PHOTOS

44 ವರ್ಷದ ಈ ನಟಿ ಮದುವೆಗೆ ಮುಂಚೆಯೇ ಗರ್ಭಿಣಿ..! ಆ ಕೆಲಸ ಮಾಡೋಕೆ 72 ಗಂಟೆಗಳ ಕಾಲಾವಕಾಶ ನೀಡಿದ ಕುಟುಂಬ..

ಈ ನಟಿ ಇತ್ತೀಚೆಗೆ ತಮ್ಮ 44 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸೇನಾ ಕುಟುಂಬದಲ್ಲಿ ಜನಿಸಿದ ನಟಿ ಮಿಸ್ ಇಂಡಿಯಾ ಪಟ್ಟವನ್ನು ಗೆಲ್ಲುವ ಮೂಲಕ ಚಿತ್ರರ...

Advertisement
1/9

ಪ್ರತಿಯೊಬ್ಬ ನಟ ನಟಿಯರಿಗೆ ವೈಯಕ್ತಿಕ ಕಥೆ ಇರುತ್ತದೆ. ಕೆಲವರು ಕಡು ಬಡತನಿಂದ ಬಂದು ಇಂದು ಸ್ಟಾರ್‌ ಪಟ್ಟ ಪಡೆದುಕೊಂಡಿದ್ದರೆ, ಇನ್ನೂ ಕೆಲವರು ಇಂದಿಗೂ ಹೆಸರು ಗಳಿಸಲು ಪ್ರಯತ್ನ ಪಡುತ್ತಿದ್ದಾರೆ. ಅದರಂತೆ ಈ ನಟಿ, ಮಿಸ್ ಇಂಡಿಯಾ ಪಟ್ಟ ಗೆದ್ದು, ಗ್ರ್ಯಾಂಡ್‌ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.. ಆದರೆ ಸೌಂದರ್ಯದ ಹೊರತಾಗಿಯೂ ನಟಿಗೆ ಅಷ್ಟಾಗಿ ಕ್ರೇಜ್‌ ಸಿಗಲಿಲ್ಲ..  

2/9

ಈ ನಟಿ ಮದುವೆಗೆ ಮುನ್ನವೇ ಗರ್ಭಿಣಿಯಾಗುವ ಮೂಲಕ ಕುಟುಂಬಕ್ಕೆ ಶಾಕ್‌ ನೀಡಿದ್ದರು. ಈ ವಿಚಾರ ತಿಳಿದ ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದರು. ಅಷ್ಟೇ ಅಲ್ಲ, ನಟಿಗೆ 72 ಗಂಟೆಗಳ ಕಾಲಾವಕಾಶವನ್ನೂ ನೀಡಿ, ಮದುವೆಯಾಗುವಂತೆ ಒತ್ತಾಯಿಸಿದ್ದರಂತೆ..  

3/9

ಈ ನಟಿ ಬೇರೆ ಯಾರೂ ಅಲ್ಲ, ಖ್ಯಾತ ಬಾಲಿವುಡ್ ತಾರೆ ನೇಹಾ ಧೂಪಿಯಾ. ಇವರು 27 ಆಗಸ್ಟ್ 1980 ರಂದು ಕೇರಳದ ಕೊಚ್ಚಿಯಲ್ಲಿ ಸೇನಾ ಕುಟುಂಬದಲ್ಲಿ ಜನಿಸಿದರು. ಆಕೆಯ ತಂದೆಯ ಹೆಸರು ಪ್ರದೀಪ್ ಸಿಂಗ್ ಧೂಪಿಯಾ ಭಾರತೀಯ ನೌಕಾಪಡೆಯ ಅಧಿಕಾರಿ ಮತ್ತು ತಾಯಿ ಮಣಿಪಿಂದರ್ ಧೂಪಿಯಾ ಗೃಹಿಣಿ.   

4/9

ನೇಹಾ ದೆಹಲಿಯ ನೇವಲ್ ಪಬ್ಲಿಕ್ ಸ್ಕೂಲ್‌ನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಮುಗಿಸಿದರು. ನಂತರ ದೆಹಲಿ ವಿಶ್ವವಿದ್ಯಾಲಯದ ಜೀಸಸ್ ಮತ್ತು ಮೇರಿ ಕಾಲೇಜಿನಲ್ಲಿ ಇತಿಹಾಸದಲ್ಲಿ ಪದವಿ ಪಡೆದರು. ನೇಹಾ ಅವರು ಸೇನಾ ಕುಟುಂಬದಲ್ಲಿ ಜನಿಸಿದರು, ಆದ್ದರಿಂದ ಶಿಸ್ತು ಅವರ ಜೀವನದ ಪ್ರಮುಖ ಭಾಗವಾಗಿತ್ತು.   

5/9

ನೇಹಾ ಮಾಡೆಲಿಂಗ್ ಪ್ರಾರಂಭಿಸಿ, ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲು ನಿರ್ಧರಿಸಿದರು. ಇದಕ್ಕಾಗಿ ಶ್ರಮಿಸಿದರು. 2002 ರ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಫೆಮಿನಾ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದರು. 2002ರಲ್ಲಿ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅಗ್ರ 10 ರಲ್ಲಿ ಸ್ಥಾನ ಪಡೆದರು.  

6/9

ನೇಹಾ 2003 ರಲ್ಲಿ ಖಯಾಮತ್: ಸಿಟಿ ಅಂಡರ್ ಥ್ರೆಟ್ ಚಿತ್ರದ ಮೂಲಕ ಸಿನಿ ಜರ್ನಿ ಪ್ರಾರಂಭಿಸಿದರು. 2004 ರಲ್ಲಿ ತೆರೆಕಂಡ ಜೂಲಿ ಚಲನಚಿತ್ರದಿಂದ ನಟಿ ಮನ್ನಣೆಯನ್ನು ಪಡೆದರು. ನೇಹಾ ಅವರ ವೃತ್ತಿಪರ ಜೀವನಕ್ಕಿಂತ ಅವರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಚರ್ಚೆಗೆ ಕಾರಣವಾಗಿತ್ತು.  

7/9

ನೇಹಾ ಧೂಪಿಯಾ 2018 ರಲ್ಲಿ ತನ್ನ ಆತ್ಮೀಯ ಸ್ನೇಹಿತ ಅಂಗದ್ ಬೇಡಿಯನ್ನು ರಹಸ್ಯವಾಗಿ ವಿವಾಹವಾದರು. ಮದುವೆಗೆ ಮುಂಚೆಯೇ ಗರ್ಭಿಣಿಯಾಗುವುದು ಇದರ ಹಿಂದಿನ ಕಾರಣ. ಮದುವೆಯ ಸ್ವಲ್ಪ ಸಮಯದ ನಂತರ, ಇಬ್ಬರು ಮೆಹರ್ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದರು.  

8/9

ನೇಹಾ ಸಂದರ್ಶನವೊಂದರಲ್ಲಿ ನಾನು ಮದುವೆಗೆ ಮುಂಚೆಯೇ ಗರ್ಭಿಣಿಯಾದೆ. ಈ ವಿಷಯ ತಿಳಿದಾಗ ನಾನು ನನ್ನ ಪೋಷಕರಿಗೆ ಹೇಳಿದೆ. ಆಗ ಅವರು ನನಗೆ ಮದುವೆಯಾಗಲು ಕೇವಲ 72 ಗಂಟೆಗಳ ಸಮಯ ನೀಡಿದರು. ಆಗ ಮುಂಬೈ ತಲುಪಿ ಅಂಗದ್ ಅವರನ್ನು ಮದುವೆಯಾದೆ ಅಂತ ನೇಹಾ ಹೇಳಿದರು.   

9/9

ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಇಬ್ಬರೂ ಇನ್ನೂ ಉದ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಇಬ್ಬರಿಗೂ ಅಪಾರ ಅಭಿಮಾನಿ ಬಳಗವಿದೆ. ಅಲ್ಲದೆ, ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ನೇಹಾ ತಮ್ಮ ಮಗಳು ಮೆಹರ್ ಮತ್ತು ಮಗ ಗುರಿಕ್ ಜೊತೆಗಿನ ಫೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ..   





Read More