PHOTOS

Post Office: ಅಂಚೆ ಕಚೇರಿಯ ಯಾವ ಯೋಜನೆಯಲ್ಲಿ ಹಣ ದ್ವಿಗುಣಗೊಳ್ಳುತ್ತದೆ?

                     

...
Advertisement
1/8
ಅಂಚೆ ಕಚೇರಿ ಸಮಯ ಠೇವಣಿ
ಅಂಚೆ ಕಚೇರಿ ಸಮಯ ಠೇವಣಿ

1 ವರ್ಷದಿಂದ 3 ವರ್ಷಗಳವರೆಗೆ ಪೋಸ್ಟ್ ಆಫೀಸ್ ಸಮಯ ಠೇವಣಿಯ ಮೇಲೆ 5.5 ಶೇಕಡಾ ಬಡ್ಡಿ ಲಭ್ಯವಿದೆ. ಅದರಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಹಣವು ಸುಮಾರು 13 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ. ನೀವು 5 ವರ್ಷದ ಸಮಯ ಠೇವಣಿಯ ಮೇಲೆ 6.7 ಶೇಕಡಾ ಬಡ್ಡಿಯನ್ನು ಪಡೆಯುತ್ತೀರಿ. ಇದರಲ್ಲಿ, ನಿಮ್ಮ ಹಣವು ಸುಮಾರು 10-11 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.  

2/8
ಅಂಚೆ ಕಚೇರಿ ಉಳಿತಾಯ ಖಾತೆ
ಅಂಚೆ ಕಚೇರಿ ಉಳಿತಾಯ ಖಾತೆ

ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿನ (Post office Savings account) ಹಣವು ಸ್ವಲ್ಪ ತಡವಾಗಿ ಡಬಲ್ ಆಗುತ್ತದೆ. ಏಕೆಂದರೆ, ಇದರಲ್ಲಿ 4 ಪ್ರತಿಶತ ವಾರ್ಷಿಕ ಬಡ್ಡಿಯನ್ನು ನೀಡಲಾಗುತ್ತಿದೆ. ಅಂದರೆ ಈ ಯೋಜನೆಯಲ್ಲಿ ಹಣವನ್ನು ದ್ವಿಗುಣಗೊಳಿಸಲು 18 ವರ್ಷಗಳು ಬೇಕಾಗುತ್ತದೆ.

3/8
ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ
ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ

ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿಯ (Post office Recurring Deposit) ಮೇಲೆ ಶೇ. 5.8 ರಷ್ಟು ಬಡ್ಡಿ ಲಭ್ಯವಿದೆ. ಇಲ್ಲಿ ಹೂಡಿದ ಮೇಲೆ ಸುಮಾರು 12.41 ವರ್ಷಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ.

4/8
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ (Monthly Income Scheme)  6.6% ಬಡ್ಡಿಯನ್ನು ನೀಡಲಾಗುತ್ತಿದೆ. ಇದರಲ್ಲಿ, ಹೂಡಿಕೆಯ ಮೇಲೆ ಸುಮಾರು 10-11 ವರ್ಷಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ.

ಇದನ್ನೂ ಓದಿ- Post Office : ಪೋಸ್ಟ್ ಆಫೀಸ್ ಉಳಿತಾಯ ಖಾತೆ: ನೀವು ತಿಳಿದುಕೊಳ್ಳಬೇಕಾದ ಬಡ್ಡಿ ದರ, ಆದಾಯ ತೆರಿಗೆ ನಿಯಮ

5/8
ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆ
ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆ

ಅಂಚೆ ಕಚೇರಿಯ ಹಿರಿಯ ನಾಗರಿಕರ ಉಳಿತಾಯ ಯೋಜನೆಯು (Senior Citizen Savings Scheme) 7.4 ಶೇಕಡಾ ಬಡ್ಡಿಯನ್ನು ಪಡೆಯುತ್ತಿದೆ. ಈ ಯೋಜನೆಯಲ್ಲಿ, ಸುಮಾರು 9 ರಿಂದ 10 ವರ್ಷಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ.

6/8
ಅಂಚೆ ಕಚೇರಿ ಸಾರ್ವಜನಿಕ ಭವಿಷ್ಯ ನಿಧಿ
 ಅಂಚೆ ಕಚೇರಿ ಸಾರ್ವಜನಿಕ ಭವಿಷ್ಯ ನಿಧಿ

ಅಂಚೆ ಕಚೇರಿಯಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (PPF) 15 ವರ್ಷಗಳ ಹೂಡಿಕೆಯ ಮೇಲೆ 7.1 ಪ್ರತಿಶತ ಬಡ್ಡಿಯನ್ನು ಪಡೆಯುತ್ತಿದೆ. ಇಲ್ಲಿ ಹಣವನ್ನು ದ್ವಿಗುಣಗೊಳಿಸಲು ಸುಮಾರು 10-11 ವರ್ಷಗಳು ಬೇಕಾಗುತ್ತದೆ.

ಇದನ್ನೂ ಓದಿ- Money Double : ನಿಮ್ಮ ಹಣ ಡಬಲ್ ಆಗಬೇಕೆ? ಹಾಗಿದ್ರೆ Post Office ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ!

7/8
ಅಂಚೆ ಕಚೇರಿ ಸುಕನ್ಯಾ ಸಮೃದ್ಧಿ ಖಾತೆ
ಅಂಚೆ ಕಚೇರಿ ಸುಕನ್ಯಾ ಸಮೃದ್ಧಿ ಖಾತೆ

ಅಂಚೆ ಕಚೇರಿಯ ಸುಕನ್ಯಾ ಸಮೃದ್ಧಿ (Sukanya Samriddhi) ಖಾತೆ ಯೋಜನೆಯಲ್ಲಿ ಅತ್ಯಧಿಕ ಬಡ್ಡಿ 7.6 ಶೇಕಡಾ. 

8/8
ಅಂಚೆ ಕಚೇರಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ
ಅಂಚೆ ಕಚೇರಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ

ಅಂಚೆ ಕಚೇರಿಯ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವು  (National saving certificate) 6.8 ಶೇಕಡಾ ಬಡ್ಡಿಯನ್ನು ಪಡೆಯುತ್ತಿದೆ. ಈ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಸುಮಾರು 10-11 ವರ್ಷಗಳಲ್ಲಿ ಹಣವನ್ನು ದ್ವಿಗುಣಗೊಳಿಸುತ್ತದೆ.  





Read More