PHOTOS

ನವರಾತ್ರಿಯಲ್ಲಿ ದುರ್ಗಾ ಮಾತೆಗೆ ಈ ರೀತಿ ದೀಪ ಬೆಳಗಿಸಿದರೆ ಸುಖ-ಸಂಪತ್ತಿಗೆ ಎಂದಿಗೂ ಕೊರತೆಯಿಲ್ಲ

Navratri Remedies: ಹಿಂದೂ ಧರ್ಮದಲ್ಲಿ ನವರಾತ್ರಿಗೆ ತುಂಬಾ ವಿಶೇಷವಿದೆ. ನವರಾತ್ರಿಯಲ್ಲಿ ದುರ್ಗಾ ಮಾತೆಯ ಮುಂದೆ ದೀಪ ಹಚ್ಚುವಾಗ ಕೆಲವು ನಿಯಮಗಳನ್ನು ಅನುಸರಿಸುವ...

Advertisement
1/7
ನವರಾತ್ರಿ
ನವರಾತ್ರಿ

2023ರ ಶರದ್ ನವರಾತ್ರಿ  ಅಕ್ಟೋಬರ್ 15, 2023ರಿಂದ ಆರಂಭವಾಗಲಿದೆ. ನವರಾತ್ರಿಯಲ್ಲಿ ನವ ದಿನವೂ ದುರ್ಗಾ ಮಾತೆಯನ್ನು ಹಲವು ರೂಪಗಳಲ್ಲಿ ಪೂಜಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವರಾತ್ರಿಯಲ್ಲಿ ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳುವುದರಿದ ಅಂತಹ ಮನೆಯಲ್ಲಿ ಸುಖ-ಸಂತೋಷಕ್ಕೆ ಎಂದಿಗೂ ಕೊರತೆ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ. 

2/7
ನವರಾತ್ರಿ ಉಪಾಯ
ನವರಾತ್ರಿ ಉಪಾಯ

ಹೌದು, ನವರಾತ್ರಿಯಲ್ಲಿ ದುರ್ಗಾ ಮಾತೆಗೆ ಕೆಲವು ವಸ್ತುಗಳನ್ನು ಅರ್ಪಿಸುವುದರಿಂದ ಹಾಗೂ ತಾಯಿ ದುರ್ಗೆ, ತಾಯಿ ಚಾಮುಂಡೇಶ್ವರಿಯ ಮುಂದೆ ದೀಪ ಬೆಳಗಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟರೆ ಅಂತಹ ಮನೆಯಲ್ಲಿ ಎಂದಿಗೂ ಕೂಡ ಸುಖ-ಸಂತೋಷಕ್ಕೆ ಕೊರತೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಅಂತಹ ಕ್ರಮಗಳು ಯಾವುವು ಎಂದು ನೋಡುವುದಾದರೆ... 

3/7
ಅಖಂಡ ಜ್ಯೋತಿ
ಅಖಂಡ ಜ್ಯೋತಿ

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ನವರಾತ್ರಿಯಲ್ಲಿ ಮಾತೆ ದುರ್ಗೆಗೆ ಅಖಂಡ ಜ್ಯೋತಿ ಬೆಳಗಿಸುವುದನ್ನು ಅತ್ಯಂತ ಮಂಗಳಕರ ಎಂದು ಭಾವಿಸಲಾಗಿದೆ. 

4/7
ಯಾವ ದಿಕ್ಕಿನಲ್ಲಿ ದೀಪ ಬೆಳಗಿಸಬೇಕು?
ಯಾವ ದಿಕ್ಕಿನಲ್ಲಿ ದೀಪ ಬೆಳಗಿಸಬೇಕು?

ಉತ್ತರ ದಿಕ್ಕು:  ಮಾತೆ ಚಾಮುಂಡೇಶ್ವರಿಯ ಹೆಸರಿನಲ್ಲಿ ದೀಪ ಬೆಳಗಿಸುವಗ ಉತ್ತರ ದಿಕ್ಕಿನಲ್ಲಿ ದೀಪ ಬೆಳಗುವುದನ್ನು ತುಂಬಾ ಶ್ರೇಷ್ಠ ಎಂದು ಹೇಳಲಾಗುತ್ತದೆ. ಈ ದಿಕ್ಕಿನಲ್ಲಿ ದೀಪ ಬೆಳಗುವುದರಿಂದ ವ್ಯಕ್ತಿಯನ್ನು ಅಕಾಲಿಕ ಮರಣದಿಂದ ಪಾರುಮಾಡಬಹುದು ಎಂಬ ನಂಬಿಕೆಯೂ ಇದೆ.   

5/7
ಪೂರ್ವ-ಪಶ್ಚಿಮ ದಿಕ್ಕು
ಪೂರ್ವ-ಪಶ್ಚಿಮ ದಿಕ್ಕು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತಾಯಿ ದುರ್ಗೆಯ ಹೆಸರಿನಲ್ಲಿ ಮನೆಯ ಪೂರ್ವ ದಿಕ್ಕಿನಲ್ಲಿ ದೀಪ ಬೆಳಗುವುದರಿಂದ ಸಂಪತ್ತು ವೃದ್ಧಿಯಾದರೆ, ಪಶ್ಚಿಮ ದಿಕ್ಕಿನಲ್ಲಿ ದೀಪ ಬೆಳಗುವುದರಿಂದ ಸಮೃದ್ಧಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. 

6/7
ಈ ದಿಕ್ಕಿನಲ್ಲಿ ದೀಪ ಬೆಳಗಿಸಬಾರದು
 ಈ ದಿಕ್ಕಿನಲ್ಲಿ ದೀಪ ಬೆಳಗಿಸಬಾರದು

ಧಾರ್ಮಿಕ ನಂಬಿಕೆಗಳ ಪ್ರಕಾರ, ನಾವು ತಾಯಿ ದುರ್ಗೆಯ ಹೆಸರಿನಲ್ಲಿ ದೀಪ ಬೆಳಗಿಸುವಾಗ ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನಲ್ಲಿ ದೀಪವನ್ನು ಬೆಳಗಿಸಬಾರದು ಎಂದು ನಂಬಲಾಗಿದೆ. 

7/7
ಸುಖ ದಾಂಪತ್ಯಕ್ಕೆ ಸಲಹೆ
ಸುಖ ದಾಂಪತ್ಯಕ್ಕೆ ಸಲಹೆ

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ನವರಾತ್ರಿಯಲ್ಲಿ ದುರ್ಗಾ ಮಾತೆಗೆ ಬೆಣ್ಣೆಯನ್ನು ಅರ್ಪಿಸುವುದರಿಂದ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಎನ್ನಲಾಗುವುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  





Read More