PHOTOS

ಇದೊಂದು ಸಸ್ಯವನ್ನು ಮನೆಯಲ್ಲಿ ಇಟ್ಟು ನೋಡಿ !ಒಂದೇ ತಿಂಗಳಲ್ಲಿ ನಿಮ್ಮ ಜೀವನದಲ್ಲಿ ಗೋಚರಿಸುವುದು ಬದಲಾವಣೆ

ವಾಸ್ತು ಶಾಸ್ತ್ರದಂತೆ ಫೆಂಗ್ ಶೂಯಿಯಲ್ಲೂ ಮರಗಳಿಗೆ ಮತ್ತು ಗಿಡಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. 

...
Advertisement
1/6
ಫೆಂಗ್ ಶೂಯಿ ಸಸ್ಯಗಳು :
ಫೆಂಗ್ ಶೂಯಿ ಸಸ್ಯಗಳು :

ವಾಸ್ತು ಶಾಸ್ತ್ರದಂತೆ ಫೆಂಗ್ ಶೂಯಿಯಲ್ಲೂ ಮರಗಳಿಗೆ ಮತ್ತು ಗಿಡಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮನೆಯಲ್ಲಿ ಸರಿಯಾದ ಸಸ್ಯವನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ನೆಟ್ಟರೆ, ಮನೆಯಲ್ಲಿ ಧನಾತ್ಮಕ ಶಕ್ತಿಯ ಪರಿಚಲನೆಯು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.  

2/6
ಜೇಡ್ ಸಸ್ಯ
ಜೇಡ್ ಸಸ್ಯ

ಜೋತಿಷ್ಯ ಶಾಸ್ತ್ರದ ಪ್ರಕಾರ ದುಂಡನೆಯ ಎಲೆಗಳನ್ನು ಹೊಂದಿರುವ ಜೇಡ್ ಸಸ್ಯವನ್ನು  ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಹಣದ ಹರಿವು ವೇಗವಾಗಿ ಹೆಚ್ಚಾಗುತ್ತದೆ. ಇದಲ್ಲದೆ, ಇದು ಆರೋಗ್ಯ ಮತ್ತು ಸಂಪತ್ತನ್ನು ಸಹ ಕಾಪಾಡುತ್ತದೆ.  

3/6
ಲಕ್ಕಿ ಬಂಬೂ ಪ್ಲಾಂಟ್
ಲಕ್ಕಿ ಬಂಬೂ ಪ್ಲಾಂಟ್

ಲಕ್ಕಿ ಬಂಬೂ ಪ್ಲಾಂಟ್ ನ ಸುತ್ತಲೂ ಕೆಂಪು ಬಣ್ಣದ ರಿಬ್ಬನ್ ಅನ್ನು ಕಟ್ಟಬೇಕು.ಬೆಂಕಿ, ಭೂಮಿ,ನೀರು,ಮರ ಮತ್ತು ಲೋಹದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದರಿಂದ ಇದನ್ನು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. 8 ಕಾಂಡಗಳನ್ನು ಹೊಂದಿರುವ ಸಸ್ಯವು ಹಣವನ್ನು ಆಕರ್ಷಿಸುತ್ತದೆ ಎಂದು ಹೇಳಲಾಗಿದೆ.

4/6
​ಆರ್ಕಿಡ್ ಸಸ್ಯ
​ಆರ್ಕಿಡ್ ಸಸ್ಯ

ಫೆಂಗ್ ಶೂಯಿ ಪ್ರಕಾರ, ಮನೆಯಲ್ಲಿ ಆರ್ಕಿಡ್ ಸಸ್ಯವನ್ನು ನೆಡುವುದರಿಂದ ಸಕಾರಾತ್ಮಕತೆ ಬರುತ್ತದೆ. ಮನೆಯಲ್ಲಿ ಎರಡು ಕಾಂಡದ ಆರ್ಕಿಡ್ ಅನ್ನು ಮಾತ್ರ ನೆಡಬೇಕು. ನೇರಳೆ ಆರ್ಕಿಡ್‌ಗಳನ್ನು ಹಣಕ್ಕಾಗಿ ಮತ್ತು ಹಳದಿ ಆರ್ಕಿಡ್‌ಗಳನ್ನು ಆರೋಗ್ಯಕ್ಕೆ ಉತ್ತಮವೆಂದು ಹೇಳಲಾಗುತ್ತದೆ. 

5/6
ಮನಿ ಪ್ಲಾಂಟ್
ಮನಿ ಪ್ಲಾಂಟ್

ಮನೆಯಲ್ಲಿ ಮಣಿ ಪ್ಲಾಂಟ್ ನೆಟ್ಟರೆ ಅದು ಆರ್ಥಿಕ ಸಮಸ್ಯೆಗಳನ್ನು ನಿವಾರಿಸುತ್ತದೆ.ಮನೆಯ ಆಗ್ನೇಯ ಮೂಲೆಯಲ್ಲಿ ಈ ಸಸ್ಯವನ್ನು ಇಡುವುದು ಲಾಭದಾಯಕ.

6/6
ಸ್ನೇಕ್ ಪ್ಲಾಂಟ್ :
ಸ್ನೇಕ್ ಪ್ಲಾಂಟ್ :

ಸ್ನೇಕ್ ಪ್ಲಾಂಟ್ ಅನ್ನು ಮನೆಯಲ್ಲಿ ನೆಟ್ಟರೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ. ಇದನ್ನು ಮನೆಯ ಸ್ಟಡಿ ರೂಂನಲ್ಲಿ ಅಳವಡಿಸುವುದರಿಂದ ಸಾಕಷ್ಟು ಲಾಭಗಳು ಸಿಗುತ್ತವೆ. 

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)         





Read More