PHOTOS

Multiple Bank Accounts: ಆರ್‌ಬಿಐ ಹೊಸ ಮಾರ್ಗಸೂಚಿ- ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಖಾತೆ ತೆರೆದರೆ ಭಾರೀ ನಷ್ಟ

Multiple Bank Accounts: ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವವರಿಗೆ ...

Advertisement
1/5
ಖಾತೆ ತೆರೆಯಲು ಇಲ್ಲ ಯಾವುದೇ ನಿಗದಿತ ಮಿತಿ
ಖಾತೆ ತೆರೆಯಲು ಇಲ್ಲ ಯಾವುದೇ ನಿಗದಿತ ಮಿತಿ

ಖಾತೆ ತೆರೆಯಲು ಇಲ್ಲ ಯಾವುದೇ ನಿಗದಿತ ಮಿತಿ:  ವಾಸ್ತವವಾಗಿ, ಆರ್‌ಬಿಐ ಬ್ಯಾಂಕ್ ಖಾತೆ ತೆರೆಯಲು ಯಾವುದೇ ಮಿತಿಯನ್ನು ನಿಗದಿಪಡಿಸಿಲ್ಲ, ಆದರೆ ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಇಟ್ಟುಕೊಳ್ಳುವುದರಿಂದ ಗ್ರಾಹಕರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

 

2/5
ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ
ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ

ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ: ಗ್ರಾಹಕರು ಎಷ್ಟೇ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದರೂ ಸಹ ಎಲ್ಲಾ ಬ್ಯಾಂಕ್‌ಗಳಲ್ಲಿ ಮಿನಿಮಂ ಬ್ಯಾಲೆನ್ಸ್ ನಿರ್ವಹಿಸುವುದು ಬಹಳ ಮುಖ್ಯ. ಮಾತ್ರವಲ್ಲ, ಚೆಕ್‌ಬುಕ್‌ನಿಂದ ಕಾರ್ಡ್‌ವರೆಗೆ ಎಲ್ಲಾ ಶುಲ್ಕಗಳನ್ನು ಕೂಡ ನಿರ್ವಹಿಸಬೇಕಾಗುತ್ತದೆ.

3/5
ಶುಲ್ಕಗಳ ಪಾವತಿ
 ಶುಲ್ಕಗಳ ಪಾವತಿ

ಶುಲ್ಕಗಳ ಪಾವತಿ: ಬ್ಯಾಂಕ್ ಖಾತೆಗಳಲ್ಲಿ ಮಿನಿಮಂ ಬ್ಯಾಲೆನ್ಸ್ ಕಾಯ್ದುಕೊಳ್ಳುವುದರ ಜೊತೆಗೆ ಇತರ ಹಲವು  ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಶುಲ್ಕಗಳು, ಸೇವಾ ಶುಲ್ಕಗಳು ಸೇರಿದಂತೆ ವಿವಿಧ ರೀತಿಯ ಪಾವತಿಗಳನ್ನು ಮಾಡಬೇಕಾಗಿದೆ. ನೀವು ಕೇವಲ ಒಂದು ಬ್ಯಾಂಕ್‌ನ ಸೌಲಭ್ಯಗಳ ಲಾಭವನ್ನು ಪಡೆದರೆ, ನೀವು ಕೇವಲ ಒಂದು ಬ್ಯಾಂಕ್‌ನಲ್ಲಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದರೆ ನೀವು ಖಾತೆ ಹೊಂದಿರುವ ಎಲ್ಲಾ ಬ್ಯಾಂಕ್‌ಗಳಲ್ಲಿಯೂ ಈ ಎಲ್ಲಾ ಶುಲ್ಕಗಳ ಪಾವತಿ ಅನಿವಾರ್ಯವಾಗಿದೆ.

4/5
ಮಿನಿಮಂ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ
ಮಿನಿಮಂ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ

ಮಿನಿಮಂ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ: ಬ್ಯಾಂಕ್ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಕಾಯ್ದುಕೊಳ್ಳಲು ಸಾಧ್ಯವಾಗದಿದ್ದರೆ  5000 ರೂ., ಹಲವು ಬ್ಯಾಂಕ್‌ಗಳಲ್ಲಿ 10,000 ರೂ.ವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ. ಮಾತ್ರವಲ್ಲ ಇದು ನಿಮ್ಮ CIBIL ಸ್ಕೋರ್ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ.

5/5
ಬಳಕೆಯಾಗದ ಖಾತೆಯನ್ನು ಮುಚ್ಚಿ
ಬಳಕೆಯಾಗದ ಖಾತೆಯನ್ನು ಮುಚ್ಚಿ

ಬಳಕೆಯಾಗದ ಖಾತೆಯನ್ನು ಮುಚ್ಚಿ: ಅನಗತ್ಯ ಶುಲ್ಕಗಳನ್ನು ತಪ್ಪಿಸಲು ಹಾಗೂ ಉತ್ತಮ ಸಿಬಿಲ್ ಸ್ಕೋರ್ ಕಾಯ್ದುಕೊಳ್ಳಲು ನೀವು ಬಯಸಿದರೆ ನಿಮ್ಮ ಎಲ್ಲಾ ಬಳಕೆಯಾಗದ ಖಾತೆಗಳನ್ನು ಮುಚ್ಚುವುದು ಒಳ್ಳೆಯದು ಎಂದು ಆರ್‌ಬಿಐ ಹೇಳಿದೆ. ಇದಕ್ಕಾಗಿ ನೀವು ಯಾವ ಬ್ಯಾಂಕ್ ಖಾತೆಯನ್ನು ಮುಚ್ಚಲು ಬಯಸುತ್ತೀರೋ ಆ ಬ್ಯಾಂಕ್ ಶಾಖೆಗೆ ಹೋಗಿ ಅಕೌಂಟ್ ಕ್ಲೋಸ್ ಫಾರ್ಮ್ ಪಡೆದು ಅದನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ನಿಮ್ಮ ಖಾತೆಯನ್ನು ಸುಲಭವಾಗಿ ಮುಚ್ಚಬಹುದು.





Read More