PHOTOS

ಎಂತೆಂಥಾ ದಿಗ್ಗಜರೇ ಪ್ರಯತ್ನಪಟ್ಟರೂ... ಇದುವರೆಗೆ ವಿರಾಟ್ ಕೊಹ್ಲಿಯ ಈ 5 ದಾಖಲೆಗಳನ್ನು ಯಾರಿಂದಲೂ ಟಚ್‌ ಮಾಡೋದಕ್ಕೂ ಸಾಧ್ಯವಾಗಿಲ್ಲ!

Virat Kohli 5 Unbreakable World Records: ವಿರಾಟ್ ಕೊಹ್ಲಿ ತಮ್ಮ ಸುಪ್ರಸಿದ್ಧ ವೃತ್ತಿಜೀವನದಲ್ಲಿ ಮತ್ತೊಂದು ಗಮನಾರ್ಹ ಸಾಧನೆಯನ್ನು ಮಾಡ...

Advertisement
1/8
ವಿರಾಟ್ ಕೊಹ್ಲಿ ದಾಖಲೆ
ವಿರಾಟ್ ಕೊಹ್ಲಿ ದಾಖಲೆ

ವಿರಾಟ್ ಕೊಹ್ಲಿ ತಮ್ಮ ಸುಪ್ರಸಿದ್ಧ ವೃತ್ತಿಜೀವನದಲ್ಲಿ ಮತ್ತೊಂದು ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ 16 ವರ್ಷಗಳಿಗಿಂತ ಹೆಚ್ಚು ಕಾಲ ಆಡಿದ ಆಧುನಿಕ ಯುಗದ ಪ್ರಮುಖ ಬ್ಯಾಟ್ಸ್‌ಮನ್‌ʼಗಳಲ್ಲಿ ಒಬ್ಬರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

2/8
ವಿರಾಟ್ ಕೊಹ್ಲಿ ದಾಖಲೆ
ವಿರಾಟ್ ಕೊಹ್ಲಿ ದಾಖಲೆ

2008ರಲ್ಲಿ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ʼಗೆ ಪಾದಾರ್ಪಣೆ ಮಾಡಿದ್ದರು. 113 ಟೆಸ್ಟ್ ಪಂದ್ಯಗಳಲ್ಲಿ 49.1 ಸರಾಸರಿಯಲ್ಲಿ 8848 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ 29 ಶತಕ ಮತ್ತು 30 ಅರ್ಧ ಶತಕಗಳು ಬಂದಿವೆ. ಏಕದಿನದಲ್ಲಿ ವಿರಾಟ್ 295 ಪಂದ್ಯಗಳಲ್ಲಿ 58.2 ಸರಾಸರಿಯಲ್ಲಿ 13906 ರನ್ ಗಳಿಸಿದ್ದಾರೆ. ಇಲ್ಲಿ 50 ಶತಕ ಮತ್ತು 72 ಅರ್ಧ ಶತಕಗಳನ್ನು ಗಳಿಸಿದ್ದಾರೆ. 125 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೊಹ್ಲಿ 48.7ರ ಸರಾಸರಿಯಲ್ಲಿ 4188 ರನ್ ಗಳಿಸಿದ್ದಾರೆ.

 

3/8
ವಿರಾಟ್ ಕೊಹ್ಲಿ ದಾಖಲೆ
ವಿರಾಟ್ ಕೊಹ್ಲಿ ದಾಖಲೆ

ಎಲ್ಲಾ ಮೂರು ODI ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು T20 ವಿಶ್ವಕಪ್ ಗೆದ್ದ ಕೆಲವೇ ಭಾರತೀಯ ಆಟಗಾರರಲ್ಲಿ ವಿರಾಟ್‌ ಕೂಡ ಒಬ್ಬರು.ಇನ್ನು ಇವರ ವೃತ್ತಿಜೀವನವು ಅನೇಕ ದಾಖಲೆಗಳಿಂದ ಅಲಂಕರಿಸಲ್ಪಟ್ಟಿದ್ದು, ಅದರಲ್ಲಿ ಕೆಲವು ದಾಖಲೆಗಳನ್ನು ಮುರಿಯುವುದೇ ಅಸಾಧ್ಯ ಎನ್ನುವಂತಿದೆ.

 

4/8
ODI ನಲ್ಲಿ ಅತಿ ಹೆಚ್ಚು ಶತಕಗಳು
ODI ನಲ್ಲಿ ಅತಿ ಹೆಚ್ಚು ಶತಕಗಳು

ODI ನಲ್ಲಿ ಅತಿ ಹೆಚ್ಚು ಶತಕಗಳು:  35ರ ಹರೆಯದಲ್ಲಿ ಕೊಹ್ಲಿ ಏಕದಿನದಲ್ಲಿ 50 ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕಳೆದ ವರ್ಷ ವಿಶ್ವಕಪ್‌ʼನಲ್ಲಿ ಸಾಧಿಸಿದ ಈ ಸಾಧನೆಯೊಂದಿಗೆ, ಅವರು ತಮ್ಮ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಯನ್ನು ಮುರಿದಿದ್ದಾರೆ.

 

5/8
ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್
ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್: 2023ರ ಏಕದಿನ ವಿಶ್ವಕಪ್‌ʼನಲ್ಲಿ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಒಂದೇ ವಿಶ್ವಕಪ್‌ʼನಲ್ಲಿ ಅತಿ ಹೆಚ್ಚು ರನ್ ಗಳಿಸಿ ಹೊಸ ದಾಖಲೆ ನಿರ್ಮಿಸಿದ್ದರು. 11 ಪಂದ್ಯಗಳಲ್ಲಿ ಆಕರ್ಷಕ 765 ರನ್‌ʼಗಳೊಂದಿಗೆ, 2003 ರ ವಿಶ್ವಕಪ್‌ʼನಿಂದ ಸಚಿನ್ ತೆಂಡೂಲ್ಕರ್ ಅವರ 673 ರನ್‌ʼಗಳ ದಾಖಲೆಯನ್ನು ಹಿಂದಿಕ್ಕಿದರು. ಕೊಹ್ಲಿ ಪ್ರಯತ್ನದಿಂದ ಭಾರತವನ್ನು ಫೈನಲ್ʼಗೆ ಕೊಂಡೊಯ್ದರೂ ತಂಡಕ್ಕೆ ಗೆಲುವು ತಪ್ಪಿತು.

 

6/8
ಐಪಿಎಲ್‌ʼನಲ್ಲಿ ಪ್ರಾಬಲ್ಯ
ಐಪಿಎಲ್‌ʼನಲ್ಲಿ ಪ್ರಾಬಲ್ಯ

ಐಪಿಎಲ್‌ʼನಲ್ಲಿ ಪ್ರಾಬಲ್ಯ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕೊಹ್ಲಿಯ 2016 ರ ಸೀಸನ್ ಅಸಾಮಾನ್ಯವಾದುದೇನಲ್ಲ. ಅಂದು 973 ರನ್ ಗಳಿಸಿದ್ದರು. ಇದು ಒಂದೇ ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯಾಗಿದೆ. 2023 ರಲ್ಲಿ 890 ರನ್‌ʼಗಳೊಂದಿಗೆ ಈ ದಾಖಲೆಯನ್ನು ಮುರಿಯಲು  ಶುಭಮನ್ ಗಿಲ್ ಪ್ರಯತ್ನಿಸಿದರೂ ಕೂಡ ಸಾಧ್ಯವಾಗಲಿಲ್ಲ.

 

7/8
ವಿರಾಟ್ ಚೇಸ್ ಮಾಸ್ಟರ್
ವಿರಾಟ್ ಚೇಸ್ ಮಾಸ್ಟರ್

ವಿರಾಟ್ ಚೇಸ್ ಮಾಸ್ಟರ್: ರನ್ ಚೇಸ್ʼನಲ್ಲಿ ಬ್ಯಾಟಿಂಗ್ ಮಾಡುವಾಗ ಏಕದಿನದಲ್ಲಿ ಕೊಹ್ಲಿ ಪ್ರಾಬಲ್ಯ ಹೊಂದಿದ್ದಾರೆ. ಈ ಸಂದರ್ಭದಲ್ಲಿ 27 ಶತಕಗಳನ್ನು ಗಳಿಸಿದ್ದಾರೆ. ಇದು ಎರಡನೇ ಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್‌ʼಗಿಂತ ಹೆಚ್ಚು. ತೆಂಡೂಲ್ಕರ್ 17 ಶತಕ ಗಳಿಸಿದ್ದಾರೆ.

 

8/8
ಅತಿ ಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿ
ಅತಿ ಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿ

ಅತಿ ಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿ: ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಅತಿ ಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರ ವಿರಾಟ್. ಇದರಲ್ಲಿ ಏಕದಿನದಲ್ಲಿ 11, ಟೆಸ್ಟ್‌‌ʼನಲ್ಲಿ 3 ಮತ್ತು ಟಿ20ಯಲ್ಲಿ 7 ಪ್ರಶಸ್ತಿಗಳು ಸೇರಿವೆ. ಈ ವಿಷಯದಲ್ಲಿ ಸಚಿನ್ ತೆಂಡೂಲ್ಕರ್ (20) ಎರಡನೇ ಸ್ಥಾನದಲ್ಲಿದ್ದಾರೆ.

 





Read More