PHOTOS

ಹೊಸ ವರ್ಷ ಆರಂಭವಾಗುತ್ತಿದ್ದಂತೆಯೇ ಈ ರಾಶಿಯವರ ಜೀವನದಲ್ಲಿಯೂ ಹರಿದು ಬರುವುದು ಸುಖ ಸಂತೋಷ

, ಈ ರಾಶಿಯವರಿಗೆ ಅಭೂತ ಪೂರ್ವ ಯಶಸ್ಸು ಸಿಗಲಿದೆ. ಒಂದು ರೀತಿಯಲ್ಲಿ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ ...

Advertisement
1/5
ತುಲಾ ರಾಶಿ
ತುಲಾ ರಾಶಿ

ತುಲಾ ರಾಶಿ :ಹೊಸ ವರ್ಷ 2023 ರಲ್ಲಿ, ಈ ರಾಶಿಯ ಜನರು ತಮ್ಮ ವೃತ್ತಿಜೀವನದಲ್ಲಿ ಹೊಸ ಆಯಾಮ ತಲುಪಲಿದ್ದಾರೆ. ವರ್ಷದ ಆರಂಭದಲ್ಲಿಯೇ ವೃತ್ತಿ ಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಂಡುಬರಲಿದೆ. ಉದ್ಯೋಗ ಹುಡುಕುತ್ತಿರುವವರಿಗೆ ಈ ಸಂದರ್ಭದಲ್ಲಿ ಹೊಸ ಉದ್ಯೋಗ ಸಿಗಲಿದೆ.  ಸರ್ಕಾರಿ ಸೇವೆಯಲ್ಲಿ ಕೆಲಸ ಮಾಡುವವರು ಒಳ್ಳೆಯ ಸ್ಥಳಕ್ಕೆ ವರ್ಗಾವಣೆಯಾಗುವ ಸಾಧ್ಯತೆ ಇದೆ. 

2/5
ಸಿಂಹ ರಾಶಿ
ಸಿಂಹ  ರಾಶಿ

ಸಿಂಹ  ರಾಶಿ  : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ರಾಶಿಯ ಜನರು ವರ್ಷದ ಆರಂಭದಲ್ಲಿಯೇ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ. 2023 ರಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ. ಜನವರಿಯಲ್ಲಿ ಶನಿದೇವನು ಏಳನೇ ಮನೆಗೆ ಬರುವುದರಿಂದ ವೃತ್ತಿಜೀವನದಲ್ಲಿ ಪ್ರಗತಿಯಾಗುವ ಸಾಧ್ಯತೆಯಿದೆ. ಮುಂಬರುವ ಹೊಸ ವರ್ಷವು ನಿಮ್ಮ ವೃತ್ತಿಜೀವನಕ್ಕೆ ಉತ್ತಮವಾಗಿದೆ.

3/5
ಮಿಥುನ ರಾಶಿ
ಮಿಥುನ ರಾಶಿ

ಮಿಥುನ ರಾಶಿ : ಜನವರಿಯ ನಂತರ ಈ ರಾಶಿಯವರಿಗೆ ಒಳ್ಳೆಯ ಫಲಿತಾಂಶ ಸಿಗಲಿದೆ. ಮುಂಬರುವ ವರ್ಷವು ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತರಲಿದೆ. ಬಹಳ ದಿನಗಳಿಂದ ಉದ್ಯೋಗವನ್ನು ಹುಡುಕುತ್ತಿರುವ ಜನರ ನಿರೀಕ್ಷೆ ಈಡೇರಲಿದೆ. ವೃತ್ತಿ ಜೀವನದಲ್ಲಿ ಯಶಸ್ಸು ಸಿಗಲಿದೆ.   

4/5
ವೃಷಭ ರಾಶಿ
ವೃಷಭ ರಾಶಿ

ವೃಷಭ ರಾಶಿ : ಮುಂಬರುವ ವರ್ಷದಲ್ಲಿ, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವುದು ಸಾಧ್ಯವಾಗುತ್ತದೆ. 2022 ರಲ್ಲಿ ಮಾಡಿದ ಶ್ರಮದ ಫಲ 2023 ರಲ್ಲಿ  ಸಿಗಲಿದೆ.   2023 ರಲ್ಲಿ, ವೃತ್ತಿಜೀವನದಲ್ಲಿ ಉತ್ತಮ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. 

5/5
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿ :ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2023 ರ ವರ್ಷವು ಮೇಷ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಈ ವರ್ಷ  ಈ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಪಡೆಯಲಿದ್ದಾರೆ. ವರ್ಷದ ಆರಂಭದಲ್ಲಿಯೇ ವೃತ್ತಿಯಲ್ಲಿ  ಪ್ರಗತಿ ಸಿಗಲಿದೆ. ಉದ್ಯೋಗದಲ್ಲಿ ಎದುರಾಗುತ್ತಿದ್ದ ಸಮಸ್ಯೆಗಳು ದೂರವಾಗುತ್ತವೆ. ಅಷ್ಟೇ ಅಲ್ಲ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಬೆಂಬಲವೂ ದೊರೆಯಲಿದೆ. ಹೊಸ ವರ್ಷದಲ್ಲಿ ಕೆಲಸದ ಕಾರ್ಯಕ್ಷಮತೆಯೂ ಉತ್ತಮವಾಗಿರುತ್ತದೆ. ಬಡ್ತಿಯ ಸಾಧ್ಯತೆಯೂ ಇರಲಿದೆ.

 (Disclaimer: ಈ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.)





Read More