PHOTOS

ಸರ್ಕಾರಿ ನೌಕರರಿಗೆ ಶಾಕ್ ಮೇಲೆ ಶಾಕ್!ಡಿಎ ಬಳಿಕ ಪಿಂಚಣಿ ವಿಚಾರದಲ್ಲೂ ಈ ನಿಲುವು ತೆಗೆದುಕೊಂಡ ಸರ್ಕಾರ!ಎಲ್ಲಾ ದಿಕ್ಕಿನಿಂದಲೂ ನಷ್ಟವೇ

ಇದೀಗ ಪಿಂಚಣಿ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ನಿಲುವನ್ನು ಪ್ರಕಟಿಸಿದೆ. ಹೀಗೆ ಸರ್ಕಾರಿ ನೌಕರರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. 

...
Advertisement
1/6
ನೌಕರರ ಬೇಡಿಕೆ
ನೌಕರರ ಬೇಡಿಕೆ

ಈ ನಡುವೆ, 'ಹಲವು ಎನ್‌ಪಿಎಸ್ ಉದ್ಯೋಗಿಗಳು ಇನ್ನೂ ಈ ಪ್ರಯೋಜನದಿಂದ ವಂಚಿತರಾಗಿದ್ದಾರೆ. ಹಾಗಾಗಿ ಅರ್ಹ ಉದ್ಯೋಗಿಗಳಿಗೆ ಪ್ರಯೋಜನಗಳನ್ನು ಒದಗಿಸಲು ದಿನಾಂಕವನ್ನು ವಿಸ್ತರಿಸಬೇಕೆಂದು ಅಖಿಲ ಭಾರತ ಎನ್‌ಪಿಎಸ್ ಎಂಪ್ಲಾಯೀಸ್ ಫೆಡರೇಶನ್‌ನ ರಾಷ್ಟ್ರೀಯ ಅಧ್ಯಕ್ಷ ಮಂಜಿತ್ ಸಿಂಗ್ ಪಟೇಲ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.  

2/6
ಎನ್‌ಪಿಎಸ್ ಕಡ್ಡಾಯ
ಎನ್‌ಪಿಎಸ್ ಕಡ್ಡಾಯ

ಕೇಂದ್ರ ಸರ್ಕಾರವು 2003ರಲ್ಲಿ ನೌಕರರಿಗಾಗಿ ಎನ್‌ಪಿಎಸ್ ಆರಂಭಿಸಿತ್ತು. ಕೇಂದ್ರದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಇತ್ತೀಚೆಗೆ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ, ಜನವರಿ 1, 2004 ರಿಂದ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ (ಸಶಸ್ತ್ರ ಪಡೆಗಳನ್ನು ಹೊರತುಪಡಿಸಿ) ಎಲ್ಲಾ ಹೊಸ ನೇಮಕಾತಿಗಳಿಗೆ ಎನ್‌ಪಿಎಸ್ ಕಡ್ಡಾಯ ಎಂದು ಹೇಳಿದ್ದಾರೆ.   

3/6
ವಿಸ್ತರಣೆ ಇಲ್ಲ
ವಿಸ್ತರಣೆ ಇಲ್ಲ

ಈಗ ಹಳೆಯ ಪಿಂಚಣಿ ಯೋಜನೆ (OPS) ಕುರಿತು ಕೇಂದ್ರ ಸರ್ಕಾರದಿಂದ ಹೊಸ ಅಪ್ಡೇಟ್ ಹೊರಬಿದ್ದಿದೆ.ನೌಕರರು ಹಳೆಯ ಪಿಂಚಣಿ ಯೋಜನೆಗೆ ಬದಲಾಯಿಸುವ ಅವಧಿಯನ್ನು ವಿಸ್ತರಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.   

4/6
ಹಳೆ ಪಿಂಚಣಿ ಯೋಜನೆ
ಹಳೆ ಪಿಂಚಣಿ ಯೋಜನೆ

ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರು ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಬಹುದಿನಗಳಿಂದ ಒತ್ತಾಯಿಸುತ್ತಿದ್ದಾರೆ.ನೌಕರರ ಬೇಡಿಕೆಗಳನ್ನು ಒಪ್ಪಿಕೊಂಡು ಕೆಲವು ರಾಜ್ಯ ಸರ್ಕಾರಗಳು ಹಳೆಯ ಪಿಂಚಣಿಯನ್ನು ಮರುಸ್ಥಾಪಿಸಿವೆ. 

5/6
ಪಿಂಚಣಿ ಬಗ್ಗೆ ನಿಲುವು
ಪಿಂಚಣಿ ಬಗ್ಗೆ ನಿಲುವು

ಇದೀಗ ಪಿಂಚಣಿ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ನಿಲುವನ್ನು ಪ್ರಕಟಿಸಿದೆ. ಹೀಗೆ ಸರ್ಕಾರಿ ನೌಕರರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ.

6/6
ಡಿಎ ಅರಿಯರ್ಸ್ ಇಲ್ಲ
ಡಿಎ ಅರಿಯರ್ಸ್ ಇಲ್ಲ

ಮೊನ್ನೆಯಷ್ಟೇ ಕೇಂದ್ರ ಸರ್ಕಾರ, ಸರ್ಕಾರಿ ನೌಕರರ 18 ತಿಂಗಳ ಬಾಕಿ ತುಟ್ಟಿಭತ್ಯೆ ಬಗ್ಗೆ ನಿರ್ಧಾರ ಪ್ರಕಟಿಸಿದೆ. ಬಾಕಿ ಡಿಎ ಬಿಡುಗಡೆ ಮಾಡುವುದು ಸಾಧ್ಯವಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದೆ.   





Read More