PHOTOS

ಕೇವಲ 15 ಸಾವಿರ ಬಂಡವಾಳದೊಂದಿಗೆ ಈ ವ್ಯಾಪಾರ ಆರಂಭಿಸಿ, ಲಕ್ಷಾಂತರ ರೂ. ಸಂಪಾದಿಸಿ

ೈಗೆಟುಕುವ ದರದಲ್ಲಿ ಸಾಲವನ್ನು ನೀಡುತ್ತದೆ. ಸ್ಥಗಿತಗೊಂಡಿರುವ ವ್ಯವಹಾರವನ್ನು ಪುನರುಜ್ಜೀವನಗೊಳ...

Advertisement
1/5
ಸ್ಯಾನಿಟರಿ ನ್ಯಾಪ್ಕಿನ್ ವ್ಯಾಪಾರದಲ್ಲಿ ಲಾಭವಾಗುತ್ತದೆ
ಸ್ಯಾನಿಟರಿ ನ್ಯಾಪ್ಕಿನ್ ವ್ಯಾಪಾರದಲ್ಲಿ ಲಾಭವಾಗುತ್ತದೆ

ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಅದರ ವ್ಯವಹಾರವನ್ನು ಮಾಡಿದರೆ, ನಷ್ಟಕ್ಕೆ ಒಳಗಾಗುವ ಪ್ರಮೇಯ ಬರುವುದು ಬಹಳ ವಿರಳ.  ಈ ಉದ್ಯಮವನ್ನು ಆರಂಭಿಸಲು ಸರ್ಕಾರ ನೆರವು ನೀಡುತ್ತದೆ. ಇನ್ನೂ ಪ್ರಮುಖ ವಿಚಾರ ಅಂದರೆ ಕೇವಲ 15,000 ರೂ.ಗಳೊಂದಿಗೆ ಈ ಉದ್ಯಮವನ್ನು ಆರಂಭಿಸಬಹುದು.

2/5
ಮುದ್ರಾ ಯೋಜನೆಯಡಿಯಲ್ಲಿ ಸಾಲ
ಮುದ್ರಾ ಯೋಜನೆಯಡಿಯಲ್ಲಿ ಸಾಲ

ಸ್ಯಾನಿಟರಿ ನ್ಯಾಪ್‌ಕಿನ್‌ ಬಿಸ್ ನೆಸ್ ಶುರು ಮಾಡುವುದಾದರೆ ಸರ್ಕಾರ ನೆರವು ನೀಡುತ್ತದೆ. ಮುದ್ರಾ ಸಾಲ ಯೋಜನೆಯ (Mudra Loan Scheme) ಅಡಿಯಲ್ಲಿ, ಕಡಿಮೆ ಬಡ್ಡಿ ದರದ ಮೇಲೆ ಸಾಲ ನೀಡಲಾಗುತ್ತದೆ. ಈ ವ್ಯವಹಾರವನ್ನು ಆರಂಭಿಸಿದರೆ, ಏನಿಲ್ಲ ಎಂದರೂ ಒಂದು ಲಕ್ಷ ಹತ್ತು ಸಾವಿರ ರೂಗಳಷ್ಟು ಲಾಭ ಪಡೆಯಬಹುದು. ಆದರೆ ನೆನಪಿರಲಿ ಈ ಲಾಭ ಉದ್ಯಮ ಶುರು ಮಾಡಿದ ಮುಂದಿನ ವರ್ಷದಿಂದ ಕೈ ಸೇರಲು ಆರಂಭವಾಗುತ್ತದೆ. 

3/5
ಸಾಲ ಪಡೆದ ಮೇಲೆ ಕೈಯಿಂದ ಹಾಕಬೇಕಾಗುತ್ತದೆ 15 ಸಾವಿರ ರೂ.
ಸಾಲ ಪಡೆದ ಮೇಲೆ ಕೈಯಿಂದ ಹಾಕಬೇಕಾಗುತ್ತದೆ 15 ಸಾವಿರ ರೂ.

ನೀವು ದಿನಕ್ಕೆ 180 ಪ್ಯಾಕೆಟ್‌ಗಳನ್ನು ಉತ್ಪಾದಿಸುತ್ತಿದ್ದರೆ, ಆ ಘಟಕಕ್ಕೆ ಕನಿಷ್ಠ 1.45 ಲಕ್ಷ ರೂ ಬೇಕಾಗುತ್ತದೆ. ಇದರಲ್ಲಿ  90% ಸಾಲವನ್ನು ಮುದ್ರಾ ಯೋಜನೆಯಿಂದ ಪಡೆದುಕೊಳ್ಳಬಹುದು. ಅಂದರೆ 1.30 ಲಕ್ಷ ರೂಗಳಷ್ಟು ಈ ಯೋಜನೆ ಅಡಿಯಲ್ಲಿ ಸಾಲ ಪಡೆಯಬಹುದು. ಅಂದರೆ ಕೇವಲ 15 ಸಾವಿರ ರೂಪಾಯಿಗಳನ್ನು ಮಾಥ್ರ ನೀವು ಕೈಯಿಂದ ಹಾಕಬೇಕಾಗುತ್ತದೆ.   

4/5
ಸ್ಯಾನಿಟರಿ ನ್ಯಾಪ್ಕಿನ್ ಬಿಸ್ ನೆಸ್ ಯೋಜನೆ
ಸ್ಯಾನಿಟರಿ ನ್ಯಾಪ್ಕಿನ್ ಬಿಸ್ ನೆಸ್ ಯೋಜನೆ

ಇದಕ್ಕಾಗಿ ಸರ್ಕಾರ ಒಂದು ಯೋಜನೆಯನ್ನು ಪ್ರಾರಂಭಿಸಿದೆ. ಯೋಜನೆಯ ಪ್ರಕಾರ, ಸ್ಯಾನಿಟರಿ ನ್ಯಾಪ್ಕಿನ್ ಘಟಕಕ್ಕೆ ಸಾಫ್ಟ್ ಟಚ್ ಸೀಲಿಂಗ್ ಯಂತ್ರ, ಕರವಸ್ತ್ರ ಕೋರ್ ಡೈ, ಯುವಿ ಟ್ರೀಟ್ ಯುನಿಟ್, ಡಿಫೈಬ್ರೇಶನ್ ಮೆಷಿನ್, ಕೋರ್ ಮಾರ್ನಿಂಗ್ ಮೆಷಿನ್ ಅಳವಡಿಸಬೇಕಾಗುತ್ತದೆ. ಈ ಎಲ್ಲಾ ವಸ್ತುಗಳ ಬೆಲೆ 70,000 ರೂಗಳಷ್ಟಾಗುತ್ತದೆ. ಯಂತ್ರವನ್ನು ಖರೀದಿಸಿದ ನಂತರ, ಕಚ್ಚಾ ಸಾಮಗ್ರಿಗಳಾದ ಮರದ ತಿರುಳು, ಟಾಪ್ ಲೆಯರ್, ಬ್ಯಾಕ್ ಲೆಯರ್, ರಿಲೀಸ್ ಪೇಪರ್, ಗಮ್, ಪ್ಯಾಕಿಂಗ್ ಕವರ್ ಮುಂತಾದ  ವಸ್ತುಗಳ ವ್ಯವಸ್ಥೆ ಮಾಡಬೇಕಾಗುತ್ತದೆ. ಕಚ್ಚಾ ವಸ್ತುಗಳಿಗೆ ಸುಮಾರು 36,000 ರೂಳಷ್ಟು ವೆಚ್ಚ ತಗಲುತ್ತದೆ.

5/5
ವಾರ್ಷಿಕ ಒಂದು ಲಕ್ಷಕ್ಕಿಂತ ಅಧಿಕ ಲಾಭ
ವಾರ್ಷಿಕ ಒಂದು ಲಕ್ಷಕ್ಕಿಂತ ಅಧಿಕ ಲಾಭ

ಈ ಯೋಜನೆಯನ್ನು ಪ್ರಾರಂಭಿಸುವ ಮೊದಲು, ಲಾಭದ ಬಗ್ಗೆ ಲೆಕ್ಕಾಚಾರ ಹಾಕಿಯೇ ಹಾಕುತ್ತಾರೆ. ನಿಮ್ಮ ಘಟಕವನ್ನು ವರ್ಷದಲ್ಲಿ 300 ದಿನಗಳವರೆಗೆ ನಡೆಸುತ್ತಿದ್ದರೆ, ಸುಮಾರು 54,000 ಸ್ಯಾನಿಟರಿ ನ್ಯಾಪ್ಕಿನ್ ಉತ್ಪಾದಿಸಬಹುದು. ಇದರ ಒಟ್ಟು ವೆಚ್ಚವನ್ನು ನೋಡುವುದಾದರೆ, ವಾರ್ಷಿಕ ಸುಮಾರು 5.9 ಲಕ್ಷ ರೂಗಳು. ವರದಿಯ ಪ್ರಕಾರ, ಒಂದು ಸ್ಯಾನಿಟರಿ ನ್ಯಾಪ್ಕಿನಿನ ಬೆಲೆ 13 ರೂ. ಅಂದರೆ ಒಟ್ಟು 7 ಲಕ್ಷ ರೂ. ಮೊತ್ತದ ನ್ಯಾಪ್ಕಿನ್ ಮಾರಾಟವಾಗುತ್ತದೆ. ಇದರರ್ಥ ನಿಮ್ಮ ಜೇಬಿಗೆ 1 ಲಕ್ಷ ರೂಪಾಯಿಗಳಷ್ಟು ಸಿಗುತ್ತದೆ. 





Read More