PHOTOS

ಕಿತ್ತಳೆ, ಕ್ಯಾರೆಟ್ ಅಷ್ಟೇ ಅಲ್ಲ, ಈ ಹಣ್ಣು-ತರಕಾರಿಗಳಿಂದಲೂ ಸುಧಾರಿಸುತ್ತೆ ಕಣ್ಣಿನ ದೃಷ್ಟಿ..!

Fruits and Vegetables: ಹಣ್ಣು-ತರಕಾರಿಗಳು ಸರ್ವತೋಮುಖ ಆರೋಗ್ಯಕ್ಕೆ ಉತ್ತಮ ಕೊಡುಗೆ ನೀಡುತ್ತವೆ. 

...
Advertisement
1/10
ಕಣ್ಣಿನ ಸಮಸ್ಯೆಗಳು
ಕಣ್ಣಿನ ಸಮಸ್ಯೆಗಳು

ಬದಲಾದ ಜೀವನಶೈಲಿಯಲ್ಲಿ ಗ್ಯಾಜೆಟ್ ಗಳ ಬಳಕೆ ಹೆಚ್ಚಾಗಿದ್ದು ಇದು ಕಣ್ಣಿನ ಆರೋಗ್ಯದ ಮೇಲೆ ನೇರ ಪರಿಣಾಮ ಉಂಟು ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದೃಷ್ಣಿ ಸಮಸ್ಯೆಗಳನ್ನು ನಿವಾರಿಸಲು ಕೆಲವು ಹಣ್ಣು ತರಕಾರಿಗಳು ನಿಮಗೆ ತುಂಬಾ ಪ್ರಯೋಜನಕಾರಿ ಆಗಿವೆ. 

2/10
ಕ್ಯಾರೆಟ್
ಕ್ಯಾರೆಟ್

ಬೀಟಾ-ಕ್ಯಾರೋಟಿನ್‌ನಲ್ಲಿ ಹೇರಳವಾಗಿರುವ ಕ್ಯಾರೆಟ್ ಸೇವನೆಯು ದೃಷ್ಟಿ ದೋಷ ನಿವಾರಿಸುವುದರ ಜೊತೆಗೆ ರೆಟಿನಾದ ಆರೋಗ್ಯಕ್ಕೂ ಲಾಭದಾಯಕವಾಗಿದೆ. 

3/10
ಸಿಹಿ ಗೆಣಸು
ಸಿಹಿ ಗೆಣಸು

ಸಿಹಿ ಗೆಣಸು ಕೂಡ ಬೀಟಾ-ಕ್ಯಾರೋಟಿನ್‌ನ ಮತ್ತೊಂದು ಅತ್ಯುತ್ತಮ ಮೂಲ. ದೈನಂದಿನ ಆಹಾರದಲ್ಲಿ ಸಿಹಿಗೆಣಸು ಸೇವನೆಯು ಕಣ್ಣಿನಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ. 

4/10
ಪಾಲಕ್
ಪಾಲಕ್

ಪಾಲಕ್ ಸೊಪ್ಪಿನಲ್ಲಿ ಕಂಡು ಬರುವ ಉತ್ಕರ್ಷಣ ನಿರೋಧಕಗಳು ಕಣ್ಣಿನ ರೆಟೀನಾವನ್ನು ಹಾನಿಗಳಿಂದ ರಕ್ಷಿಸುತ್ತದೆ. 

5/10
ಟೊಮಾಟೊ
ಟೊಮಾಟೊ

ದೈನಂದಿನ ಆಹಾರದ ಪ್ರಮುಖ ಭಾಗವಾಗಿರುವ ಟೊಮಾಟೊಗಳಲ್ಲಿ ಲೈಕೋಪಿನ್ ಎಂಬ ಅಂಶವಿದ್ದು, ಇದು ಯುವಿ ಹಾನಿಯಿಂದ ಕಣ್ಣುಗಳನ್ನು ರಕ್ಷಿಸುತ್ತದೆ. 

6/10
ಬಾದಾಮಿ
ಬಾದಾಮಿ

ವಿಟಮಿನ್ ಇ ಸಮೃದ್ಧವಾಗಿರುವ ಬಾದಾಮಿಯ ನಿಯಮಿತ ಸೇವನೆಯು ವಯೋಸಹಜವಾದ ಕಣ್ಣುಗಳ ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತದೆ. 

7/10
ನಿಂಬೆ ಹಣ್ಣು
ನಿಂಬೆ ಹಣ್ಣು

ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ಇದರ ಬಳಕೆಯಿಂದ ಕಣ್ಣಿನಲ್ಲಿ ಪೊರೆ ಬೆಳವಣಿಗೆಯನ್ನು ತಡೆಯುತ್ತದೆ. 

8/10
ಕಿತ್ತಳೆ
ಕಿತ್ತಳೆ

ಕಿತ್ತಳೆ ಹಣ್ಣಿನ ಸೇವನೆಯು ಕಣ್ಣುಗಳಲ್ಲಿನ ರಕ್ತನಾಳಗಳ ಆರೋಗ್ಯವನ್ನು ಬೆಂಬಲಿಸುತ್ತದೆ. ಇದು ಒಟ್ಟಾರೆ ಕಣ್ಣಿನ ಆರೋಗ್ಯಕ್ಕೆ ಉತ್ತಮ ಔಷಧವಾಗಿದೆ. 

9/10
ಬೆರ್ರಿ ಹಣ್ಣುಗಳು
ಬೆರ್ರಿ ಹಣ್ಣುಗಳು

ವಿಟಮಿನ್ ಸಿ, ವಿಟಮಿನ್ ಇ, ಉತ್ಕರ್ಷಣ ನಿರೋಧಕಗಳಲ್ಲಿ ಹೆರಳವಾಗಿರುವ ಬೆರ್ರಿಹಣ್ಣುಗಳ ದೈನಂದಿನ ಬಳಕೆಯಿಂದ ದೃಷ್ಟಿ ದೋಷ ನಿವಾರಿಸಲು, ಅತ್ಯುತ್ತಮ ದೃಷ್ಟಿ ಕಾಪಾಡಿಕೊಳ್ಳಲು ಸಹಾಯಕವಾಗಿದೆ. 

10/10
ಕಣ್ಣಿನ ಆರೋಗ್ಯಕ್ಕೆ ಆಹಾರಗಳು
ಕಣ್ಣಿನ ಆರೋಗ್ಯಕ್ಕೆ ಆಹಾರಗಳು

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ. 





Read More