PHOTOS

Pitru Paksha 2023: ಶ್ರಾದ್ಧದ ವೇಳೆ ಈ ವಸ್ತುಗಳನ್ನು ದಾನ ಮಾಡಿದ್ರೆ ಪಿತೃ ದೋಷದಿಂದ ಪರಿಹಾರ

Pitru Paksha 2023: ಈ ವರ್ಷ ಪಿತೃ ಪಕ್ಷವು ಸೆಪ್ಟೆಂಬರ್ 29ರಿಂದ ಪ್ರಾರಂಭವಾಗಿದ್ದು, ಇದು ಅಕ್ಟೋಬರ್ 14ರವರೆಗೆ ಮುಂದುವರಿಯುತ್ತದೆ. ಈ...

Advertisement
1/5
ಪೂರ್ವಜರಿಗೆ ನೈವೇದ್ಯ ಮತ್ತು ಶ್ರಾದ್ಧ
ಪೂರ್ವಜರಿಗೆ ನೈವೇದ್ಯ ಮತ್ತು ಶ್ರಾದ್ಧ

ಪಿತೃ ಪಕ್ಷದ ಈ ದಿನಗಳಲ್ಲಿ ಪೂರ್ವಜರಿಗೆ ನೈವೇದ್ಯ ಮತ್ತು ಶ್ರಾದ್ಧವನ್ನು ಮಾಡಲಾಗುತ್ತದೆ. ಈ ಸಮಯದಲ್ಲಿ ಪೂರ್ವಜರು ಭೂಮಿಗೆ ಬಂದು ತಮ್ಮ ಕುಟುಂಬ ಸದಸ್ಯರನ್ನು ಆಶೀರ್ವದಿಸುತ್ತಾರೆಂಬ ನಂಬಿಕೆಯಿದೆ. ಶ್ರಾದ್ಧ ಪಕ್ಷದ ಸಮಯದಲ್ಲಿ ಕೆಲವು ವಸ್ತುಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

2/5
ನಿರ್ಗತಿಕರಿಗೆ ಆಹಾರ
ನಿರ್ಗತಿಕರಿಗೆ ಆಹಾರ

ಪಿತೃಪಕ್ಷದ ಸಮಯದಲ್ಲಿ ನಿರ್ಗತಿಕರಿಗೆ ಆಹಾರವನ್ನು ನೀಡಬೇಕು. ಹೀಗೆ ಮಾಡುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ ಮತ್ತು ಪಿತೃ ದೋಷದಿಂದ ಮುಕ್ತಿ ಪಡೆಯುತ್ತಾರೆ.

3/5
ವಸ್ತ್ರದಾನ ಮಂಗಳಕರ
ವಸ್ತ್ರದಾನ ಮಂಗಳಕರ

ಪಿತೃ ಪಕ್ಷದ ಸಮಯದಲ್ಲಿ ವಸ್ತ್ರದಾನ ಮಾಡುವುದು ಕೂಡ ಮಂಗಳಕರ. ನೀವು ಅಗತ್ಯವಿರುವವರಿಗೆ ಧೋತಿ, ಕುರ್ತಾ, ಟವೆಲ್ ಮತ್ತು ಶೂಗಳನ್ನು ದಾನ ಮಾಡಬಹುದು. ಹೀಗೆ ಮಾಡುವುದರಿಂದ ರಾಹು-ಕೇತು ದೋಷದ ಜೊತೆಗೆ ಪಿತೃ ದೋಷದಿಂದ ಪರಿಹಾರ ಸಿಗುತ್ತದೆ.

4/5
ಗೋದಾನ
ಗೋದಾನ

ಪಿತೃಪಕ್ಷದ ಸಮಯದಲ್ಲಿ ಗೋವನ್ನು ದಾನ ಮಾಡುವುದರಿಂದ ಇಡೀ ಕುಟುಂಬದ ಪಾಪಗಳು ನಾಶವಾಗುತ್ತವೆ ಮತ್ತು ಪಿತೃ ದೋಷದಿಂದ ಮುಕ್ತಿ ಸಿಗುತ್ತದೆ.

5/5
ಕಪ್ಪು ಎಳ್ಳನ್ನು ದಾನ ಮಾಡಿ
ಕಪ್ಪು ಎಳ್ಳನ್ನು ದಾನ ಮಾಡಿ

ಪಿತೃಪಕ್ಷದ ಸಮಯದಲ್ಲಿ ಯಾವುದೇ ನಿರ್ಗತಿಕರಿಗೆ ಅಥವಾ ಬ್ರಾಹ್ಮಣರಿಗೆ ಕಪ್ಪು ಎಳ್ಳನ್ನು ದಾನ ಮಾಡಿದರೆ, ಪೂರ್ವಜರು ಸಂತುಷ್ಟರಾಗುತ್ತಾರೆ ಮತ್ತು ಶನಿದೇವರ ಆಶೀರ್ವಾದವೂ ಸಿಗುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)





Read More