PHOTOS

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಹುಲ್ ವೈದ್ಯ-ದಿಶಾ ಪರ್ಮಾರ್ ಮದುವೆ ಹೇಗಿತ್ತು ಗೊತ್ತಾ..?

ಬಿಗ್​ ಬಾಸ್​ ಖ್ಯಾತಿಯ ಜೋಡಿ ರಾಹುಲ್​ ವೈದ್ಯ ಹಾಗೂ ದಿಶಾ ಪರ್ಮಾರ್​​ ಸಪ್ತಪದಿ ತುಳಿದಿದ್ದಾರೆ.

...
Advertisement
1/6
ಬಿಗ್‌ಬಾಸ್ 14ರ ರನ್ನರ್ ಅಪ್
ಬಿಗ್‌ಬಾಸ್ 14ರ ರನ್ನರ್ ಅಪ್
ಖ್ಯಾತ ಗಾಯಕನಾಗಿರುವ ರಾಹುಲ್ ವೈದ್ಯ ಹಿಂದಿ ಬಿಗ್‌ಬಾಸ್ ಸೀಸನ್ 14ರ ರನ್ನರ್ ಅಪ್ ಆಗಿದ್ದರು. ಬಿಗ್‌ಬಾಸ್ ಮನೆಯಲ್ಲಿದ್ದಷ್ಟು ಕಾಲ ಈ ಜೋಡಿ ಭರ್ಜರಿ ಮನರಂಜನೆ ನೀಡಿತ್ತು.
2/6
ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದ ಜೋಡಿ
ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದ ಜೋಡಿ
ಬಿಗ್​ ಬಾಸ್​ ಖ್ಯಾತಿಯ ಜೋಡಿ ರಾಹುಲ್​ ವೈದ್ಯ ಹಾಗೂ ದಿಶಾ ಪರ್ಮಾರ್​​ ಸಪ್ತಪದಿ ತುಳಿದಿದ್ದಾರೆ. ಈ ಮೂಲಕ ಶಾಸ್ತ್ರೋಕ್ತವಾಗಿ ಹೊಸ ಜೀವನ ಆರಂಭಿಸಿದ್ದಾರೆ.
3/6
ಬಿಗ್‌ಬಾಸ್‌ ನಲ್ಲಿ ಲವ್ ಸ್ಟೋರಿ
ಬಿಗ್‌ಬಾಸ್‌ ನಲ್ಲಿ ಲವ್ ಸ್ಟೋರಿ
ಹಿಂದಿಯ ಬಿಗ್‌ಬಾಸ್‌ ಸೀಸನ್​ 14ರ ಸ್ಪರ್ಧಿಗಳಾಗಿದ್ದ ರಾಹುಲ್ ವೈದ್ಯ ಹಾಗೂ ದಿಶಾ ಪರ್ಮಾರ್ ಅವರ ಲವ್​ ಸ್ಟೋರಿ ಆರಂಭವಾಗಿದ್ದು ಬಿಗ್‌ಬಾಸ್‌​ ಮನೆಯಲ್ಲಿ. ದಿಶಾರಿಗೆ ರಾಹುಲ್ ಅಲ್ಲಿಯೇ ಪ್ರೇಮ ನಿವೇದನೆ ಮಾಡುವ ಮೂಲಕ ವಿವಾಹ ಪ್ರಸ್ತಾಪ ಮಾಡಿದ್ದರು. ಇದು ಭಾರೀ ಸುದ್ದಿಯಾಗಿತ್ತು. ಇದೀಗ ಈ ನವಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.     
4/6
ದಿಶಾ ಬೆರಳಿಗೆ ಉಂಗುರು ತೋಡಿಸಿದ ರಾಹುಲ್
ದಿಶಾ ಬೆರಳಿಗೆ ಉಂಗುರು ತೋಡಿಸಿದ ರಾಹುಲ್
ಒಂದು ವಿಡಿಯೋದಲ್ಲಿ ರಾಹುಲ್ ಅವರು ದಿಶಾ ಬೆರಳಿಗೆ ಉಂಗುರ ತೋಡಿಸಿದರು. ಮೊಣಕಾಲೂರಿ ರಾಹುಲ್ ಉಂಗುರ ತೋಡಿಸುತ್ತಿದ್ದಂತೆ ದಂಪತಿ ಮೇಲೆ ತುಂತುರು ಮಳೆಯಾದಂತೆ ಗುಲಾಬಿ ದಳಗಳನ್ನು ಉದುರಿಸಲಾಗುತ್ತದೆ. ಬಳಿಕ ಜೋಡಿಗಳಿಬ್ಬರು ಅತ್ಯಂತ ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಾರೆ. ಮದುವೆ ಸಮಾರಂಭದಲ್ಲಿ ಎಲ್ಲೆಡೆ ಖುಷಿಯ ಸಂಭ್ರಮ ಕಂಡುಬಂದಿತು.
5/6
ಕೋವಿಡ್-19 ಮಾರ್ಗಸೂಚಿಯಂತೆ ಮದುವೆ
ಕೋವಿಡ್-19 ಮಾರ್ಗಸೂಚಿಯಂತೆ ಮದುವೆ
ಮದುವೆ ದಿನದಂದು ರಾಹುಲ್-ದಿಶಾ ಜೋಡಿ ಅತ್ಯಂತ ಖುಷಿಯಲ್ಲಿರುವುದು ಕಂಡುಬಂತು. ಸ್ನೇಹಿತರಾಗಿ ಕಿರುತೆರೆಯಲ್ಲಿ ಮಿಂಚಿದ್ದ ಈ ಜೋಡಿ ಹಿಂದಿ ಬಿಗ್ ಬಾಸ್ ನಲ್ಲಿ ಭಾರೀ ಸದ್ದು ಮಾಡಿದ್ದರು. ಪರಸ್ಪರ ಒಬ್ಬರಿಗೊಬ್ಬರು ಪ್ರೀತಿಸಿ ಕುಟುಂಬಸ್ಥರು, ಆಪ್ತರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಬದಲ್ಲಿ ಕೋವಿಡ್-19 ಮಾರ್ಗಸೂಚಿಯನ್ನು ಪಾಲಿಸಲಾಗಿತ್ತು.
6/6
ಉಡುಪುಗಳಲ್ಲಿ ಕಂಗೋಳಿಸಿದ ಜೋಡಿ
ಉಡುಪುಗಳಲ್ಲಿ ಕಂಗೋಳಿಸಿದ ಜೋಡಿ
ದಿಶಾ ಪರ್ಮಾರ್ ಗುಲಾಬಿ ಬಣ್ಣದ ದುಪಟ್ಟಾ ಜೊತೆಗೆ ಕೆಂಪು ಬಣ್ಣದ ಘಾಗ್ರಾ ಧರಿಸಿದ್ದರು. ಚಿನ್ನಾಭರಣಗಳೊಂದಿಗೆ ನಟಿ ತಮ್ಮ ಉಡುಪನ್ನು ಮತ್ತಷ್ಟು ಅಲಂಕಾರಗೊಳಿಸಿದ್ದರು. ರಾಹುಲ್ ಅವರು ಕುರ್ತಾ ಜೊತೆಗೆ ಶೆರ್ವಾನಿ ಧರಿಸಿರುವುದು ಕಂಡುಬಂತು. ಮಸ್ತ್ ಮಸ್ತ್ ಉಡುಪಿನಲ್ಲಿ ನವದಂಪತಿ ಭರ್ಜರಿಯಾಗಿ ಕಾಣುತ್ತಿದ್ದರು.




Read More