PHOTOS

Rahu-Ketu: ಜಾತಕದಲ್ಲಿ ರಾಹು-ಕೇತು ದೋಷಕ್ಕೆ ಇಂದೇ ಈ ಪರಿಹಾರ ಕೈಗೊಳ್ಳಿ

Rahu Ketu Dosh: ಜ್ಯೋತಿಷ ಶಾಸ್ತ್ರದಲ್ಲಿ ರಾಹು-ಕೇತು ಗ್ರಹಗಳನ್ನು ಪಾಪ ಗ್ರಹಗಳು ಎಂದು ಕರೆಯಲಾಗುತ್ತದೆ. ಸದಾ ಹಿಮ್ಮುಖವಾಗಿ ಚಲಿಸುವ ಈ ಗ್ರಹಗಳು ಜಾತಕದಲ್ಲಿ ಅಶ...

Advertisement
1/8
ರಾಹು-ಕೇತು
ರಾಹು-ಕೇತು

ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ನೆರಳು ಗ್ರಹಗಳು, ಕ್ರೂರ ಗ್ರಹಗಳು ಎಂತಲೇ ಬಣ್ಣಿಸಲ್ಪಡುವ ರಾಹು-ಕೇತು ಗ್ರಹಗಳು ಸದಾ ಹಿಮ್ಮುಖವಾಗಿ ಚಲಿಸುತ್ತವೆ. ಈ ಗ್ರಹಗಳು 18 ತಿಂಗಳು ಅಥವಾ ಒಂದೂವರೆ ವರ್ಷಗಳಿಗೊಮ್ಮೆ ತಮ್ಮ ರಾಶಿಚಕ್ರವನ್ನು ಬದಲಾಯಿಸುತ್ತವೆ. 

2/8
ರಾಹು ಗೋಚಾರ
ರಾಹು ಗೋಚಾರ

ರಾಹು ಗೋಚಾರ: ಇತ್ತೀಚೆಗಷ್ಟೇ 30 ಅಕ್ಟೋಬರ್ 2023 ರಂದು ರಾಹುವು ಮೇಷ ರಾಶಿಯನ್ನು ತೊರೆದು ಮೀನಾ ರಾಶಿಯನ್ನು ಪ್ರವೇಶಿಸಿದ್ದಾನೆ. 

3/8
ಕೇತು ಗೋಚಾರ
ಕೇತು ಗೋಚಾರ

ಕೇತು ಗೋಚಾರ: ಅದೇ ಸಮಯದಲ್ಲಿ ಕೇತು ತುಲಾದಿಂದ ಹೊರಬಂದು ಕನ್ಯಾ ರಾಶಿಗೆ ಪದಾರ್ಪಣೆ ಮಾಡಿದ್ದಾನೆ. 

4/8
ರಾಹು-ಕೇತುಗಳ ಪ್ರಭಾವ
ರಾಹು-ಕೇತುಗಳ ಪ್ರಭಾವ

ರಾಹು-ಕೇತು ಗ್ರಹಗಳ ಸಂಚಾರವು ಇತರ ಗ್ರಹಗಳಂತೆ ಎಲ್ಲಾ ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಜಾತಕದಲ್ಲಿ ರಾಹು-ಕೇತು ದೋಷವಿದ್ದಾಗ ಜೀವನವು ಸಮಸ್ಯೆಗಳಿಂದ ಕೂಡಿರುತ್ತದೆ. ಆದರೆ, ನೀವು ಕೆಲವು ಸರಳ ಪರಿಹಾರಗಳ ಮೂಲಕ ರಾಹು-ಕೇತು ದೋಷದಿಂದ ಪರಿಹಾರವನ್ನು ಪಡೆಯಬಹುದು. ಅವುಗಳೆಂದರೆ... 

5/8
ಕಪ್ಪು ನಾಯಿಗೆ ಆಹಾರ
ಕಪ್ಪು ನಾಯಿಗೆ ಆಹಾರ

ಪ್ರತಿ ದಿನ ಕಪ್ಪು ನಾಯಿಗೆ ಆಹಾರವನ್ನು ನೀಡುವುದರಿಂದ ಜಾತಕದಲ್ಲಿ ರಾಹು-ಕೇತು ದೋಷದಿಂದ ಪರಿಹಾರ ಸಿಗಲಿದೆ. 

6/8
ಕನ್ಯಾ ಪೂಜೆ
ಕನ್ಯಾ ಪೂಜೆ

ಭಾನುವಾರದ ದಿನ ಕನ್ಯೆಯರನ್ನು ಮನೆಗೆ ಕರೆದು ಅವರ ಪಾದ ಪೂಜೆ ಮಾಡಿ, ಹಬ್ಬದ ಅಡಿಗೆ ಮಾಡಿ ಬಾಳೆ ಎಲೆಯಲ್ಲಿ ಊಟಕ್ಕೆ ಹಾಕಿ. ಇದರಿಂದ ಜಾತಕದಲ್ಲಿ ರಾಹು-ಕೇತು ಗ್ರಹಗಳ ಕೆಟ್ಟ ಪ್ರಭಾವ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ. 

7/8
ಶೇಷನಾಗನ ಮೇಲೆ ನರ್ತಿಸುವ ಕೃಷ್ಣ
ಶೇಷನಾಗನ ಮೇಲೆ ನರ್ತಿಸುವ ಕೃಷ್ಣ

ಶೇಷನಾಗನ ಮೇಲೆ ನರ್ತಿಸುವ ಶ್ರೀ ಕೃಷ್ಣನ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ ರಾಹು-ಕೇತುಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ಹೇಳಲ್ಲಾಗುತ್ತದೆ. 

8/8
9 ಮುಖಿ ರುದ್ರಾಕ್ಷಿ
9 ಮುಖಿ ರುದ್ರಾಕ್ಷಿ

9 ಮುಖಿ ರುದ್ರಾಕ್ಷಿ: 

ಬುಧವಾರದ ದಿನ   9 ಮುಖಿ ರುದ್ರಾಕ್ಷಿಯನ್ನು ಧರಿಸುವುದರಿಂದಲೂ ಕೇತು ಗ್ರಹಕ್ಕೆ ಸಂಬಂಧಿಸಿದ ದೋಷಗಳನ್ನು ಹೋಗಲಾಡಿಸಬಹುದು ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 





Read More