PHOTOS

ತೂಕ ಇಳಿಕೆಯಷ್ಟೇ ಅಲ್ಲ, ಅಲೋವೆರಾದಿಂದ ಆರೋಗ್ಯಕ್ಕೆ ಸಿಗುತ್ತೆ ಇಷ್ಟೆಲ್ಲಾ ಲಾಭಗಳು

Aloe Vera Plant At Home: ಸಾಮಾನ್ಯವಾಗಿ ಎಲ್ಲೆಡೆ ಬಳಸಲ್ಪಡುವ ಸಸ್ಯಗಳಲ್ಲಿ ಅಲೋವೆರಾ ಕೂಡ ಒಂದು. ಇದು ಸೌಂದರ್ಯಕ್ಕಷ್ಟೇ ಅಲ್ಲ ಆರೋಗ್ಯಕ...

Advertisement
1/8
ಅಲೋವೆರಾ
ಅಲೋವೆರಾ

ಎಲ್ಲೆಡೆ ವ್ಯಾಪಕವಾಗಿ ಬಳಸಲ್ಪಡುವ ಸಸ್ಯ ಪ್ರಭೇದಗಳಲ್ಲಿ ಅಲೋವೆರಾ ಕೂಡ ಒಂದು. ದೇಹದ ಆಂತರಿಕ ಮತ್ತು ಬಾಹ್ಯ ಚಿಕಿತ್ಸೆಗೆ ಅಲೋವೆರಾ ತುಂಬಾ ಪ್ರಯೋಜನಕಾರಿ ಆಗಿದೆ. 

2/8
ಖನಿಜಗಳು
ಖನಿಜಗಳು

ಅಲೋವೆರಾ ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ, ಸತು, ತಾಮ್ರ, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳ ಆಗರ. ಇದು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ಇದರ ಐದು ಪ್ರಮುಖ ಪ್ರಯೋಜನಗಳೆಂದರೆ... 

3/8
ತೂಕ ಇಳಿಕೆ
ತೂಕ ಇಳಿಕೆ

ಅಲೋವೆರಾದಲ್ಲಿ ವಿಟಮಿನ್ ಎ, ಬಿ, ಸಿ ಸಮೃದ್ಧವಾಗಿದ್ದು ಇದು ದೇಹದ ಚಯಾಪಚಯವನ್ನು ಹೆಚ್ಚಿಸಿ ತೂಕ ಇಳಿಕೆಗೆ ಸಹಕಾರಿ ಆಗಿದೆ.   

4/8
ಜೀರ್ಣಕ್ರಿಯೆ
ಜೀರ್ಣಕ್ರಿಯೆ

ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಅಲೋವೆರಾ ರಸ ಅತ್ಯುತ್ತಮ ಮದ್ದು. 

5/8
ಹೊಟ್ಟೆಯ ಹುಣ್ಣು
ಹೊಟ್ಟೆಯ ಹುಣ್ಣು

ನಿಯಮಿತವಾಗಿ ಅಲೋವೆರಾ ರಸವನ್ನು ಸೇವಿಸುವುದರಿಂದ ಇದು ಹೊಟ್ಟೆಯ ಹುಣ್ಣನ್ನು ಸರಿಪಡಿಸಲು ಮತ್ತು ಕರುಳಿನ ಅಸ್ವಸ್ಥತೆಗಳನ್ನು ನಿವಾರಿಸಲು ಸಹಕಾರಿ ಎಂದು ಸಾಬೀತುಪಡಿಸುತ್ತದೆ. 

6/8
ಪ್ರತಿರಕ್ಷಣಾ ವ್ಯವಸ್ಥೆ
ಪ್ರತಿರಕ್ಷಣಾ ವ್ಯವಸ್ಥೆ

ಅಲೋವೆರಾ ಹಲವಾರು ಪಾಲಿಸ್ಯಾಕರೈಡ್‌ಗಳನ್ನು ಹೊಂದಿದ್ದು ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಳಪಡಿಸುವಲ್ಲಿ ಪರಿಣಾಮಕಾರಿ ಮದ್ದು. 

7/8
ಸುಟ್ಟ ಗಾಯ
ಸುಟ್ಟ ಗಾಯ

ಅಲೋವೆರಾ ಜೆಲ್ ಅನ್ನು ಸುಟ್ಟಗಾಯದ ಮೇಲೆ ಅನ್ವಯಿಸುವುದರಿಂದ ಇದು ಚರ್ಮದ ಉರಿಯನ್ನು ಶಮನಗೊಳಿಸುತ್ತದೆ. ಜೊತೆಗೆ ಗಾಯ ವೇಗವಾಗಿ ಗುಣಮುಖವಾಗಲು ಪ್ರಯೋಜನಕಾರಿ ಆಗಿದೆ. 

8/8
ಸೂಚನೆ
ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 





Read More