PHOTOS

PHOTOS: ಭಾರೀ ಮಳೆಗೆ ತತ್ತರಿಸಿದ ಮುಂಬೈ, ಪೊಲೀಸ್ ಠಾಣೆ ಒಳಗೂ ನುಗ್ಗಿದ ನೀರು

ಂಬೈ ತತ್ತರಿಸಿದೆ. ಮುಂಬೈನಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿದ್ದು ರಸ್ತೆಗಳು, ಶಾಲೆಗಳ...

Advertisement
1/5
ಪೊಲೀಸ್ ಠಾಣೆ ಒಳಗೂ ನುಗ್ಗಿದ ನೀರು
ಪೊಲೀಸ್ ಠಾಣೆ ಒಳಗೂ ನುಗ್ಗಿದ ನೀರು

ಮುಂಬೈನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜನಸಾಮಾನ್ಯರು ಮಾತ್ರವಲ್ಲ, ಪೊಲೀಸರು ಕೂಡ ಪರದಾಡುವಂತಾಗಿದೆ. ಮುಂಬೈನ ಸಾಂತಾ ಕ್ರೂಜ್ ಪ್ರದೇಶದಲ್ಲಿ ಇರುವ ವಕೋಲಾ ಪೊಲೀಸ್ ಠಾಣೆಯಲ್ಲಿ ನೀರು ತುಂಬಿದೆ.

2/5
ಅನೇಕ ಫೈಲ್‌ಗಳು ನಾಶ
ಅನೇಕ ಫೈಲ್‌ಗಳು ನಾಶ

ಪೊಲೀಸ್ ಠಾಣೆ ನೀರಿನಲ್ಲಿ ಮುಳುಗುತ್ತಿರುವ ಹಿನ್ನೆಲೆಯಲ್ಲಿ ಅನೇಕ ಕಡತ(ಫೈಲ್‌)ಗಳು ನಾಶವಾಗಿವೆ ಎಂದು ನಂಬಲಾಗಿದೆ. ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳು ನೀರಿನೊಂದಿಗೆ ಹೇಗೆ ಹೆಣಗಾಡುತ್ತಿದ್ದಾರೆ ಎಂಬುದನ್ನು ಚಿತ್ರಗಳಲ್ಲಿ ನೋಡಬಹುದು.

3/5
ನೀರನ್ನು ತೆಗೆದುಹಾಕಲು ಮುಂದುವರೆದ ಪ್ರಯತ್ನ
ನೀರನ್ನು ತೆಗೆದುಹಾಕಲು ಮುಂದುವರೆದ ಪ್ರಯತ್ನ

ಮುಂಬೈನ ಸಾಂತಾ ಕ್ರೂಜ್ ಪ್ರದೇಶದಲ್ಲಿ ನೆಲೆಗೊಂಡಿರುವ ವಕೋಲಾ ಪೊಲೀಸ್ ಠಾಣೆಯಲ್ಲಿ ನೀರು ತುಂಬಿದ್ದು, ಪೊಲೀಸರೇ ಪರದಾಡುವಂತಾಗಿದೆ. ನೀರು ತೆಗೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ಪೊಲೀಸ್ ಠಾಣೆಯ ಉಸ್ತುವಾರಿ ಹೇಳುತ್ತಾರೆ. ಪೊಲೀಸ್ ಠಾಣೆಯಲ್ಲಿ ನೀರಿನ ಒಳನುಸುಳುವಿಕೆಯಿಂದ ಅನೇಕ ಫೈಲ್‌ಗಳು ಹಾಳಾಗಿರಬಹುದು ಎಂದು ಅವರು ಹೇಳಿದ್ದಾರೆ.

4/5
ಸಂಚಾರ ಅಸ್ತವ್ಯಸ್ತ
ಸಂಚಾರ ಅಸ್ತವ್ಯಸ್ತ

ಮುಂಬೈನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಸ್ತೆ ತುಂಬಾ ನೀರು ತುಂಬಿದ್ದು, ಸಂಚಾರಕ್ಕೆ ತೊಂದರೆ ಉಂಟಾಗಿದೆ. ರೈಲ್ವೆ ಹಳಿಗಳಲ್ಲಿ ನೀರು ತುಂಬಿದ್ದು ಸೆಂಟ್ರಲ್ ಹಾರ್ವರ್‌ನ ಸ್ಥಳೀಯ ರೈಲು ಮತ್ತು ಪಶ್ಚಿಮ ಮುಂಬೈನ  ಮೂರು ಮಾರ್ಗಗಳಲ್ಲಿ ರೈಲುಗಳು ನಿಗದಿತ ಸಮಯಕ್ಕಿಂತ ತಡವಾಗಿ ಚಲಿಸುತ್ತಿವೆ. ಇದಲ್ಲದೆ, ಗೋಚರತೆ ಕಡಿಮೆ ಇರುವುದರಿಂದ, ವಿಮಾನ ಹಾರಾಟದ ಮೇಲೂ ಪರಿಣಾಮ ಬೀರಿದೆ.

5/5
48 ಗಂಟೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ
48 ಗಂಟೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ

ಹವಾಮಾನ ಇಲಾಖೆಯ ಪ್ರಕಾರ ಮುಂಬೈನಲ್ಲಿ ಮುಂದಿನ 48 ಗಂಟೆಗಳ ವರೆಗೆ ಭಾರೀ ಮಳೆಯಾಗುವ ಸಂಭವವಿದೆ. ಈ ಸಂದರ್ಭದಲ್ಲಿ ಜನಸಾಮಾನ್ಯರು ಮನೆಯಿಂದ ಹೊರ ಬರದಂತೆ ಪೊಲೀಸ್ ಇಲಾಖೆ ವತಿಯಿಂದ ಮನವಿ ಮಾಡಲಾಗಿದೆ.





Read More