PHOTOS

Vastu Tips: ಸೂರ್ಯಾಸ್ತದ ಬಳಿಕ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ, ಮಾಡಿದ್ರೆ ದಾರಿದ್ರ್ಯ ಒಕ್ಕರಿಸುವುದು ಪಕ್ಕಾ..!

Vastu Tips: ಹಿಂದೂ ಧರ್ಮದಲ್ಲಿ, ಸಂಪತ್ತಿನ ದೇವತೆ ತಾಯಿ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳುವ ಬಗ್ಗೆ ಹಲವು ನಂಬಿಕೆಗಳಿವೆ. ಅದರಂತೆ ಸಂಜೆ ಸೂರ್ಯಾಸ್ತದ ಬಳಿಕ ಕೆಲವು...

Advertisement
1/8
ವಾಸ್ತು ಶಾಸ್ತ್ರ
ವಾಸ್ತು ಶಾಸ್ತ್ರ

ವಾಸ್ತು ಶಾಸ್ತ್ರದಲ್ಲಿ, ಮನೆಯ ಅಭಿವೃದ್ದಿ ಏಳ್ಗೆಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. 

2/8
ಸೂರ್ಯಾಸ್ತದ ಬಳಿಕ ಕೆಲಸಗಳಿಗೆ ನಿಷಿದ್ಧ
ಸೂರ್ಯಾಸ್ತದ ಬಳಿಕ ಕೆಲಸಗಳಿಗೆ ನಿಷಿದ್ಧ

ವಾಸ್ತು ಪ್ರಕಾರ, ಸೂರ್ಯಾಸ್ತದ ಬಳಿಕ ಕೆಲವು ಕೆಲಸಗಳನ್ನು ಮಾಡುವುದನ್ನಿ ನಿಷೇಧಿಸಲಾಗಿದ್ದು, ಈ ಕೆಲಸಗಳನ್ನು ಮಾಡುವುದರಿಂದ ಮನೆಯಲ್ಲಿ ದಾರ್ರಿದ್ಯ ಬರುತ್ತದೆ. ಅಂತಹ ಮನೆಯಲ್ಲಿ ಸಂಪತ್ತಿನ ಅಧಿದೇವತೆ ಲಕ್ಷ್ಮಿ ಕ್ಷಣಮಾತ್ರವೂ ನಿಲ್ಲುವುದಿಲ್ಲ ಎನ್ನಲಾಗುತ್ತದೆ. 

3/8
ಉಗುರು ಕತ್ತರಿಸುವುದು
ಉಗುರು ಕತ್ತರಿಸುವುದು

ವಾಸ್ತು ಪ್ರಕಾರ, ಸಂಜೆ ಸೂರ್ಯ ಮುಳುಗಿದ ಬಳಿಕ ಉಗುರು ಕತ್ತರಿಸಬಾರದು. ಇದರಿಂದ ಲಕ್ಷ್ಮಿ ಕೋಪಗೊಳ್ಳುವಳು, ಮಾತ್ರವಲ್ಲ ಅಂತಹ ಮನೆಯಲ್ಲಿ ಬಡತನ ತಾಂಡವವಾಡುತ್ತದೆ ಎನ್ನಲಾಗುತ್ತದೆ. 

4/8
ಕಸ ಗುಡಿಸುವುದು
ಕಸ ಗುಡಿಸುವುದು

ಕೆಲವರು ರಾತ್ರಿ ವೇಳೆ ಕಸ ಗುಡಿಸುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಸೂರ್ಯ ಮುಳುಗಿದ ಬಳಿಕ ಕಸ ಗುಡಿಸುವುದರಿಂದ ಸಂಪತ್ತಿನ ಲಕ್ಷ್ಮಿ ಮನೆಯಿಂದ ಹೊರಹೋಗುತ್ತಾಳೆ. ಅಂತಹ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ಪ್ರವೇಶಿಸುತ್ತಾಳೆ ಎನ್ನಲಾಗುತ್ತದೆ. 

5/8
ದಾನ
 ದಾನ

ವಾಸ್ತು ಪ್ರಕಾರ, ಸೂರ್ಯಾಸ್ತದ ಬಳಿಕ ತಾಯಿ ಲಕ್ಷ್ಮಿಗೆ ಸಂಬಂಧಿಸಿದ ಹಾಲು, ಸಕ್ಕರೆ, ಉಪ್ಪಿನಂತಹ ಬಿಳಿ ವಸ್ತುಗಳನ್ನು ಬೇರೆಯವರಿಗೆ ನೀಡಬಾರದು ಅಥವಾ ದಾನ ಮಾಡಬಾರದು. ಅಂತಹ ಮನೆಯಲ್ಲಿ ಹಣಕಾಸಿನ ಬಿಕ್ಕಟ್ಟು ತಲೆದೂರುತ್ತದೆ ಎನ್ನಲಾಗುತ್ತದೆ. 

6/8
ರಾತ್ರಿ ಊಟ ಮಾಡಿದ ಪಾತ್ರೆ
ರಾತ್ರಿ ಊಟ ಮಾಡಿದ ಪಾತ್ರೆ

ಕೆಲವರು ರಾತ್ರಿ ಅಡುಗೆ ಮಾಡಿದ, ಊಟ ಮಾಡಿದ ಪಾತ್ರೆಗಳನ್ನು ಹಾಗೆಯೇ ಇತ್ತು ಮಲಗುತ್ತಾರೆ. ಆದರೆ, ವಾಸ್ತು ಪ್ರಕಾರ, ಈ ಅಭ್ಯಾಸವು ಮನೆಯಲ್ಲಿ ಋಣಾತ್ಮಕತೆಯನ್ನು ಆಕರ್ಷಿಸುತ್ತದೆ. ಇದು ಮನೆಯವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಲ್ಲದೆ, ಮನೆಯ ಶಾಂತಿಗೂ ಭಂಗ ತರುತ್ತದೆ ಎನ್ನಲಾಗುತ್ತದೆ. 

7/8
ಹಣ
ಹಣ

ಸೂರ್ಯಾಸ್ತದ ಬಳಿಕ ಯಾರಿಗೂ ಹಣವನ್ನು ನೀಡಬೇಡಿ. ವಾಸ್ತು ಪ್ರಕಾರ, ಇದು ತಾಯಿ ಲಕ್ಷ್ಮಿಗೆ ಮಾಡುವ ಅವಮಾನವಾಗಿದ್ದು, ಅಂತಹ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ. ಇದರಿಂದ ಮನೆಯಲ್ಲಿ ದಾರಿದ್ರ್ಯ, ಬಡತನ ಬರಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎನ್ನಲಾಗುತ್ತದೆ. 

8/8
ಸೂಚನೆ
ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More