PHOTOS

Curry Leaves: ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆ ಜಗಿದು ತಿನ್ನಿ, ಬಿಪಿ, ಶುಗರ್ ಕಂಟ್ರೋಲ್ ಮಾಡಿ ಆರೋಗ್ಯವನ್ನೂ ವೃದ್ಧಿಸುತ್ತೆ!

Curry Leaves: ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕರಿಬೇವಿನ ಸೊಪ್ಪನ್ನು ಖಾಲಿ ಹೊಟ್ಟೆಯಲ್ಲಿ ತಿನ್ನ...

Advertisement
1/10
ಕರಿಬೇವಿನ ಎಲೆಗಳು
ಕರಿಬೇವಿನ ಎಲೆಗಳು

ಆಹಾರದ ಸ್ವಾದವನ್ನು ಇಮ್ಮಡಿಗೊಳಿಸುವ ಕರಿಬೇವಿನ ಸೊಪ್ಪು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ಆಗಿದೆ. ನಿತ್ಯ ನಾಲ್ಕೇ ನಾಲ್ಕು ಕರಿಬೇವಿನ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಜಗಿದು ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. 

2/10
ಪೋಷಕಾಂಶಗಳ ಗಣಿ
ಪೋಷಕಾಂಶಗಳ ಗಣಿ

ಕರಿಬೇವಿನ ಎಲೆಗಳಲ್ಲಿ ಜೀರ್ಣಕಾರಿ ಕಿಣ್ವಗಳು, ಫೈಬರ್, ಉತ್ಕರ್ಷಣ ನಿರೋಧಕಗಳು, ಆ್ಯಂಟಿಆಕ್ಸಿಡೆಂಟ್, ಆಂಟಿಡಯಾಬಿಟಿಕ್, ವಿಟಮಿನ್ ಎ, ಬಿ, ಸಿ, ಇ ಜೊತೆಗೆ ಕ್ಯಾಲ್ಸಿಯಮ್ ರಂಜಕಗಳಿಂದ ಹೇರಳವಾಗಿದೆ. 

3/10
ಹೈ ಬಿಪಿಗೆ ಮದ್ದು
ಹೈ ಬಿಪಿಗೆ ಮದ್ದು

ಕರಿಬೇವಿನ ಎಲೆಗಳಲ್ಲಿ ಪೊಟ್ಯಾಶಿಯಮ್ ಹೆರಳವಾಗಿರುವುದರಿಂದ ಇದನ್ನು ನಿತ್ಯ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಅಧಿಕ ರಕ್ತದೊತ್ತಡವನ್ನು ಸುಲಭವಾಗಿ ನಿವಾರಿಸಬಹುದು. 

4/10
ಮಧುಮೇಹ ನಿಯಂತ್ರಣ
 ಮಧುಮೇಹ ನಿಯಂತ್ರಣ

ಕರಿಬೇವಿನ ಎಲೆಗಳನ್ನು ನಿತ್ಯ ಖಾಲಿ ಹೊಟ್ಟೆಯಲ್ಲಿ ಚೆನ್ನಾಗಿ ಜಗಿದು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಅಂಶ ಎಂದಿಗೂ ಹೆಚ್ಚಾಗುವುದಿಲ್ಲ. 

5/10
ಹೃದಯದ ಆರೋಗ್ಯ
ಹೃದಯದ ಆರೋಗ್ಯ

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ನಾಲ್ಕು ಕರಿಬೇವಿನ ಎಲೆಗಳ ಸೇವನೆಯು ಕೊಲೆಸ್ಟ್ರಾಲ್ ನಿಯಂತ್ರಿಸಿ ಹೃದಯದ ಆರೋಗ್ಯಕ್ಕೆ ಉತ್ತಮ ಕೊಡುಗೆ ನೀಡುತ್ತದೆ. 

6/10
ಚರ್ಮದ ಆರೋಗ್ಯ
 ಚರ್ಮದ ಆರೋಗ್ಯ

ಮೊದಲೇ ತಿಳಿಸಿದಂತೆ ಕರಿಬೇವಿನ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಆಂಟಿಫಂಗಲ್, ಆಂಟಿವೈರಲ್ ಗುಣಗಳು ಹೆರಳವಾಗಿದ್ದು ಇದು ಚರ್ಮದ ಹಲವು ಸಮಸ್ಯೆಗಳನ್ನು ನಿವಾರಿಸಿ, ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. 

7/10
ರಕ್ತಹೀನತೆಗೆ ಪರಿಹಾರ
ರಕ್ತಹೀನತೆಗೆ ಪರಿಹಾರ

ಕರಿಬೇವಿನ ಎಲೆಗಳಲ್ಲಿ ಕಬ್ಬಿಣಾಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ನಿತ್ಯ ಖಾಲಿ ಹೊಟ್ಟೆಯಲ್ಲಿ ಇದರ ಸೇವನೆಯು ರಕ್ತಹೀನತೆ ಸಮಸ್ಯೆಗೆ ರಾಮಬಾಣವಿದ್ದಂತೆ ಎನ್ನಲಾಗುತ್ತದೆ. 

8/10
ತೂಕ ಇಳಿಕೆ
ತೂಕ ಇಳಿಕೆ

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ತಿನ್ನುವುದು ತೂಕ ಇಳಿಕೆಗೆ ತುಂಬಾ ಪ್ರಯೋಜನಕಾರಿ ಆಗಿದೆ. 

9/10
ಕೂದಲು ಹಾಗೂ ಕಣ್ಣಿನ ರಕ್ಷಣೆ
ಕೂದಲು ಹಾಗೂ ಕಣ್ಣಿನ ರಕ್ಷಣೆ

ನಿತ್ಯ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೂದಲುದುರುವಿಕೆಯನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ದೃಷ್ಟಿ ಸಮಸ್ಯೆಗಳನ್ನು ನಿವಾರಿಸುತ್ತದೆ. 

10/10
ಸೂಚನೆ
ಸೂಚನೆ

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More