PHOTOS

ಭವಿಷ್ಯದಲ್ಲಿ ಈ ರೀತಿ ಕಾಣಿಸಲಿದೆ ನ್ಯೂ ಡೆಲ್ಲಿ ರೈಲು ನಿಲ್ದಾಣ

ಾಣದ ಪುನರಾಭಿವೃದ್ಧಿಗೆ ಉದ್ದೇಶಿತ ವಿನ್ಯಾಸವನ್ನು ಹಂಚಿಕೊಂಡಿದೆ. ಹೊಸದಿಲ್ಲಿ ರೈಲು ನಿಲ್ದಾಣದ ಹಿರಿಮೆಯನ್ನು ಸ್ಪಷ್ಟವಾಗಿ ಅಂದಾಜು ಮಾಡಬಹುದು. ಸಾಮಾಜಿಕ ಜಾಲತಾಣಗಳ...

Advertisement
1/6
ಹೊಸ ದೆಹಲಿ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಪ್ರಸ್ತಾವಿತ ವಿನ್ಯಾಸ
ಹೊಸ ದೆಹಲಿ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಪ್ರಸ್ತಾವಿತ ವಿನ್ಯಾಸ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗ ದೇಶದ ಪ್ರಮುಖ ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡುತ್ತಿದೆ. ಇದೀಗ ರೈಲ್ವೆ ಸಚಿವಾಲಯವು ನವದೆಹಲಿ ರೈಲು ನಿಲ್ದಾಣದ ಮರುಅಭಿವೃದ್ಧಿಗಾಗಿ ಉದ್ದೇಶಿತ ವಿನ್ಯಾಸವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ವಿನ್ಯಾಸದ ಜೊತೆಗೆ, ರೈಲ್ವೆ ಸಚಿವಾಲಯವು, 'ಹೊಸ ಯುಗದ ಆರಂಭ: ಹೊಸ ದೆಹಲಿ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಪ್ರಸ್ತಾವಿತ ವಿನ್ಯಾಸ' ಎಂದು ಬರೆದಿದೆ.

2/6
ಹೊಸ ದೆಹಲಿ ರೈಲು ನಿಲ್ದಾಣ
ಹೊಸ ದೆಹಲಿ ರೈಲು ನಿಲ್ದಾಣ

ಹೊಸ ದೆಹಲಿ ರೈಲು ನಿಲ್ದಾಣದಲ್ಲಿ ಇತರ ಯಾವ ವಿಶೇಷತೆಗಳಿವೆ ಎಂಬ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೆ ಹೊಸ ದೆಹಲಿ ನಿಲ್ದಾಣದ ಈ ಹೊಸ ನೋಟವು ಬಹಳಷ್ಟು ಹೇಳುತ್ತಿದೆ. ಹೊಸ ದೆಹಲಿ ರೈಲು ನಿಲ್ದಾಣವು ತನ್ನ ಹೊಸ ರೂಪವನ್ನು ಪಡೆದಾಗ, ಇದು ಭಾರತದ ಅತಿದೊಡ್ಡ ಮತ್ತು ಆಧುನಿಕ ನಿಲ್ದಾಣವಾಗಲಿದೆ. ಈ ನಿಲ್ದಾಣವು ಆಧುನಿಕ ಸೌಲಭ್ಯಗಳನ್ನು ಹೊಂದಿರಲಿದ್ದು ಹೊಸದಿಲ್ಲಿ ರೈಲು ನಿಲ್ದಾಣವನ್ನು ಎರಡು ದೊಡ್ಡ ಗುಮ್ಮಟದ ಆಕಾರದ ಭಾಗಗಳಾಗಿ ವಿಂಗಡಿಸಲಾಗುವುದು ಎಂದು ಚಿತ್ರಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಗುಮ್ಮಟದ ರಚನೆಯು ನಿಲ್ದಾಣದ ಹೊಸ ಕಟ್ಟಡವಾಗಿದೆ.

3/6
ಹೊಸ ದೆಹಲಿ ರೈಲು ನಿಲ್ದಾಣದ ಹೊಸ ಯೋಜನೆ
ಹೊಸ ದೆಹಲಿ ರೈಲು ನಿಲ್ದಾಣದ ಹೊಸ ಯೋಜನೆ

ಹೊಸ ದೆಹಲಿ ರೈಲು ನಿಲ್ದಾಣದ ಹೊಸ ಯೋಜನೆಯಲ್ಲಿ, ನಿಲ್ದಾಣದ ಆವರಣ ಮತ್ತು ವಾಣಿಜ್ಯ ಅಭಿವೃದ್ಧಿ ಅಡಿಯಲ್ಲಿ ಇದನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ನಿಲ್ದಾಣದ ಸಂಕೀರ್ಣದ ಅಡಿಯಲ್ಲಿ, ಆಧುನಿಕ ಸೌಲಭ್ಯಗಳೊಂದಿಗೆ ಹೊಸ ಗುಮ್ಮಟದ ಆಕಾರದ ಕಟ್ಟಡವನ್ನು ನಿರ್ಮಿಸಲಾಗುವುದು. ಇದು ಆಗಮನ ಮತ್ತು ನಿರ್ಗಮನದ ಎರಡು ಮಾರ್ಗಗಳನ್ನು ಹೊಂದಿರುತ್ತದೆ. ಅಷ್ಟೇ ಅಲ್ಲ ಹೊಸ ರೈಲ್ವೆ ಕಟ್ಟಡ, ರೈಲ್ವೆ ಕಚೇರಿಗಳು, ರೈಲ್ವೆ ಕ್ವಾರ್ಟರ್ಸ್ ಕೂಡ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ.

4/6
ನಿಲ್ದಾಣದ ಆವರಣದೊಂದಿಗೆ ಹೋಟೆಲ್‌ಗಳು ಮತ್ತು ವಸತಿ ಸಂಕೀರ್ಣಗಳನ್ನು ಸಹ ನಿರ್ಮಿಸಲಾಗುವುದು
ನಿಲ್ದಾಣದ ಆವರಣದೊಂದಿಗೆ ಹೋಟೆಲ್‌ಗಳು ಮತ್ತು ವಸತಿ ಸಂಕೀರ್ಣಗಳನ್ನು ಸಹ ನಿರ್ಮಿಸಲಾಗುವುದು

ಮತ್ತೊಂದೆಡೆ, ನಿಲ್ದಾಣದ ಆವರಣದೊಂದಿಗೆ ಹೋಟೆಲ್‌ಗಳು ಮತ್ತು ವಸತಿ ಸಂಕೀರ್ಣಗಳನ್ನು ಸಹ ನಿರ್ಮಿಸಲಾಗುವುದು. ಎರಡು ಬಹು ಮಾದರಿ ಸಾರಿಗೆ ಕೇಂದ್ರಗಳು, 40 ಅಂತಸ್ತಿನ ಅವಳಿ ಗೋಪುರಗಳು ಮತ್ತು ಪಾದಚಾರಿಗಳ ಅನುಕೂಲಕ್ಕಾಗಿ ಪ್ರತ್ಯೇಕ ವಾಕ್‌ವೇಗಳನ್ನು ಸರಕು ಸಾಗಣೆಗಾಗಿ ನಿಲ್ದಾಣದ ಎರಡೂ ಬದಿಯಲ್ಲಿ ನಿರ್ಮಿಸಲಾಗುವುದು.

5/6
ಅಮೃತ್ ಕಾಲ್ ನಿಲ್ದಾಣ
ಅಮೃತ್ ಕಾಲ್ ನಿಲ್ದಾಣ

ಈ ಉದ್ದೇಶಿತ ಭವಿಷ್ಯದ ಮಾದರಿಯ ಚಿತ್ರಗಳನ್ನು ರೈಲ್ವೇ ಸಚಿವರು ಅಮೃತ್ ಕಾಲ್ ನಿಲ್ದಾಣ ಎಂದು ವಿವರಿಸಿದ್ದಾರೆ. ಅದೇ ಸಮಯದಲ್ಲಿ, ರೈಲ್ವೆ ಸಚಿವಾಲಯದ ಈ ಟ್ವೀಟ್ ನಂತರ, ಅದರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅಂತರ್ಜಾಲದಲ್ಲಿ ಕೆಲವು ನೆಟಿಜನ್‌ಗಳು ಇದರ ವಿನ್ಯಾಸವನ್ನು ಹೊಗಳಿದ್ದಾರೆ ಮತ್ತು ಇದು ತುಂಬಾ ಸುಂದರವಾಗಿದೆ ಎಂದು ಬಣ್ಣಿಸಿದ್ದಾರೆ. ಆದರೆ, ಇನ್ನೂ ಕೆಲವು ನೆತಿಜನ್ಗಳು ಇಂತಹ ವಿಚಿತ್ರ ವಿನ್ಯಾಸದ ಅವಶ್ಯಕತೆ ಇರಲಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದೇ ಸಮಯದಲ್ಲಿ, 'ಹೊಸ ದೆಹಲಿಯ ಬಿಸಿಯಲ್ಲಿ ಗಾಜಿನ ಕಟ್ಟಡ' ಎಂದು ಬಳಕೆದಾರರು ಬರೆದಿದ್ದಾರೆ, ಅಭಿವೃದ್ಧಿಯನ್ನು ತೋರಿಸುವ ಹೆಸರಿನಲ್ಲಿ ಅಂತಹ ಸೌಂದರ್ಯಕ್ಕಾಗಿ ಹಣವನ್ನು ವ್ಯರ್ಥ ಮಾಡುತ್ತಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕೆಲವು ಬಳಕೆದಾದರು ಬರೆದಿದ್ದಾರೆ.   

6/6
ನ್ಯೂಡೆಲ್ಲಿ ರೈಲು ನಿಲ್ದಾಣ
ನ್ಯೂಡೆಲ್ಲಿ ರೈಲು ನಿಲ್ದಾಣ

ಪ್ರಸ್ತುತ ನ್ಯೂಡೆಲ್ಲಿ ರೈಲು ನಿಲ್ದಾಣವು ಈ ರೀತಿ ಕಾಣುತ್ತಿದೆ. ಭಾರತೀಯ ರೈಲ್ವೇ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಂಚಿಕೊಂಡಿರುವ ಪ್ರಸ್ತಾವಿತ ಮಾದರಿ ಈಗ ಚರ್ಚೆಯ ವಿಷಯವಾಗಿದೆ.





Read More