಚಾರ್ಜ್ ಮಾಡಬಹುದಾದ ಬಳಕೆದಾರರು 2 ತಿಂಗಳಿಗಿಂತ ಹೆಚ್ಚು 1.5GB ದೈನಂದಿನ ಡೇಟಾ ಯೋಜನೆ ಹೊಂದಿರುತ್ತಾರೆ.  





Read More