PHOTOS

PM Modi in Australia: ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಮೋದಿ ಹವಾ ಹೇಗಿತ್ತು ನೋಡಿ

PM Narendra Modi in Australia: ಬರೋಬ್ಬರಿ 9 ವರ್ಷಗಳ ನಂತರ ಆಸ್ಟ್ರೇಲಿಯಾಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ.  2014ರಲ್ಲಿ...

Advertisement
1/5
ಪ್ರಧಾನಿ ಮೋದಿಯದ್ದೇ ಹವಾ!
ಪ್ರಧಾನಿ ಮೋದಿಯದ್ದೇ ಹವಾ!

ಆಸ್ಟ್ರೇಲಿಯಾದ ನೆಲದಲ್ಲೂ ಪ್ರಧಾನಿ ನರೇಂದ್ರ ಮೋದಿಯದ್ದೇ ಹವಾ ಜೋರಾಗಿದೆ. ಪಿಎಂ ಮೋದಿ ಹವಾ ನೋಡಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಭಾರತದ ನಾಯಕನಿಗೆ ಬಹುಪರಾಕ್ ಹೇಳಿದ್ದಾರೆ.

2/5
ಸಿಡ್ನಿಯಲ್ಲಿ ಭವ್ಯ ಸಮಾರಂಭ
ಸಿಡ್ನಿಯಲ್ಲಿ ಭವ್ಯ ಸಮಾರಂಭ

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಮಂಗಳವಾರ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಿಡ್ನಿಯ ಖುಡೋಸ್ ಬ್ಯಾಂಕ್ ಅರೆನಾ ಪ್ರದೇಶದಲ್ಲಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಲು ಭವ್ಯ ಸಮಾರಂಭವನ್ನು ಆಯೋಜಿಸಲಾಗಿತ್ತು.

3/5
'ಭಾರತ್ ಮಾತಾ ಕಿ ಜೈ'
'ಭಾರತ್ ಮಾತಾ ಕಿ ಜೈ'

ಪ್ರಧಾನಿ ಮೋದಿಯವರು ಕಾರ್ಯಕ್ರಮದ ವೇದಿಕೆ ಹತ್ತಿದ ಕೂಡಲೇ ಅನಿವಾಸಿ ಭಾರತೀಯರು 'ಭಾರತ್ ಮಾತಾ ಕಿ ಜೈ' ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. ಈ ದೃಶ್ಯ ಕಂಡು ಖುದ್ದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಒಂದು ಕ್ಷಣ ದಂಗಾಗಿಹೋದರು.

4/5
9 ವರ್ಷಗಳ ನಂತರ ಆಸ್ಟ್ರೇಲಿಯಾಗೆ ಭೇಟಿ
9 ವರ್ಷಗಳ ನಂತರ ಆಸ್ಟ್ರೇಲಿಯಾಗೆ ಭೇಟಿ

ಬರೋಬ್ಬರಿ 9 ವರ್ಷಗಳ ನಂತರ ಆಸ್ಟ್ರೇಲಿಯಾಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ.  2014ರಲ್ಲಿ ಮೊದಲ ಬಾರಿಗೆ ಪ್ರಧಾನಿ ಆದಾಗ ಆಸ್ಟ್ರೇಲಿಯಾಗೆ ಭೇಟಿ ನೀಡಿದ್ದ ಮೋದಿ ಇದೀಗ ಮತ್ತೆ 9 ವರ್ಷಗಳ ನಂತರ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು.

5/5
ಅನಿವಾಸಿ ಭಾರತೀಯರ ಭರ್ಜರಿ ಸ್ವಾಗತ
ಅನಿವಾಸಿ ಭಾರತೀಯರ ಭರ್ಜರಿ ಸ್ವಾಗತ

ಆಸ್ಟ್ರೇಲಿಯಾಗೆ ಬಂದಿಳಿದ ಪ್ರಧಾನಿ ಮೋದಿಯವರಿಗೆ ಅನಿವಾಸಿ ಭಾರತೀಯರು ಭರ್ಜರಿ ಸ್ವಾಗತ ಕೋರಿದರು. ಇದೇ ವೇಳೆ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು 'ಪ್ರಧಾನಿ ಮೋದಿಯೇ ಬಾಸ್' ಎಂದು ಹೊಗಳಿದರು.





Read More