PHOTOS

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಈ 3 ಅಪಾಯಕಾರಿ ಅಪ್ಲಿಕೇಶನ್‌ಗಳನ್ನು ಈಗಲೇ ಡಿಲೀಟ್ ಮಾಡಿ, ಇಲ್ಲವೇ ತೊಂದರೆಗೆ ಸಿಲುಕುವಿರಿ

Dangerous Apps: ಸಿನೊಪ್ಸಿಸ್ ಸೈಬರ್ ಸೆಕ್ಯುರಿಟಿ ರಿಸರ್ಚ್ ಸೆಂಟರ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಮೂರು ಅಪ್ಲಿಕೇಶನ್‌ಗಳು ಬಳಕೆದಾರರನ್ನು ವಂಚನೆಗೆ ಬಲಿಯಾಗುವ...

Advertisement
1/5
ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಮೂರು ಅಪಾಯಕಾರಿ ಅಪ್ಲಿಕೇಶನ್‌ಗಳಿವು
ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಮೂರು  ಅಪಾಯಕಾರಿ ಅಪ್ಲಿಕೇಶನ್‌ಗಳಿವು

ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಮೂರು  ಅಪಾಯಕಾರಿ ಅಪ್ಲಿಕೇಶನ್‌ಗಳಿವು: ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇತ್ತೀಚಿಗೆ ಅಪಾಯಕಾರಿ ಎಂದು ಪತ್ತೆಯಾಗಿರುವ ಮೂರು ಅಪ್ಲಿಕೇಶನ್‌ಗಳೆಂದರೆ, ಲೇಜಿ ಮೌಸ್, ಟೆಲಿಪ್ಯಾಡ್ ಮತ್ತು ಪಿಸಿ ಕೀಬೋರ್ಡ್. ಈ ಮೂರು ಆ್ಯಪ್‌ಗಳು ಅತ್ಯಂತ ಜನಪ್ರಿಯವಾಗಿದ್ದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ 2 ಮಿಲಿಯನ್ ಡೌನ್‌ಲೋಡ್‌ಗಳನ್ನು ಪಡೆದುಕೊಂಡಿವೆ. ಸಿನೊಪ್ಸಿಸ್ ಸೈಬರ್‌ಸೆಕ್ಯುರಿಟಿ ರಿಸರ್ಚ್ ಸೆಂಟರ್ ಈ ಮೂರು ಅಪ್ಲಿಕೇಶನ್‌ಗಳನ್ನು ಅಪಾಯಕಾರಿ ಎಂದು ಎಚ್ಚರಿಸಿದ್ದು, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಈ 3 ಅಪಾಯಕಾರಿ ಅಪ್ಲಿಕೇಶನ್‌ಗಳಿದ್ದರೆ ಅವುಗಳನ್ನು ಕೂಡಲೇ ಅನ್ ಇನ್ಸ್ಟಾಲ್ ಮಾಡಿ.

2/5
ನಿಮ್ಮ ಫೋನ್‌ನಲ್ಲಿಯೂ ಈ ಮೂರು ಅಪ್ಲಿಕೇಶನ್‌ಗಳಿದ್ದರೆ ಏನು ಮಾಡಬೇಕು?
ನಿಮ್ಮ ಫೋನ್‌ನಲ್ಲಿಯೂ ಈ ಮೂರು ಅಪ್ಲಿಕೇಶನ್‌ಗಳಿದ್ದರೆ ಏನು ಮಾಡಬೇಕು?

ನಿಮ್ಮ ಫೋನ್‌ನಲ್ಲಿಯೂ ಈ ಮೂರು ಅಪ್ಲಿಕೇಶನ್‌ಗಳಿದ್ದರೆ ಏನು ಮಾಡಬೇಕು? ವಾಸ್ತವವಾಗಿ, ಯಾವುದೇ ಸ್ಮಾರ್ಟ್‌ಫೋನ್‌ನಲ್ಲಿ ನಾವು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದಾಗಲೆಲ್ಲ, ಹಲವಾರು ಅನುಮತಿಗಳನ್ನು ಹುಡುಕುವುದು ಕಂಡುಬರುತ್ತದೆ. ಉದಾಹರಣೆಗೆ, ನೀವು ಫೋಟೋ ಎಡಿಟಿಂಗ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದಾಗ, ಅನುಸ್ಥಾಪನೆಯ ಸಮಯದಲ್ಲಿ, ಶೇಖರಣಾ ಸ್ಥಳ, ಫೋಟೋ ಗ್ಯಾಲರಿ, ಕ್ಯಾಮೆರಾ ಮತ್ತು ಮೈಕ್ರೋಫೋನ್‌ಗೆ ಪ್ರವೇಶಕ್ಕಾಗಿ ಪರ್ಮಿಶನ್ ಕೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಕಲಿ ಅಪ್ಲಿಕೇಶನ್ ಈ ನೆಪದಲ್ಲಿ ನಿಮ್ಮಿಂದ ವೈಯಕ್ತಿಕ ಮಾಹಿತಿಯನ್ನು ಕೇಳುತ್ತದೆ. ಅವಸರದಲ್ಲಿ, ನೀವು ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಇಲ್ಲಿ ಹಂಚಿಕೊಂಡಿದ್ದೇ ಆದರೆ, ಎಚ್ಚರಿಕೆ ಅದು ನಿಮ್ಮನ್ನು ಅಪಾಯಕ್ಕೆ ಸಿಲುಕಿಸಬಹುದು.

3/5
ಯಾವುದೇ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡುವ ಮುನ್ನ ಇದನ್ನು ಪರಿಶೀಲಿಸಿ
ಯಾವುದೇ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡುವ ಮುನ್ನ ಇದನ್ನು ಪರಿಶೀಲಿಸಿ

ಯಾವುದೇ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡುವ ಮುನ್ನ ಇದನ್ನು ಪರಿಶೀಲಿಸಿ: ಬೇಕೆಂದಾಗಲೆಲ್ಲಾ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಮೊದಲು ನಿಮಗೆ ಈ ಆ್ಯಪ್‌ ನಿಜಕ್ಕೂ ಅಗತ್ಯವಿದೆಯೇ ಎಂದು ಯೋಚಿಸಿ. ಬಳಿಕ ಅದನ್ನು ಡೌನ್‌ಲೋಡ್ ಮಾಡುವ ಮುನ್ನ ವಿಮರ್ಶೆಯನ್ನು ಪರಿಶೀಲಿಸಿ. ವಿಮರ್ಶೆಯಲ್ಲಿ ಬಳಕೆದಾರರು ಆ ಅಪ್ಲಿಕೇಶನ್ ಬಗ್ಗೆ ತಮ್ಮ ಅನುಭವವನ್ನು ಬರೆದಿರುತ್ತಾರೆ. ಇದರ ಸಹಾಯದಿಂದ ನಿಮಗೆ ಈ ಆ್ಯಪ್‌ ಬೇಕೇ/ಬೇಡವೇ ಎಂದು ನೀವು ನಿರ್ಧರಿಸಬಹುದು.

4/5
ಆ್ಯಪ್ ಅನ್ನು ಎಷ್ಟು ಜನರು ಡೌನ್‌ಲೋಡ್ ಮಾಡಿದ್ದಾರೆ ಎಂದು ಚೆಕ್ ಮಾಡಿ
ಆ್ಯಪ್ ಅನ್ನು ಎಷ್ಟು ಜನರು ಡೌನ್‌ಲೋಡ್ ಮಾಡಿದ್ದಾರೆ ಎಂದು ಚೆಕ್ ಮಾಡಿ

ಆ್ಯಪ್ ಅನ್ನು ಎಷ್ಟು ಜನರು ಡೌನ್‌ಲೋಡ್ ಮಾಡಿದ್ದಾರೆ ಎಂದು ಚೆಕ್ ಮಾಡಿ: ನೀವು ಯಾವುದೇ ಆ್ಯಪ್ ಡೌನ್‌ಲೋಡ್ ಮಾಡುವ ಮುನ್ನ ಅದನ್ನು ಎಷ್ಟು ಜನರು ಡೌನ್‌ಲೋಡ್ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸುವುದು ಕೂಡ ಬಹಳ ಮುಖ್ಯ. ಕಡಿಮೆ ಡೌನ್‌ಲೋಡ್‌ಗಳನ್ನು ಹೊಂದಿರುವ ಆ್ಯಪ್ಗಳನ್ನು ಡೌನ್‌ಲೋಡ್ ಮಾಡದಿರುವುದು ಉತ್ತಮ. ಆದರೆ, ಇತ್ತೀಚಿಗೆ ವರದಿಯೊಂದರಲ್ಲಿ ಅಪಾಯಕಾರಿ ಎಂದು ಹೇಳಲಾಗುತ್ತಿರುವ ಈ ಮೂರು ಆಪ್‌ಗಳು ಲಕ್ಷಾಂತರ ಡೌನ್‌ಲೋಡ್‌ಗಳನ್ನು ಹೊಂದಿವೆ. ಹಾಗಾಗಿ, ಇದನ್ನು ತಪ್ಪಿಸಲು ನೀವು ವಿಮರ್ಶೆಯನ್ನು ಪರಿಶಿಲೀಸುವುದು ಒಳ್ಳೆಯದು.

5/5
ಅಪ್ಲಿಕೇಶನ್‌ನ ವಿವರಣೆಯನ್ನು ತಪ್ಪದೇ ಓದಿ
ಅಪ್ಲಿಕೇಶನ್‌ನ ವಿವರಣೆಯನ್ನು ತಪ್ಪದೇ ಓದಿ

ಅಪ್ಲಿಕೇಶನ್‌ನ ವಿವರಣೆಯನ್ನು ತಪ್ಪದೇ ಓದಿ: ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಯಾವುದೇ ಅಪ್ಲಿಕೇಶನ್‌ನ ಕೆಳಭಾಗದಲ್ಲಿ ಅದರ ಬಗ್ಗೆ ರಚನೆಕಾರರ ವಿವರಗಳನ್ನು ಹಂಚಿಕೊಳ್ಳುತ್ತದೆ. ರಚನೆಕಾರರ ಹೆಸರನ್ನು ಕ್ಲಿಕ್ ಮಾಡುವ ಮೂಲಕ ನೀವು ಈ ವಿವರಣೆಯನ್ನು ವೀಕ್ಷಿಸಬಹುದು. ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಉತ್ತಮ ವಿಮರ್ಶೆ ಹೊಂದಿರುವ ಅಪ್ಲಿಕೇಶನ್‌ಗಳನ್ನು ಮಾತ್ರ ಡೌನ್‌ಲೋಡ್ ಮಾಡಿ.





Read More