PHOTOS

Rajdhani Express: ರಾಜಧಾನಿ ಎಕ್ಸ್‌ಪ್ರೆಸ್ ಹೊಸ 'ಅವತಾರ್', 'ಸ್ಮಾರ್ಟ್' ಬೋಗಿಗಳೊಂದಿಗೆ ಆರಾಮದಾಯಕ ಪ್ರಯಾಣಕ್ಕೆ ಒತ್ತು

                 

...
Advertisement
1/8
ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ತೇಜಸ್‌ನಂತಹ ಸ್ಲೀಪರ್ ಬೋಗಿಗಳಿವೆ
ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ತೇಜಸ್‌ನಂತಹ ಸ್ಲೀಪರ್ ಬೋಗಿಗಳಿವೆ

ಮುಂಬೈ-ನವದೆಹಲಿ ರಾಜಧಾನಿ ಸ್ಪೆಷಲ್ ಎಕ್ಸ್‌ಪ್ರೆಸ್‌ನ ಸ್ಲೀಪರ್ ಕೋಚ್ ಅನ್ನು ಭಾರತೀಯ ರೈಲ್ವೆ (Indian Railways) ತೇಜಸ್ ರೈಲಿನ ಕೋಚ್‌ನಂತೆ ಮಾಡಿದೆ. ರೈಲಿನ ಬೋಗಿಯಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯಕ್ಕಾಗಿ ವಿಶೇಷ ಕಾಳಜಿ ವಹಿಸಲಾಗಿದೆ. ಬೋಗಿಗಳಲ್ಲಿ ಪ್ರಯಾಣಿಕರಿಗೆ ವಿಶ್ವ ದರ್ಜೆಯ ಸೌಲಭ್ಯಗಳಿವೆ.

2/8
ಎಲ್ಲಾ ಬೋಗಿಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ
ಎಲ್ಲಾ ಬೋಗಿಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ

ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯಲ್ಲಿ ಭದ್ರತೆಯ ದೃಷ್ಟಿಯಿಂದ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೋಚ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇದು ಲೈವ್ ರೆಕಾರ್ಡಿಂಗ್ ಮಾಡುತ್ತದೆ. ಈ ಕ್ಯಾಮೆರಾಗಳು ದಿನದ 24 ಗಂಟೆ, ರಾತ್ರಿ ಮತ್ತು ಹಗಲು ರೆಕಾರ್ಡಿಂಗ್ ಸಾಮರ್ಥ್ಯ ಹೊಂದಿವೆ. ಈ ಸಿಸಿಟಿವಿ ಕ್ಯಾಮೆರಾಗಳು ಕಡಿಮೆ ಬೆಳಕಿನಲ್ಲಿಯೂ ಸ್ಪಷ್ಟವಾಗಿ ರೆಕಾರ್ಡ್ ಮಾಡಬಹುದಾದ ಸೌಲಭ್ಯವನ್ನು ಹೊಂದಿವೆ.

3/8
ಪ್ರಯಾಣಿಕರ ಮಾಹಿತಿ ಮತ್ತು ಕೋಚ್ ಕಂಪ್ಯೂಟಿಂಗ್ ಘಟಕವು ಕೋಚ್‌ನಲ್ಲಿದೆ
ಪ್ರಯಾಣಿಕರ ಮಾಹಿತಿ ಮತ್ತು ಕೋಚ್ ಕಂಪ್ಯೂಟಿಂಗ್ ಘಟಕವು ಕೋಚ್‌ನಲ್ಲಿದೆ

ಜಿಎಸ್‌ಎಂ ನೆಟ್‌ವರ್ಕ್ ಸಂಪರ್ಕದೊಂದಿಗೆ ರಾಜಧಾನಿ ರೈಲಿನ ಕೋಚ್‌ನಲ್ಲಿ ಪ್ರಯಾಣಿಕರ ಮಾಹಿತಿ ಮತ್ತು ಕೋಚ್ ಕಂಪ್ಯೂಟಿಂಗ್ ಘಟಕವನ್ನು (ಪಿಐಸಿಯು) ಸ್ಥಾಪಿಸಲಾಗಿದೆ. ಸಿಸಿಟಿವಿ, ಟಾಯ್ಲೆಟ್ ಆರ್ಡರ್ ಸೆನ್ಸಾರ್, ಪ್ಯಾನಿಕ್ ಸ್ವಿಚ್, ಫೈರ್ ಡಿಟೆಕ್ಷನ್ ಮತ್ತು ಅಲಾರ್ಮ್ ಸಿಸ್ಟಮ್, ಗಾಳಿಯ ಗುಣಮಟ್ಟ ಮತ್ತು ಎನರ್ಜಿ ಮೀಟರ್‌ನಲ್ಲಿ ಪಿಐಸಿಯು ಡೇಟಾವನ್ನು ದಾಖಲಿಸಲಿದೆ.  

4/8
ರಾಜಧಾನಿ ಎಕ್ಸ್‌ಪ್ರೆಸ್‌ನ ಸ್ಲೀಪರ್ ಕೋಚ್‌ನಲ್ಲಿ ನೀರಿನ ಮಟ್ಟ ಸಂವೇದಕ
ರಾಜಧಾನಿ ಎಕ್ಸ್‌ಪ್ರೆಸ್‌ನ ಸ್ಲೀಪರ್ ಕೋಚ್‌ನಲ್ಲಿ ನೀರಿನ ಮಟ್ಟ ಸಂವೇದಕ

ನೀರಿನ ಪ್ರಮಾಣದ ನೈಜ ಸಮಯದ ಮಾಹಿತಿಗಾಗಿ ಕೋಚ್‌ನಲ್ಲಿ ನೀರಿನ ಮಟ್ಟದ ಸಂವೇದಕಗಳನ್ನು ಅಳವಡಿಸಲಾಗಿದೆ. ಇದಲ್ಲದೆ, ಕೋಚ್‌ನ ಆಸನವನ್ನು ಸಿಲಿಕೋನ್ ಫೋಮ್ನಿಂದ ತಯಾರಿಸಲಾಗುತ್ತದೆ, ಇದು ಬೆಂಕಿಯ ಪ್ರತಿರೋಧವನ್ನು ಹೊಂದಿರುತ್ತದೆ. ಬೆಂಕಿ ಕಾನಿಸಿಕೊಂಡಿದ್ದೆ ಆದಲ್ಲಿ ಅದು ಕೋಚ್‌ನಲ್ಲಿ ಬೇಗನೆ ಹರಡುವುದಿಲ್ಲ ಎಂದರ್ಥ. ಇತರ ಆಸನಗಳಿಗಿಂತ ಸಿಲಿಕೋನ್ ಫೋಮ್ನಿಂದ ಮಾಡಿದ ಆಸನದ ಮೇಲೆ ಕುಳಿತುಕೊಳ್ಳುವುದು ಹೆಚ್ಚು ಆರಾಮದಾಯಕವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ- IRCTC : ರೈಲ್ವೆ ಪ್ರಯಾಣಿಕರ ಗಮನಕ್ಕೆ : 'ರೈಲ್ವೆ ಟಿಕೆಟ್‌ ಬುಕ್ಕಿಂಗ್‌'ಗೆ Aadhar, Pan ಕಾರ್ಡ್ ಕಡ್ಡಾಯ!

5/8
ಪ್ರತಿ ಬರ್ತ್‌ನಲ್ಲಿ ಪ್ರಯಾಣಿಕರಿಗೆ ಈ ಸೌಲಭ್ಯಗಳಿವೆ
ಪ್ರತಿ ಬರ್ತ್‌ನಲ್ಲಿ ಪ್ರಯಾಣಿಕರಿಗೆ ಈ ಸೌಲಭ್ಯಗಳಿವೆ

ಕೋಚ್‌ನ ಪ್ರತಿ ಆಸನದ ಬಳಿ ಚಾರ್ಜಿಂಗ್ ಪಾಯಿಂಟ್ ಇದೆ. ಇದಲ್ಲದೆ ಪ್ರಯಾಣಿಕರಿಗೆ ಓದಲು ರೀಡಿಂಗ್ ಲೈಟ್ ವ್ಯವಸ್ಥೆ ಕೂಡ ಮಾಡಲಾಗಿದೆ. ಮೇಲ್ಭಾಗದ ಬೆರ್ತ್ ಅನ್ನು ಸುಲಭವಾಗಿ ಏರುವ ರೀತಿಯಲ್ಲಿ ಕೋಚ್ ಅನ್ನು ವಿನ್ಯಾಸಗೊಳಿಸಲಾಗಿದೆ.

6/8
ಅಗ್ನಿ ಅನಾಹುತವನ್ನು ಎದುರಿಸಲು ಕೋಚ್‌ನಲ್ಲಿ ವಿಶೇಷ ಸೌಲಭ್ಯವಿದೆ
ಅಗ್ನಿ ಅನಾಹುತವನ್ನು ಎದುರಿಸಲು ಕೋಚ್‌ನಲ್ಲಿ ವಿಶೇಷ ಸೌಲಭ್ಯವಿದೆ

ರಾಜಧಾನಿ ಎಕ್ಸ್‌ಪ್ರೆಸ್‌ನ  (Rajdhani Express) ಕೋಚ್‌ನಲ್ಲಿ ಫೈರ್ ಅಲಾರ್ಮ್ ಪತ್ತೆ ಮತ್ತು ನಿಗ್ರಹ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ಅಗ್ನಿ ಅನಾಹುತ ಸಂಭವಿಸಿದ ತಕ್ಷಣ ನೀವು ತಕ್ಷಣದ ಮಾಹಿತಿಯನ್ನು ಪಡೆಯುತ್ತೀರಿ.

ಇದನ್ನೂ ಓದಿ - Indian Railways: ಒಬ್ಬರ ರೈಲು ಟಿಕೆಟ್ ನಲ್ಲಿ ಇನ್ನೊಬ್ಬರ ಪ್ರಯಾಣಕ್ಕೆ ಅವಕಾಶ

7/8
ಕೋಚ್‌ನ ಶೌಚಾಲಯದಲ್ಲಿ ವಿಶೇಷ ಸಂವೇದಕವಿದೆ
ಕೋಚ್‌ನ ಶೌಚಾಲಯದಲ್ಲಿ ವಿಶೇಷ ಸಂವೇದಕವಿದೆ

ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ (Train) ಸ್ಲೀಪರ್ ಕೋಚ್‌ನಲ್ಲಿ ಟಾಯ್ಲೆಟ್ ಆಕ್ಯುಪನ್ಸಿ ಸೆನ್ಸಾರ್ (Toilet Occupancy Sensor) ಅಳವಡಿಸಲಾಗಿದೆ. ಇದಲ್ಲದೆ ಸ್ಲೀಪರ್ ಕೋಚ್‌ನಲ್ಲಿ ಟಾಯ್ಲೆಟ್ ಆರ್ಡರ್ ಸೆನ್ಸಾರ್ ಕೂಡ ಇದೆ.

8/8
ರೈಲಿನ ಸ್ಲೀಪರ್ ಕೋಚ್‌ನಲ್ಲಿ ಸ್ವಯಂಚಾಲಿತ ಗೇಟ್‌ಗಳಿವೆ
ರೈಲಿನ ಸ್ಲೀಪರ್ ಕೋಚ್‌ನಲ್ಲಿ ಸ್ವಯಂಚಾಲಿತ ಗೇಟ್‌ಗಳಿವೆ

ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಸ್ಲೀಪರ್ ಕೋಚ್‌ನಲ್ಲಿ ಗೇಟ್ಸ್ ಸ್ವಯಂಚಾಲಿತವಾಗಿವೆ. ಎಲ್ಲಾ ಸ್ವಯಂಚಾಲಿತ ಗೇಟ್‌ಗಳನ್ನು ಮುಚ್ಚುವವರೆಗೆ ರೈಲು ಓಡುವುದಿಲ್ಲ.





Read More