PHOTOS

50 ಸೆಕೆಂಡ್ ಗೆ 5 ಕೋಟಿ.. ಈ ಸೌತ್‌ ಬ್ಯೂಟಿ ಭಾರತದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ !

ಈ ನಟಿ 50 ಸೆಕೆಂಡ್ ಗೆ 5 ಕೋಟಿ ಸಂಭಾವನೆ ಪಡೆಯುವ ಮೂಲಕ ಚಿತ್ರರಂಗದಲ್ಲಿ ಸದ್ದು ಮಾಡಿದ್ದಾರೆ.

...
Advertisement
1/6
ನಯನತಾರಾ
ನಯನತಾರಾ

ಜನಪ್ರಿಯ ನಟಿ. ಖಾಸಗಿ ಜೆಟ್‌ ಹೊಂದಿರುವ ಶ್ರೀಮಂತ ನಾಯಕಿ. ಭಾರತದ ಅತ್ಯಂತ ಶ್ರೀಮಂತ ಹೀರೋಯಿನ್‌ಗಳ ಪಟ್ಟಿಗೆ ಸೇರಿದ ಸೌತ್‌ ಚೆಲುವೆ. ಐಶ್ವರ್ಯಾ ರೈ, ದೀಪಿಕಾ, ಆಲಿಯಾ ಎಲ್ಲರನ್ನೂ ಮೀರಿಸಿ ಸಂಭಾವನೆ ಪಡೆದ ಈ ನಟಿ ದಕ್ಷಿಣ ಭಾರತದ ಲೇಡಿ ಸೂಪರ್‌ ಸ್ಟಾರ್.

2/6
ನಯನತಾರಾ
ನಯನತಾರಾ

ನಯನತಾರಾ ಭಾರತದ ಶ್ರೀಮಂತ ನಟಿ. ದಕ್ಷಿಣ ಭಾರತದ ನಟಿಯರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿ. ಎರಡು ದಶಕಗಳ ತನ್ನ ನಟನಾ ವೃತ್ತಿಜೀವನದಲ್ಲಿ 75 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಯನತಾರಾ ನಟಿಸಿದ್ದಾರೆ.

3/6
ನಯನತಾರಾ
ನಯನತಾರಾ

ನಯನತಾರಾ ಮೊದಲ ಬಾರಿಗೆ 2003 ರಲ್ಲಿ ಮಲಯಾಳಂ ಸಿನಿಮಾ ಮನಸಿನಕ್ಕರೆ ಚಿತ್ರದಲ್ಲಿ ನಟಿಸಿದ್ದರು. ಆ ನಂತರ ಚಂದ್ರಮುಖಿ ಸಿನಿಮಾದಲ್ಲಿ ರಜನಿಕಾಂತ್ ಜೊತೆ ನಟಿಸಿ ಎಲ್ಲರ ಗಮನ ಸೆಳೆದಿದ್ದರು.

4/6
ನಯನತಾರಾ
ನಯನತಾರಾ

ಕಳೆದ ವರ್ಷ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಯನತಾರಾ, ಅಲ್ಲಿಯೂ ತಮ್ಮ ನಟನೆಯ ಮೂಲಕ ಮಿಂಚಿದ್ದರು. ನಯನತಾರಾ ನಟಿ ಮಾತ್ರವಲ್ಲದೆ ನಿರ್ಮಾಪಕಿ ಹಾಗೂ ಉದ್ಯಮಿಯೂ ಹೌದು. ಅವರು ಇತ್ತೀಚೆಗೆ ತಮ್ಮ ಬ್ರ್ಯಾಂಡ್ 9 ಸ್ಕಿನ್ ಅನ್ನು ಪ್ರಾರಂಭಿಸಿದರು. ಫೆಮಿ9 ಎಂಬ ಇನ್ನೊಂದು ಬ್ರಾಂಡ್ ಅನ್ನು ಸಹ ಹೊಂದಿದ್ದಾರೆ.

5/6
ನಯನತಾರಾ
ನಯನತಾರಾ

ನಯನತಾರಾ ಇತ್ತೀಚೆಗೆ ಕೇವಲ 50 ಸೆಕೆಂಡ್‌ನ ಜಾಹಿರಾತಿಗೆ 5 ಕೋಟಿ ಸಂಭಾವನೆ ಪಡೆದಿರುವುದು ಭಾರೀ ಸುದ್ದಿಯಲ್ಲಿದೆ. 'ಟಾಟಾ ಸ್ಕೈ'ನ 50 ಸೆಕೆಂಡ್‌ಗಳ ಜಾಹೀರಾತಿಗೆ ನಯನತಾರಾ ರೂ.5 ಕೋಟಿ ಸಂಭಾವನೆ ಪಡೆದಿದ್ದಾರೆ. 

6/6
ನಯನತಾರಾ
ನಯನತಾರಾ

ನಯನತಾರಾ ಪ್ರತಿ ಚಿತ್ರಕ್ಕೆ 10 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ. ನಯನತಾರಾ 2022 ರಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಮದುವೆಯಾದರು. ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳ ಪೋಷಕರಾದರು. ವರದಿಗಳ ಪ್ರಕಾರ ನಯನತಾರಾ ಒಟ್ಟು 200 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. 





Read More