PHOTOS

ರಾಹು-ಕೇತು ಗೋಚಾರ: 2025ರವರೆಗೆ ಈ ರಾಶಿಯವರ ಬದುಕಿನಲ್ಲಿ ಬರೀ ಶುಭವೇ! ಮುಟ್ಟಿದ್ದೆಲ್ಲಾ ಬಂಗಾರವಾಗುವ ಕಾಲ!

Rahu Ketu Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು-ಕೇತುಗಳನ್ನು ನೆರಳು ಗ್ರಹಗಳು ಎಂತಲೇ ಕರೆಯಲಾಗುತ್ತದೆ. ದುಷ್ಟ ಗ್ರಹಗಳೆಂದು ಕರೆಯಲ್ಪಡುವ ಈ ಗ್ರಹಗಳು ಕೇವಲ ...

Advertisement
1/10
ರಾಹು-ಕೇತು ಗ್ರಹಗಳು
ರಾಹು-ಕೇತು ಗ್ರಹಗಳು

ನವಗ್ರಹಗಳಲ್ಲಿ ನೆರಳು-ಪಾಪ ಗ್ರಹಗಳು ಎಂದು ಕರೆಯಲ್ಪಡುವ ರಾಹು-ಕೇತು ಗ್ರಹಗಳು ಸದಾ ಹಿಮ್ಮುಖವಾಗಿಯೇ ಚಲಿಸುವ ಗ್ರಹಗಳು. 

2/10
ರಾಹು-ಕೇತು ಗೋಚಾರ
ರಾಹು-ಕೇತು ಗೋಚಾರ

ಸದ್ಯ ರಾಹು ಮೀನ ರಾಶಿಯಲಿದ್ದು, ಕೇತು ಕನ್ಯಾ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. 

3/10
9 ತಿಂಗಳು ಇದೇ ಸ್ಥಿತಿಯಲ್ಲಿರುವ ರಾಹು-ಕೇತು
9 ತಿಂಗಳು ಇದೇ ಸ್ಥಿತಿಯಲ್ಲಿರುವ ರಾಹು-ಕೇತು

ರಾಹು-ಕೇತು ಗ್ರಹಗಳೆರಡೂ ಕೂಡ ಮುಂದಿನ ಒಂಬತ್ತು ತಿಂಗಳು ಎಂದರೆ ಮೇ 18ರವರೆಗೆ ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸುವುದಿಲ್ಲ. 

4/10
ರಾಹು-ಕೇತುವಿನಿಂದ ಅದೃಷ್ಟ
ರಾಹು-ಕೇತುವಿನಿಂದ ಅದೃಷ್ಟ

ಸಾಮಾನ್ಯವಾಗಿ ರಾಹು-ಕೇತುಗಳು ಜೀವನದಲ್ಲಿ ಬರೀ ಸಂಕಷ್ಟವನ್ನೇ ಹೆಚ್ಚಿಸುತ್ತವೆ ಎನ್ನಲಾಗುತ್ತದೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಹು-ಕೇತು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದಾಗ ಕೇವಲ ಶುಭ ಫಲಗಳನ್ನಷ್ಟೇ ನೀಡುತ್ತವೆ.   

5/10
ರಾಹು-ಕೇತು ಪ್ರಭಾವ
ರಾಹು-ಕೇತು ಪ್ರಭಾವ

ಸದ್ಯ ಮುಂದಿನ ಒಂಬತ್ತು ತಿಂಗಳು ಮೀನ ರಾಶಿಯಲ್ಲಿರುವ ರಾಹು, ಕನ್ಯಾ ರಾಶಿಯಲ್ಲಿರುವ ಕೇತು ಕೆಲವು ರಾಶಿಯವರ ಅದೃಷ್ಟವನ್ನು ಬೆಳಗಿಸಲಿದ್ದು, ಮುಟ್ಟಿದ್ದೆಲ್ಲಾ ಬಂಗಾರವಾಗುವ ಸಮಯ ಎನ್ನಲಾಗುತ್ತಿದೆ. 

6/10
ಮೇಷ ರಾಶಿ
ಮೇಷ ರಾಶಿ

ರಾಹು-ಕೇತುಗಳ ಕೃಪಾಕಟಾಕ್ಷದಿಂದ ಈ ಸಮಯದಲ್ಲಿ ನಿಮ್ಮ ಬಹುದಿನಗಳ ಕನಸು ನನಸಾಗಲಿದೆ. ಕೌಟುಂಬಿಕ ಸಂತೋಷ, ದಾಂಪತ್ಯ ಸುಖ ವೃದ್ಧಿಯಾಗಲಿದೆ. ಬದುಕಿನಲ್ಲಿ ಹೊಸ ಬದಲಾವಣೆಗಳನ್ನು ಕಾಣಬಹುದು. 

7/10
ಸಿಂಹ ರಾಶಿ
ಸಿಂಹ ರಾಶಿ

ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದ್ದು ವೃತ್ತಿ ಬದುಕಿನಲ್ಲಿ ಹೊಸ ಎತ್ತರಕ್ಕೆ ಏರುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಬಹುದು. 

8/10
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ

ಕೆಲಸದ ಸ್ಥಳದಲ್ಲಿ ನಿಮ್ಮ ಕೀರ್ತಿ ಪ್ರತಿಷ್ಠೆ ಹೆಚ್ಚಾಗಲಿದೆ. ಬಡ್ತಿ ಸಂಭವವೂ ಇದೆ. ಹಠಾತ್ ಧನಲಾಭದಿಂದ ಭೂಮಿ-ವಾಹನ ಖರೀದಿ ಯೋಗವನ್ನು ಪಡೆಯಲಿದ್ದೀರಿ. 

9/10
ಧನು ರಾಶಿ
ಧನು ರಾಶಿ

ಮನೋಕಾಮನೆಗಳು ಪೂರ್ಣಗೊಳ್ಳುವ ಸಕಾಲ ಇದಾಗಿದೆ. ನೀವು ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು ನಿಮ್ಮದೇ. ಕೌಟುಂಬಿಕ ಸುಖ ಪ್ರಾಪ್ತಿ. ವೃತ್ತಿ ಬದುಕಿನಲ್ಲಿ ಹೊಸ ಎತ್ತರಕ್ಕೇರುವಿರಿ. 

10/10
ಸೂಚನೆ
ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More