PHOTOS

Neech Bhang Rajyog: ಶುಕ್ರನಿಂದ ನೀಚಭಂಗ ರಾಜಯೋಗ, 3 ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ಕೈತುಂಬ ಹಣ

Shukra Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಗ್ರಹವನ್ನು ಐಷಾರಾಮಿ, ಸುಖ-ಸಂಪತ್ತು, ಸಮೃದ...

Advertisement
1/8
ಶುಕ್ರ ಗೋಚಾರ
ಶುಕ್ರ ಗೋಚಾರ

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಐಷಾರಾಮಿ ಜೀವನಕಾರಕ ಶುಕ್ರ ಸೆಪ್ಟೆಂಬರ್ ತಿಂಗಳಿನಲ್ಲಿ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. 

2/8
ರಾಜಯೋಗ
ರಾಜಯೋಗ

ಶುಕ್ರ ಕನ್ಯಾ ರಾಶಿಗೆ ಪ್ರವೇಶಿಸುತ್ತಿದ್ದಂತೆ ನೀಚಭಂಗ ರಾಜಯೋಗ ನಿರ್ಮಾಣವಾಗಲಿದೆ. ಅಷ್ಟೇ ಅಲ್ಲ ಇದರಿಂದ ಕೆಲವರ ಬದುಕಿನಲ್ಲಿ ಶುಕ್ರ ದೆಸೆಯೂ ಆರಂಭವಾಗಲಿದೆ. 

3/8
ನೀಚಭಂಗ ರಾಜಯೋಗ
ನೀಚಭಂಗ ರಾಜಯೋಗ

ನೀಚಭಂಗ ರಾಜಯೋಗ ಎಂದರೆ 'ನೀಚ' ಅರ್ಥಾತ್ ಕೆಟ್ಟ ಗ್ರಹವೊಂದು ತನ್ನ ಪಾಡಿಗೆ ತನ್ನ ಕೆಟ್ಟ ಪ್ರಭಾವವನ್ನು ಕಡಿಮೆ ಮಾಡಿಕೊಂಡು ವ್ಯಕ್ತಿಗೆ ಅದೃಷ್ಟವನ್ನು ತರುವ ಯೋಗ. ಈ ಯೋಗವು ಕಡು ಬಡವನನ್ನೂ ಸಹ ಶ್ರೀಮಂತನನ್ನಾಗಿ ಮಾಡುತ್ತದೆ ಎಂಬ ನಂಬಿಕೆಯಿದೆ.  

4/8
ನೀಚಭಂಗ ರಾಜಯೋಗ ಪ್ರಭಾವ
ನೀಚಭಂಗ ರಾಜಯೋಗ ಪ್ರಭಾವ

ಶುಕ್ರ ಸಂಚಾರದಿಂದ ನಿರ್ಮಾಣವಾಗಲಿರುವ ನೀಚಭಂಗ ರಾಜಯೋಗವು ಕೆಲವು ರಾಶಿಯವರ ಜೀವನದಲ್ಲಿ ಕಷ್ಟದ ದಿನಗಳನ್ನು ಸರಿಸಿ, ಬಂಗಾರದ ಸಮಯವನ್ನು, ಧನಾತ್ಮಕ ಫಲಗಳನ್ನು ನೀಡಲಿದೆ.  

5/8
ಮಿಥುನ ರಾಶಿ
ಮಿಥುನ ರಾಶಿ

ನೀಚಭಂಗ ರಾಜಯೋಗದ ಪ್ರಭಾವದಿಂದಾಗಿ ಈ ರಾಶಿಯವರಿಗೆ ಆದಾಯದ ಮೂಲಗಳು ವೃದ್ಧಿಯಾಗಳಿವೆ. ಕೈ ಹಾಕುವ ಪ್ರತಿ ಕೆಲಸದಲ್ಲೂ ಯಶಸ್ಸು ದೊರೆತು ವೃತ್ತಿ ಜೀವನದಲ್ಲಿ ಅಪಾರ ಕೀರ್ತಿಯನ್ನು ಹೊಂದುವಿರಿ. ನಿಮ್ಮ ಸಂಗಾತಿ, ಕುಟುಂಬ ನೀವು ಮಾಡುವ ಪ್ರತಿ ಕೆಲಸದಲ್ಲೂ ಬೆನ್ನೆಲುಬಾಗಿ ನಿಲ್ಲುತ್ತದೆ. 

6/8
ಸಿಂಹ ರಾಶಿ
 ಸಿಂಹ ರಾಶಿ

ನೀಚಭಂಗ ರಾಜಯೋಗವು ಈ ರಾಶಿಯವರಿಗೆ ದಿಢೀರ್ ಧನಲಾಭವನ್ನು ನೀಡುತ್ತದೆ. ವೃತ್ತಿಯಲ್ಲಿ ಸಮಸ್ಯೆಗಳು ಬಗೆಹರಿದು ಹೊಸ ಜವಾಬ್ದಾರಿ ಹೆಗಲೇರುವುದು. ಉನ್ನತ ಸ್ಥಾನವನ್ನು ಅಲಂಕರಿಸುವಿರಿ.  ಸಮಾಜದಲ್ಲಿ ನಿಮ್ಮ ಸ್ಥಾನವೂ ಹೆಚ್ಚಾಗಲಿದೆ.

7/8
ಧನು ರಾಶಿ
ಧನು ರಾಶಿ

ಶುಕ್ರ ಸಂಚಾರದಿಂದ ನಿರ್ಮಾಣವಾಗಲಿರುವ ನೀಚಭಂಗ ರಾಜಯೋಗದ ಪರಿಣಾಮವಾಗಿ ವೃತ್ತಿ ಜೀವನದಲ್ಲಿ ವಿಶೇಷ ಸ್ಥಾನಮಾನವನ್ನು ನೀಡಲಿದೆ. ವಿದೇಶ ಪ್ರಯಾಣ, ವಾಹನ-ಭೂಮಿ ಖರೀದಿ ಯೋಗವೂ ಇದೆ. ಒಟ್ಟಾರೆ ಇದು ನಿಮಗೆ ಅದೃಷ್ಟದ ಸಮಯ ಎಂದು ಸಾಬೀತುಪಡಿಸಲಿದೆ. 

8/8
ಸೂಚನೆ
ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More