PHOTOS

New SUVs Entering Indian Market: ಭಾರತೀಯ ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸಲು ಬರುತ್ತಿವೆ 5 ಜಬರ್ದಸ್ತ್ SUV, ಬೆಲೆ ಎಷ್ಟು ಗೊತ್ತಾ?

SUVs Entering Indian Market - ಕೊರೊನಾ ಲಾಕ್ ಡೌನ್ (Corona Lockdown) ಬಳಿಕ ಸಮಯ ಕಳೆದಂತೆ ಆಟೋ ಮಾರುಕಟ್ಟೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ...

Advertisement
1/5

1. ಬೊಲೆರೋ ನಿಯೋ ಪ್ಲಸ್ (Bolero Neo Plus) - ಭಾರತೀಯ ರಸ್ತೆಗಳಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಗಳಿಸಿರುವ ಎಸ್ಯುವಿಗಳಲ್ಲಿ ಒಂದಾದ ಮಹೀಂದ್ರಾ ಬೊಲೆರೊ, ಬೊಲೆರೊ ನಿಯೋ ಪ್ಲಸ್ ರೂಪದಲ್ಲಿ ಹೊಸ ಆವೃತ್ತಿಬಿಡುಗಡೆ ಮಾಡುತ್ತಿದೆ. ಇದು 9 ಆಸನಗಳ ಎಸ್ಯುವಿಯಾಗಿದ್ದು, ಇತ್ತೀಚೆಗೆ ಬಿಡುಗಡೆಯಾದ ಬೊಲೆರೊ ನಿಯೋಗಿಂತ ಹೆಚ್ಚು ಬಾಳಿಕೆ ಬರುವಂತೆ ಕಂಗೊಳಿಸುತ್ತಿದೆ.. ಬೊಲೆರೊ ನಿಯೋ ಪ್ಲಸ್‌ನ 2.2-ಲೀಟರ್ ಟರ್ಬೊ ಡೀಸೆಲ್ ಆವೃತ್ತಿಯೊಂದಿಗೆ ಬರುತ್ತಿದ್ದು, ಇದನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

2/5

2. Mahindra XUV 700 - ಎಸ್ಯುವಿಗಳ ವಿಷಯದಲ್ಲಿ, ಮಹೀಂದ್ರಾ ಗ್ರಾಹಕರ ಬೇಡಿಕೆ ಮತ್ತು ನಿರೀಕ್ಷೆಯ ಎಂದಿಗೂ ಹುಸಿಗೊಳಿಸಿಲ್ಲ. ಹೊಸ ಮಹೀಂದ್ರಾ XUV 700 ಅನ್ನು ಆಟೋ ಬೂಸ್ಟರ್ ಹೆಡ್‌ಲ್ಯಾಂಪ್‌ಗಳು, ಪನೋರಮಿಕ್ ಸನ್‌ರೂಫ್, ಸ್ಮಾರ್ಟ್ ಡೋರ್ ಹ್ಯಾಂಡಲ್‌ಗಳು, ಸುರಕ್ಷತಾ ಎಚ್ಚರಿಕೆಗಳು ಸೇರಿದಂತೆ ಹಲವು ಉತ್ತಮ ವೈಶಿಷ್ಟ್ಯಗಳೊಂದಿಗೆ ಲೋಡ್ ಮಾಡಲಾಗುತ್ತಿದೆ. ಆದರೆ ಇದರ ಬಿಡುಗಡೆಯ ಅಧಿಕೃತ ದಿನಾಂಕವನ್ನು ಕಂಪನಿಯು ಇನ್ನೂ ದೃಢಪಡಿಸಿಲ್ಲವಾದರೂ ಕೂಡ. ಎಕ್ಸ್‌ಯುವಿ 700 ಅನ್ನು 2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ನೊಂದಿಗೆ ಹಸ್ತಚಾಲಿತ ಮತ್ತು ಸ್ವಯಂಚಾಲಿತ ಪ್ರಸರಣದೊಂದಿಗೆ ಮಾರುಕಟ್ಟೆಗೆ ಇಳಿಯಲಿದೆ ಎನ್ನಲಾಗಿದೆ.

3/5

3. MG Astor - ಎಂಜಿ ಆಸ್ಟರ್ ಹೊಸ ಮಧ್ಯಮ ಗಾತ್ರದ ಎಸ್ಯುವಿ ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡುತ್ತಿದೆ. ಎಂಜಿ ಆಸ್ಟರ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಮೊದಲ 1.5 ಎಲ್ ಎನ್ಎ ಪೆಟ್ರೋಲ್ ಎಂಜಿನ್, 115 ಪಿಎಸ್ ಪವರ್ ಮತ್ತು 150 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೊಂದು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಗಿದ್ದು ಅದು ಗರಿಷ್ಠ 112 ಪಿಎಸ್ ಮತ್ತು 112 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

4/5

4. VolksWagen-Taigun - ವೋಕ್ಸ್‌ವ್ಯಾಗನ್ ಕೂಡ ಎಸ್‌ಯುವಿ ಟೈಗುನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಿದೆ. ಇದು ಎಸ್ಯುವಿ ಪ್ಲಾಟ್‌ಫಾರ್ಮ್ MQB A0 IN ಅನ್ನು ಆಧರಿಸಿದ್ದು, ಇದನ್ನು ನೀವು ಇತ್ತೀಚೆಗೆ ಬಿಡುಗಡೆಯಾದ ಸ್ಕೋಡಾ ಕುಶಾಕ್ ನಲ್ಲಿಯೂ ಕೂಡ ನೋಡಬಹುದು. ಎರಡೂ ಎಸ್ಯುವಿಗಳು 1 ಲೀಟರ್ ಟಿಎಸ್ಐ ಪೆಟ್ರೋಲ್ ಮತ್ತು 1.5 ಲೀಟರ್ ಟಿಎಸ್ಐ ಪೆಟ್ರೋಲ್ ಆಯ್ಕೆಗಳೊಂದಿಗೆ ಒಂದೇ ಎಂಜಿನ್ ಸೆಟಪ್ ಹೊಂದಿವೆ.

5/5

5. ಟಾಟಾ ನಿಂದ ಕೂಡ TATA HBX ಬಿಡುಗಡೆ ಸಾಧ್ಯತೆ - ಟಾಟಾ ಮೋಟರ್ಸ್ ಕೂಡ  ಇತ್ತೀಚಿನ ವರ್ಷಗಳಲ್ಲಿ ಹಲವಾರು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಪಾರುಪತ್ಯ ಮೆರೆಯಲು ಪ್ರಯತ್ನಿಸುತ್ತಿದೆ. ಟಾಟಾದ 'ಆಲ್ಫಾ' ಪ್ಲಾಟ್‌ಫಾರ್ಮ್ ಆಧರಿಸಿ, ಈ ಮಿನಿ ಎಸ್‌ಯುವಿ ಟಾಟಾ ಎಚ್‌ಬಿಎಕ್ಸ್,  1.2 ಎಲ್ ಎನ್‌ಎ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು 113 ಎನ್ಎಂ ಗರಿಷ್ಠ ಟಾರ್ಕ್ ನೊಂದಿಗೆ  86 ಪಿಎಸ್ ಶಕ್ತಿಯನ್ನು ಉತ್ಪಾದಿಸುತ್ತದೆ. ನೋಟ ಮತ್ತು ವಿನ್ಯಾಸದ ಬಗ್ಗೆ ಕಂಪನಿಯು ಇನ್ನೂ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.





Read More