PHOTOS

New Year Gift: ಹೊಸ ವರ್ಷದ ಗಿಫ್ಟ್ ನೀಡುವಾಗ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ

New Year Gift: ಹೊಸ ವರ್ಷದಲ್ಲಿ ಉಡುಗೊರೆ ಕೊಡುವುದು, ತೆಗೆದುಕೊಳ್ಳುವುದು ಸರ್ವೇ ಸಾಮಾನ್ಯ. ಇದು ಆ ಕ್ಷಣಕ್ಕೆ ಸಂತೋಷವನ್ನು ತರುವುದು ಮಾತ್ರವಲ್ಲ, ನಮ್ಮ ಅದೃಷ್ಟ...

Advertisement
1/6
ಹೊಸ ವರ್ಷ 2024
ಹೊಸ ವರ್ಷ 2024

ಹೊಸ ವರ್ಷವನ್ನು ವಿಜೃಂಭಣೆಯಿಂದ ಬರಮಾಡಿಕೊಳ್ಳಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿಸಿದಿವೆ. ಹೊಸ ವರ್ಷದಲ್ಲಿ ಸ್ನೇಹಿತರು, ಸಂಬಂಧಿಕರು ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಆದರೆ, ಒಬ್ಬರಿಗೊಬ್ಬರು ಗಿಫ್ಟ್ ನೀಡುವಾಗ ಅಥವಾ ಸ್ವೀಕರಿಸುವಾಗ ಕೆಲವು ವಿಚಾರಗಳ ಬಗ್ಗೆ ಎಚ್ಚರ ವಹಿಸುವುದು ತುಂಬಾ ಅಗತ್ಯ. ಇಲ್ಲದಿದ್ದರೆ, ನೀವೇ ನಿಮ್ಮ ಕೈಯಾರೆ ದುರಾದೃಷ್ಟವನ್ನು ಆಹ್ವಾನಿಸಿದಂತೆ ಎಂದು ನಿಮಗೆ ತಿಳಿದಿದೆಯೇ? 

2/6
ನ್ಯೂ ಇಯರ್ ಗಿಫ್ಟ್
 ನ್ಯೂ ಇಯರ್ ಗಿಫ್ಟ್

ನ್ಯೂ ಇಯರ್ ಗಿಫ್ಟ್: ಹೊಸ ವರ್ಷ ಸಂತೋಷವಾಗಿ ಆರಂಭಗೊಂಡರೆ ಇಡೀ ವರ್ಷ ನಾವು ಸಂತಸದಿಂದ ಇರುತ್ತೇವೆ. ವರ್ಷದ ಮೊದಲ ದಿನ ಶುಭವಾಗಿದ್ದರೆ ವರ್ಷವಿಡೀ ಒಳ್ಳೆಯದೇ ಆಗುತ್ತದೆ ಎಂಬುದು ನಂಬಿಕೆ. ಇದರ ಒಂದು ಭಾಗವೇ ಪರಸ್ಪರ ಗಿಫ್ಟ್ ವಿನಿಮಯ. ಆದರೆ, ಹೊಸ ವರ್ಷದಲ್ಲಿ ಉಡುಗೊರೆ ನೀಡುವಾಗ ಕೆಲವು ವಿಷಯಗಳ ಬಗ್ಗೆ ವಿಶೇಷ ಗಮನ ಅತ್ಯಗತ್ಯ. 

3/6
ಚರ್ಮೋತ್ಪನ್ನಗಳು
ಚರ್ಮೋತ್ಪನ್ನಗಳು

ಚರ್ಮೋತ್ಪನ್ನಗಳು:  ಈ ವರ್ಷ ಹೊಸ ವರ್ಷ ಸೋಮವಾರದಂದು ಆರಂಭಗೊಳ್ಳಲಿದೆ. ಸೋಮವಾರ ಶಿವನಿಗೆ ಮೀಸಲಾದ ದಿನ. ಈ ದಿನ ಚರ್ಮದ ವಸ್ತುಗಳನ್ನು ಯಾರಿಗೂ ಉಡುಗೊರೆಯಾಗಿ ನೀಡಬೇಡಿ. ಇದರಿಂದ ಆರ್ಥಿಕ ಸಮಸ್ಯೆಗಳು ಹೆಚ್ಚಾಗಬಹುದು. 

4/6
ಬಿಳಿ ಬಣ್ಣದ ವಸ್ತುಗಳು
ಬಿಳಿ ಬಣ್ಣದ ವಸ್ತುಗಳು

ಬಿಳಿ ಬಣ್ಣದ ವಸ್ತುಗಳು:  ಮೊದಲೇ ತಿಳಿಸಿದಂತೆ ಹೊಸ ವರ್ಷ ಸೋಮವಾರದ ದಿನ ಆರಂಭವಾಗಲಿದೆ.  ಈ ದಿನ ಹಾಲು ಅಥವಾ ಹಾಲಿನಿಂದ ತಯಾರಿಸಿದ ಸಿಹಿ ಪದಾರ್ಥಗಳನ್ನು ಯಾರಿಗೂ ನೀಡಬೇಡಿ. ಮಾತ್ರವಲ್ಲ, ಬಿಳಿ ಬಣ್ಣದ ಪದಾರ್ಥಗಳನ್ನು ಯಾರಿಗೂ ಉಡುಗೊರೆಯಾಗಿ ನೀಡಬೇಡಿ. ಇದರಿಂದ ಚಂದ್ರ ದೋಷ ಉಂಟಾಗಬಹುದು ಎಂದು ಹೇಳಲಾಗುತ್ತದೆ. 

5/6
ಚೂಪಾದ ವಸ್ತುಗಳು
ಚೂಪಾದ ವಸ್ತುಗಳು

ಚೂಪಾದ ವಸ್ತುಗಳು:  ಹೊಸ ವರ್ಷದಲ್ಲಿ ಉಡುಗೊರೆ ನೀಡುವಾಗ ಯಾವುದೇ ರೀತಿಯ ಹರಿತವಾದ ವಸ್ತುಗಳನ್ನು ಯಾರಿಗೂ ನೀಡಬೇಡಿ. ಇದು ಸಂಬಂಧಗಳ ನಡುವೆ ಸಮಸ್ಯೆಯನ್ನು ಹೆಚ್ಚಿಸಬಹುದು. 

6/6
ಹೊಸ ವರ್ಷದಲ್ಲಿ ಯಾವ ರೀತಿಯ ಗಿಫ್ಟ್ ನೀಡಿದರೆ ಒಳ್ಳೆಯದು?
ಹೊಸ ವರ್ಷದಲ್ಲಿ ಯಾವ ರೀತಿಯ ಗಿಫ್ಟ್ ನೀಡಿದರೆ ಒಳ್ಳೆಯದು?

ಹೊಸ ವರ್ಷದಲ್ಲಿ ಯಾವ ರೀತಿಯ ಗಿಫ್ಟ್ ನೀಡಿದರೆ ಒಳ್ಳೆಯದು?  ಹೊಸ ವರ್ಷದಲ್ಲಿ ಸ್ಮೈಲಿಂಗ್ ಬುದ್ದ, ಬೆಳ್ಳಿ ಆನೆ, ಆಮೇಯ ಪ್ರತಿಮೆ, ಯಾವುದೇ ಪುಸ್ತಕಗಳು, ವಿಂಡ್‌ಚೈಮ್‌ನಂತಹ ಅದೃಷ್ಟವನ್ನು ಪ್ರತಿನಿಧಿಸುವ ವಸ್ತುಗಳನ್ನು ಗಿಫ್ಟ್ ಆಗಿ ನೀಡಬಹುದು. ಇದರಿಂದ ಸಂಪತ್ತಿನ ದೇವತೆ ಲಕ್ಷ್ಮಿ ದೇವಿ ಸಂತೋಷಗೊಳ್ಳುವುದರ ಜೊತೆಗೆ ಅಂತಹ ಮನೆಯಲ್ಲಿ ವರ್ಷವಿಡೀ ಸುಖ, ಸಂತೋಷ, ಸಕಾರಾತ್ಮಕತೆ ತುಂಬಿರುತ್ತದೆ ಎಂದು ನಂಬಿಕೆಯಿದೆ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More